ಚಿತ್ರದುರ್ಗ ತಾಲ್ಲೂಕು ಕೋಗುಂಡೆ ಗ್ರಾಮದ ರೇಣುಕಮ್ಮ ಗಂಡ ಕೃಷ್ಣಪ್ಪ (48ವರ್ಷ) ಎಂಬ ಮಹಿಳೆ ಕಾಣೆಯಾದ ಕುರಿತು 2023ರ ಡಿಸೆಂಬರ್ 14 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ಇಂತಿದೆ. ರೇಣುಕಮ್ಮ ಗಂಡ ಕೃಷ್ಣಪ್ಪ, 5 ಅಡಿ ಎತ್ತರ, ಕೋಲು ಮುಖ, ಗೋಧಿ ಬಣ್ಣ ತೆಳುವಾದ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ.
ಈ ಮೇಲ್ಕಂಡ ಮಹಿಳೆಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಭರಮಸಾಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-258421, 9480803163, ಚಿತ್ರದುರ್ಗ ಕಂಟ್ರೋಲ್ ರೂಂ ಸಂಖ್ಯೆ 08194-222782 ಗೆ ಸಂಪರ್ಕಿಸಲು ಪೊಲೀಸ್ ಇಲಾಖೆ ತಿಳಿಸಿದೆ.





