ಕಳೆದ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ತಪ್ಪಿದ್ದರಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಆದ್ದರಿಂದ ಕಾಡುಗೊಲ್ಲರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಕಾಡುಗೊಲ್ಲರ ಮುಖಂಡ ಎ ವಿ ಉಮಾಪತಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾತನಾಡಿದರು.
2023 ರ ಚುನಾವಣೆ ಯಲ್ಲಿ ಕಾಡುಗೊಲ್ಲರಿಗೆ ಒಂದು ಟಿಕೇಟ್ ನೀಡುವಂತೆ ಸಮುದಾಯ ದವರು ಕಾಂಗ್ರೆಸ್ ಹೈ ಕಮಾಂಡ್ ಒತ್ತಾಯಿ ಸುತ್ತಿದ್ದು,ಕಳೆದೆರಡು ಬಾರಿಯೂ ಟಿಕೆಟ್ ಕೈ ತಪ್ಪಿದೆ ಈ ಬಾರಿ ಆದರೂ ಕೊಡಬೇಕು,ದೇವರಾಜು ಅರಸ್ ಅವರ ಕಾಲದಿಂದಲೂ ಕಾಡುಗೊಲ್ಲರಿಗೆ ಟಿಕೆಟ್ ಕೊಡಬೇಕು ಎಂದು ಮಾಡಲಾಗಿತ್ತು. ಕಳೆದ ಎರಡು ಮೂರು ಚುನಾವಣೆವರೆಗೂ ಅದು ನಡೆದುಕೊಂಡುಬಂದಿದ್ದು, ಇದೀಗ ಅದು ತಪ್ಪಿದೆ. ಹೈ ಕಮಾಂಡ್ ನಮ್ಮ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ, ಈ ಬಾರಿ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಕೊಡುವಂತೆ ಒತ್ತಾಯಿಸಿದ್ದೇವೆ. ಚಳ್ಳಕೆರೆ ಕ್ಷೇತ್ರ ಬಿಟ್ಟರೆ ಉಳಿದ ಐದು ಕ್ಷೇತ್ರಗಳಲ್ಲೂ ಸೋಲಾಗಿದೆ. ಚಿತ್ರದುರ್ಗ ಜಿಲ್ಲೆಯು ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ. ಆದರೆ ಟಿಕೆಟ್ ಹಂಚಿಕೆಯಲ್ಲಿ ವ್ಯತ್ಯಾಸ ಆಗುವುದರಿಂದ ಹಿನ್ನೆಡೆಯಾಗಿದೆ.ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾವಂತರು ನಮ್ಮಸಮುದಾಯಕ್ಕೆ ಟಿಕೆಟ್ ನೀಡದೆ ಹೋದರೆ ಕಾಂಗ್ರೆಸ್ ಗೆ ಯಾಕೆ ನಾವು ಮತ ಹಾಕಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಿಂದಲೂ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷಕ್ಕೆ ಸಂಪ್ರದಾಯಬದ್ಧ ಮತದಾರರಾಗಿದ್ದೇವೆ. ನಮ್ಮ ಸಮಾಜವನ್ನು ಕಡೆಗಣಿಸಿದರೆ ಸಮಾಜದವರು ಒಂದು ತೀರ್ಮಾನಕ್ಕೆ ಬರುತ್ತಾರೆ. ನಾವೇನೇ ಹೇಳಿದರು ನಮ್ಮ ಹಿಡಿತಕ್ಕೆ ಬರುವುದಿಲ್ಲ,ಆದ್ದರಿಂದ ನಾಳೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಈ ಬಾರಿ ಕಾಡುಗೊಲ್ಲರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸುತ್ತಿದ್ದೇವೆ ಎಂದರು





