Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ
ರಾಜ್ಯ

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ

D KumaraswamyBy D KumaraswamyMay 26, 2024No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ:
ಹುಲಿಕುಂಟೆ ಮೂರ್ತಿ

 

 

‘ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಮಾಡಿರುವ ಸಾಹಿತ್ಯ ಕೃಷಿಯನ್ನು ನಾಡಿಗೆ ವಿಸ್ತೃತ ವಾಗಿ ಪರಿಚಯಿಸಬೇಕಾದ ಅಗತ್ಯ ಇದೆ’ ಎಂದು ಅಂಬೇಡ್ಕರ್ ವಾದಿ ಚಿಂತಕ ಡಾ.ಹುಲಿಕುಂಟೆ ಮೂರ್ತಿ ಹೇಳಿದರು.
ನಗರದ ಪತ್ರಕರ್ತರ ‘ಭವನದಲ್ಲಿ ‘ಭಾನುವಾರ ಬಿಕೆ-ಕೆಬಿ ಬಳಗ ಮತ್ತು ಲಂಕೇಶ್ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ‘ಲಕ್ಕೂರು ಆನಂದ ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯುವ ಬರಹಗಾರ ಆನಂದ್ ತನ್ನ ವಯಸ್ಸಿಗೆ ಸಾಹಿತ್ಯ, ಸಂಶೋಧನೆ, ಕಾವ್ಯದಲ್ಲಿ ಮಾಡಿರುವ ಕೆಲಸವನ್ನು ದಶಕಗಳ ಕಾಲ ಬದುಕಿರುವ ಕವಿ, ಸಾಹಿತಿಗಳು ಮಾಡಿ ತೋರಿಸಲಿ. ಆನಂದ್ ಬದುಕಿನ ದಾರಿ ಒಂದಿತ್ತು. ಅದನ್ನು ಗ್ರಹಿಸದೇ ಚಾರಿತ್ರ್ಯಹರಣ ಮಾಡುವವರು, ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಆನಂದ್‌ರಂತ ಪ್ರತಿಭೆಯನ್ನು ಬಿತ್ತು ಬೆಳೆಯುವುದು ನಮಗೆ ಗೊತ್ತಿದೆ’ ಎಂದರು.
ಪ್ರಾಧ್ಯಾಪಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ‘ಪ್ರತಿಯೊಬ್ಬ ಬರಹಗಾರ ನಾರ್ಸಿಸ್ಟ್ ಆಗಿರುತ್ತಾನೆ. ಆನಂದ್ ಕೂಡಾ ಮಹತ್ವಾ ಕಾಂಕ್ಷಿಯಾಗಿದ್ದ. ಶೋಷಿತ ಸಾಮಾಜಿಕ ಹಿನ್ನೆಲೆಯ ಆನಂದ್‌ಗೆ ನನ್ನ ಬರಹಗಳನ್ನು ಗುರುತಿಸಬೇಕು. ಮೆಚ್ಚುಗೆ ಸೂಚಿಸಬೇಕು ಅನ್ನುವ ಮನೋಧೋರಣೆ ಇತ್ತು. ಇದು ತಪ್ಪಲ್ಲ, ಆತ ಮಾಡಿರುವ ಕಾವ್ಯ, ಸಂಶೋಧನೆ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ’ ಎಂದರು.
