Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜಕೀಯ»ಕೆರೆ ಹೂಳೆತ್ತಿರುವ ಲೆಕ್ಕ ಪತ್ರ ಜನರ ಮುಂದೆ ಮಂಡಿಸಲಿ
ರಾಜಕೀಯ

ಕೆರೆ ಹೂಳೆತ್ತಿರುವ ಲೆಕ್ಕ ಪತ್ರ ಜನರ ಮುಂದೆ ಮಂಡಿಸಲಿ

D KumaraswamyBy D KumaraswamyApril 26, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ರಾಜ್ಯದ ವಿವಿಧೆಡೆ ಬಿಜೆಪಿ ಶಾಸಕರು ನಲವತ್ತು ಪಸೆಂಟ್ ಪಡೆಯುತ್ತಿದ್ದರೆ, ಹೊಳಲ್ಕೆರೆ ಕ್ಷೇತ್ರದ ಶಾಸಕರು ಶೇ.60ಕ್ಕೂ ಹೆಚ್ಚು ಪರ್ಸೆಂಟ್ ಪಡೆಯುವ ಮೂಲಕ ರಾಜ್ಯದಲ್ಲಿಯೇ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಗಳಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.

ಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷೇತರ ಪುರಸಭಾ ಸದಸ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಎಂ.ಚಂದ್ರಪ್ಪ ಬಾಯಿಬಿಟ್ಟರೆ 300 ಕೆರೆ ಅಭಿವೃದ್ಧಿಗೊಳಿಸಿದ್ದು, ಈ ಕುರಿತು ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ, ಇಲ್ಲಿಯವರೆಗೂ ಶ್ವೇತಪತ್ರ ಇರಲಿ, ಕೆರೆ ಹೂಳು ಎತ್ತುವುದು, ಅಭಿವೃದ್ಧಿಯಲ್ಲಿ ಆಗಿರುವ ಲೆಕ್ಕಪತ್ರ ಜನರ ಮುಂದೆ ಮಂಡಿಸುವ ಧೈರ್ಯ ಮಾಡಿಲ್ಲ. ಆದ್ದರಿಂದಲೇ ಕೆರೆ ಹೂಳೆತ್ತುವುದರಲ್ಲಿ ಆಗಿರುವ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ ಎಂದರು.

ಶೈಕ್ಷಣಿಕ ಕ್ಷೇತ್ರ ಪ್ರಗತಿಗಾಗಿ 800 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಈ ಕುರಿತು ಸ್ಪಷ್ಟನೆ ಕೇಳಿದರೆ ಉಡಾಫೆಯಾಗಿ ಮಾತನಾಡುತ್ತಾರೆ. ಕ್ಷೇತ್ರದಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಒಳಡಿಸಿ, ಭ್ರಷ್ಚರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲಿಕಿದ್ದು, ಎಲ್ಲೆಡೆ ಜನಾಕ್ರೋಶ ತೀವ್ರಗೊಂಡಿದೆ.ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ.ಕ್ಷೇತ್ರದಲ್ಲಿ ಯಾವುದೇ ಗ್ರಾಮಕ್ಕೆ ಹೋದಲ್ಲಿ, ಬಿಜೆಪಿ ಕಾರ್ಯಕರ್ತರು, ಮುಖಂಡರು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರ್ಯಾರು ಕೂಡ ಯಾವುದೇ ಆಮಿಷಕ್ಕೆ ಒಳಗಾಗದೇ, ಷರತ್ತು ವಿಧಿಸದೆ ಪಕ್ಷ ಸೇರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ದುರಾಹಂಕಾರಿ ಚಂದ್ರಪ್ಪನನ್ನು ಸೋಲಿಸಬೇಕು ಎಂಬುದು.ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವ ಎಲ್ಲರನ್ನೂ ಪಕ್ಷ ಬರಮಾಡಿಕೊಳ್ಳಲಿದೆ. ಅವರೆಲ್ಲರನ್ನೂ ಗೌರವದಿಂದ ನಡೆಸಿಕೊಳ್ಳಲಿದೆ ಎಂದರು.

