ಚಿತ್ರದುರ್ಗದ ಭರಮಸಾಗರ ಕೋಣನೂರು ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್ ನನ್ನು ಹತ್ಯೆ ಮಾಡಿದ್ದ ಮೂರು ಆರೋಪಿಗಳನ್ನು ಭರಮಸಾಗರ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ. ಉಡುಪಿಯಲ್ಲಿ ಬಂಧಿಸಿರುವ ಆರೋಪಿಗಳನ್ನು ಎ1 ಜಗದೀಶ್,ಎ18 ಹರೀಶ್ ಮತ್ತು ಎ5 ವಿಶ್ವನಾಥ್ ಎಂದು ಗುರುತಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಎ 9 ಕಾವ್ಯ, ಎ 6 ದಿವ್ಯ , ಎ12 ಬಸವರಾಜಪ್ಪ, ಎ 13 ಶಂಕ್ರಮ್ಮ,ಎ 8 ಪ್ರಸನ್ನ ಕುಮಾರ್ ಎಂಬ 6 ಜನರನ್ನು ಬಂಧಿಸಲಾಗಿತ್ತು. ಉಳಿದ 9 ಜನರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.