ಆಧುನಿಕ ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ಮಾತನಾಡಿ‘ಹಳ್ಳಿಯ ಜಾತಿ ವ್ಯವಸ್ಥೆ ತನಗೆ ಅನವಾದ ಜಾತಿಗಳು ಹೀಗೆ ವರ್ತಿಸಬೇಕು, ನಡೆದುಕೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ಈ ಜಾತಿಯ ವಿಕಾರ ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೂ ವಿಸ್ತರಿಸಿದೆ. ಆನಂದ್‌ರ ಸಾವಿನ ಸುತ್ತ ವ್ಯಕ್ತವಾದ ಅಭಿಪ್ರಾಯಗಳು ಇದನ್ನು ಹೇಳುತ್ತಿವೆ. ಇದು ಬದಲಾಗಬೇಕು’ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಕಾರದ ಸದಸ್ಯ ಡಾ.ರವಿಕುಮಾರ್ ನೀಹಾ ಮಾತನಾಡಿ‘ಆನಂದ್ ಅದ್ಭುತ ಜೀವನ ಪ್ರೀತಿಯ ಗೆಳೆಯ. ಸದಾ ಕಾವ್ಯ, ಕಾದಂಬರಿಗಳು ಕುರಿತು ಮಾತನಾಡುತ್ತಿದ್ದ. ಮಾತಂಗ ಮಹಿಳಾ ಸಂಸ್ಕೃತಿ ಕುರಿತು ಅದ್ಭುತ ಪುಸ್ತಕ ಬರೆದಿದ್ದ. ಹೊಸ ಸಂಶೋಧನಾ ಮಾದರಿಗಳನ್ನು ಹುಡುಕುತ್ತಿದ್ದ ಆತನ ಸಂಶೋಧನೆಯ ದಾರಿ, ಅಧ್ಯಯನ ಮಾಡುವ ಪ್ರಕ್ರಿಯೆ ವಿಭಿನ್ನವಾಗಿತ್ತು ಎಂದರು.
ತುಮಕೂರು ವಿವಿ ಪ್ರಾಧ್ಯಾಪಕ ಡಾ.ಬಗ್ಗನಡು ನಾಗಭೂಷಣ ಮಾತನಾಡಿ‘ಆನಂದ್ ಚಿಕ್ಕವಯಸ್ಸಿನಲ್ಲೇ ತೀವ್ರತರವಾಗಿ ಬದುಕಿದ ಬರಹಗಾರ. ಆನಂದ್‌ರ ಬದುಕಿನ ಮೌಲ್ಯಮಾಪನ ಮಾಡುವವರು ನ್ಯಾಯಾಧೀಶರ ಸ್ಥಾನದಲ್ಲೇನೂ ಇರುವುದಿಲ್ಲ. ಮುಂದೊಂದು ದಿನ ಅವರೂ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ. ವ್ಯಕ್ತಿಯ ಸಾವನ್ನು ಬಯಸುವವರು ಮತ್ತು ಸಂಭ್ರಮಿಸುವವರಿಗಿಂತ ಸಾವನ್ನು ಅಗೌರವಿಸುವವರು ಅಪಾಯಕಾರಿಗಳು’ ಎಂದರು.
ಸಾಮಾಜಿಕ ಹೋರಾಟಗಾರ ಕೊಟ್ಟ ಶಂಕರ್ ಕೋಡಿಹಳ್ಳಿ ಸಂತೋಷ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಜಡೇಕುಂಟೆ ಮಂಜುನಾಥ್, ಹೊಳೆಯಪ್ಪ ಸಾಕ್ಯ ಇದ್ದರು.

Share. Facebook Twitter Pinterest LinkedIn Tumblr WhatsApp Email
Previous Articleಭೋವಿ‌ ಜನಾಂಗದಡಿ ನೇರ್ಲಗುಂಟೆ ರಾಮಪ್ಪಗೆ ಎಂಎಲ್ ಸಿ ಮಾಡಲು ಆಗ್ರಹ
Next Article ಬಿಜೆಪಿ ರಾಜ್ಯಾಧ್ಯಕ್ಷರು ಸಚಿವರ ವೈಯಕ್ತಿಕ ತೆಜೋವಧೆ ಮಾಡಬಾರದು
D Kumaraswamy
  • Tumblr

Related Posts

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025

ಛಲವಿದ್ದರೆ ಏನಾದರೂ ಸಾಧಿಸಬಹದು

November 17, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.