ಚಿತ್ರದುರ್ಗದ ಅಂಬೇಡ್ಕರ್ ನಗರದ ನಿವಾಸಿ ದಿವಂಗತ ಕೆ ಶಿವಪ್ಪನವರ ಧರ್ಮಪತ್ನಿ ಮಾಜಿ ನಗರ ಸಭಾ ಸದಸ್ಯ ಸಿ.ಎನ್.ಕುಮಾರ್ ರ ಚಿಕ್ಕಮ್ಮ ಶ್ರೀಮತಿ ಲಕ್ಷ್ಮೀದೇವಿ ಯಾನೇ ಲಕ್ಷ್ಮಮ್ಮ ಸುಮಾರು 58 ವರ್ಷ ಇವರು ಅನಾರೋಗ್ಯದಿಂದ ಬಳತಿದ್ದು ಬುಧವಾರ ರಾತ್ರಿ ಸುಮಾರು 1-30 ಗಂಟೆ ಸುಮಾರಿಗೆ ನಿಧನ ಹೊಂದಿರುತ್ತಾರೆ. ಮೃತರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗವನ್ನು ಆಗಲಿರುತ್ತಾರೆ. ಇಂದು8-8-2024 (ಗುರುವಾರ) ಸಂಜೆ 3ಗಂಟೆಗೆ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹಿಂಭಾಗದ ಎಂಗಮ್ಮನ ಕಟ್ಟೆಯ ರುದ್ರಭೂಮಿ ಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು, ಎಂದು ಕುಟುಂಬದ ಮೂಲದವರು ತಿಳಿಸಿರುತ್ತಾರೆ.
ಶ್ರೀ ಬಸವ ಮೂರ್ತಿ ಮಾದರಚನ್ನಯ್ಯ ಸ್ವಾಮಿಜೀ ಅಂತಿಮ ಸಂದರ್ಶನ ಪಡೆದು
ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಮೃತರ ಪಾರ್ಥಿವ ಶರೀರವನ್ನು ಬುದ್ದ ನಗರದ 4ನೇ ಕ್ರಾಸ್,ಚಿತ್ರದುರ್ಗ ಇಲ್ಲಿ ದರ್ಶನಕ್ಕೆ ಇರಿಸಲಾಗಿತ್ತು.