Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ಭವಿಷ್ಯ ನೀಡಿರುವ ಮುನ್ಸೂಚನೆ ಏನು ಗೊತ್ತಾ?
ರಾಜ್ಯ

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ಭವಿಷ್ಯ ನೀಡಿರುವ ಮುನ್ಸೂಚನೆ ಏನು ಗೊತ್ತಾ?

D KumaraswamyBy D KumaraswamyMarch 22, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ಭವಿಷ್ಯ ನೀಡಿರುವ ಮುನ್ಸೂಚನೆ ಏನು ಗೊತ್ತಾ? 

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಆಮ್‌ ಆದ್ಮಿ ಪಕ್ಷ ಸೇರಿದಂತೆ ಇತರ ಪಕ್ಷಗಳು ಭರ್ಜರಿ ಸಿದ್ಧತೆ ಆರಂಭಿಸಿದೆ.

ಈ ನಡುವೆ ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ.
ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ. ಮಳೆ ಹೇಗಿದೆ ಹಾಗೂ ಯಾವ ಬೆಳೆಗೆ ಬೆಲೆ ಸಿಗುತ್ತದೆ ಎಂಬುದನ್ನೂ ಇವರ ನಿರ್ಧರಿಸುತ್ತಾರೆ.

 

 

ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬಹುದು ಎಂದು ಊಹಿಸಲಾಗಿದೆ. ಸದ್ಯ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ಬೊಂಬೆ ಭವಿಷ್ಯದ ಪ್ರಕಾರ ನಾಯಕತ್ವ ಬದಲಾಗಬಹುದು ಎಂದು ಬೊಂಬೆ ಭವಿಷ್ಯ ನುಡಿದಿದೆ.

ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದ ನಾಯಕತ್ವ ಬದಲಾಗಬಹುದು ಎನ್ನುವುದನ್ನು ಈ ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಯಡಿಯೂರಪ್ಪನವರು ಕೆಳಗಿಳಿದ ಪ್ರಸಂಗ ನಡೆದಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಹನುಮನಕೊಪ್ಪ ಗ್ರಾಮಸ್ಥರು ಮಾಡಿದ್ದ ಈ ಆಚರಣೆಯಲ್ಲಿ ರಾಷ್ಟ್ರನಾಯಕರ ಬೊಂಬೆಯೊಂದು ಉರುಳಿ ಬಿದ್ದಿತ್ತು.

ರಾಷ್ಟ್ರ ನಾಯಕರಿಗೆ ಆಪತ್ತು ಎದುರಾಗಬಹದು ಎಂಬುದನ್ನು ಆ ಮೂಲಕ ಬೊಂಬೆ ಹೇಳಿತ್ತು. ಅದರ ತರುವಾಯಿ ಇಂದಿರಾಗಾಂಧಿ ಹತ್ಯೆ ಕೂಡ ಆಯಿತು. ಸದ್ಯ ರಾಜ್ಯ ರಾಜಕಾರಣದ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ಇದು ನಾಯಕತ್ವ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ. ಈ ಗ್ರಾಮಸ್ಥರು ಅನೇಕ ವರ್ಷಗಳಿಂದ ಈ ಆಚರಣೆ ಮಾಡುತ್ತ ಬಂದಿದ್ದು, ಅನೇಕ ಸಂಗತಿಗಳು ನಿಜ ಕೂಡ ಆಗಿವೆ.

ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಯಾವಾಗ ಬೇಕಾದರೂ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ ಇರುವ ಸಮಯದಲ್ಲೇ ಚುನಾವಣಾ ತಂತ್ರಗಳನ್ನು ರೂಪಿಸಿ ರಾಜ್ಯದಲ್ಲಿ ಜನರ ಮನಸ್ಸು ಗೆಲ್ಲಲು ರಾಜ್ಯ ರಾಜಕೀಯ ಪಕ್ಷಗಳು ಶತ ಪ್ರಯತ್ನ ನಡೆಸುತ್ತಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್‌ ಪ್ರಜಾ ಧ್ವನಿ ಯಾತ್ರೆ ನಡೆಸುತ್ತಿದೆ. ಇನ್ನು ಜೆಡಿಎಸ್‌ ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ನಡೆಸುತ್ತಿದೆ.

ಇನ್ನು ಜೆಡಿಎಸ್‌ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ಆರಂಭಿಸಿದೆ. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೇನು ಬಿಡುಗಡೆಯಾಗ ಬೇಕಿದೆ. ಬಿಜೆಪಿ ರಾಜ್ಯದಲ್ಲಿ ಈ ಬಾರಿ ಗುಜರಾತ್‌ ಮಾದರಿ ಅನುಸರಿಸುವ ಸಾಧ್ಯತೆ ಇದ್ದು, ಇದರಿಂದ ಅನೇಕ ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್‌ ನಾಯಕರು ಹೈ ಕಮಾಂಡ್‌ ಬಿಡುಗಡೆ ಮಾಡಲಿರುವ ಅಭ್ಯರ್ಥಿಗಳ ಪಟ್ಟಿಗಾಗಿ ಕಾದಿದ್ದಾರೆ.

Share. Facebook Twitter Pinterest LinkedIn Tumblr WhatsApp Email
Previous Articleಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ
Next Article ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸಗಳು, ರಾಜ್ಯದಲ್ಲಿ  ಚಮತ್ಕಾರ ಮಾಡಲಿವೆಯಾ? 
D Kumaraswamy
  • Tumblr

Related Posts

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025

ಛಲವಿದ್ದರೆ ಏನಾದರೂ ಸಾಧಿಸಬಹದು

November 17, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.