ಪುರಸಭೆ ಸದಸ್ಯ ವಿಜಯಸಿಂಹ ಖಾಟ್ರೋತ್ ಮಾತನಾಡಿ, ಬಿಜೆಪಿ ಪಕ್ಷವನ್ನು 30 ವರ್ಷದಿಂದ ಕಟ್ಟಿ ಬೆಳೆಸಿದ ಅನೇಕ ಕಾರ್ಯಕರ್ತರು, ಮುಖಂಡರನ್ನು ಶಾಸಕ ಚಂದ್ರಪ್ಪ ಅಗೌರವದಿಂದ ನಡೆಸಿಕೊಂಡಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಂಜನೇಯ ಅವಧಿ ಕೆಲಸಗಳನ್ನೇ ನಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ದೂರಿದರು.

 

 

ಶೈಕ್ಷಣಿಕ ಪ್ರಗತಿಗೆ 800 ಕೋಟಿ ರೂ. ಶಾಸಕರ ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರು ತಮ್ಮ ಹೇಳಿಕೆ ಸಾಬೀತು ಪಡಿಸಿದರೆ ನನ್ನ ಪುರಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡ ಬಸವರಾಜ್ ಮಾತನಾಡಿ, ಸಾಮಾನ್ಯ ಕಾರ್ಯನಾಗಿದ್ದ ನನ್ನನ್ನು ಪಕ್ಷದ ವರಿಷ್ಠರು ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದರು. ಆದರೆ, ಕ್ಷೇತ್ರದ ಶಾಸಕರು ನಮ್ಮನ್ನು ಕಾಲ ಕಸಕ್ಕಿಂತ ಕಡೆಯಾಗಿ ನಡೆಸಿಕೊಂಡರು. ಎಲ್ಲದಕ್ಕಿಂತಲೂ ಬೇಸರದ ಸಂಗತಿ ಎಂದರೆ ಅವರು ಬಾಯಿ ತೆರೆದರೆ ಅವಾಚ್ಯ ಶಬ್ಧ ಬಳಸುವುದು ಎಂದು ಹೇಳಿದರು.

ಶಾಸಕರ ಉಡಾಫೆ, ಕೆಟ್ಟ ಪದ ಬಳಕೆ, ಅಹಂಕಾರದಿಂದ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಮ್ಮಂತವರು ಮೂಲೆಗುಂಪು ಆಗಿದ್ದೇವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯದಿಂದ ಜನರಿಗೆ ಉತ್ತರ ಕೊಡಲು ಆಗದಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವುದೇ ಊರಿಗೆ ಹೋದರೂ ನಿಮ್ಮ ಬಿಜೆಪಿ ಶಾಸಕ ಬಹಳ ಅಹಂಕಾರಿ ಎನ್ನುತ್ತಾರೆ. ಇದರಿಂದ ಕಾರ್ಯಕರ್ತರು ಬಹಳ ಮನನೊಂದಿದ್ದಾರೆ ಎಂದರು.

ಕ್ಷೇತ್ರದಲ್ಲಿ ಎಚ್.ಆಂಜನೇಯ ಸಚಿವರಾಗಿದ್ದ ಸಂದರ್ಭ ಪಕ್ಷಾತೀತ, ಜಾತ್ಯತೀತವಾಗಿ ಅನುದಾನ ಹಂಚಿಕೆ ಮಾಡಿ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಆದರೆ, ಈಗಿನ ಶಾಸಕರು, ನಿಮ್ಮೂರಲ್ಲಿ ನನಗೆ ಮತ ಕಡಿಮೆ ಬಂದಿವೆ ಎಂದು ಕೆಲ ಹಳ್ಳಿಗಳನ್ನೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

*ದುಷ್ಟನ ಸಂಹಾರಕ್ಕೆ ಆಂಜನೇಯ*
ಮೇ 10 ಬುಧವಾರ ಮತದಾನ. ಕ್ಷೇತ್ರದ ಬುದ್ಧಿವಂತ ಮತದಾರರು ಚಂದ್ರಪ್ಪನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಮೇ 13 ಶನಿವಾರ ಆಂಜನೇಯನ ವಾರ ವಿಧಾನಸಭಾ ಫಲಿತಾಂಶ ಪ್ರಕಟಗೊಳ್ಳಲಿದೆ. ಅಂದು ಚಂದ್ರಪ್ಪ ಸೋತು, ಆಂಜನೇಯ ಗೆಲುವು ಸಾಧಿಸುವ ಮೂಲಕ ದುಷ್ಟನ ಸಂಹಾರ ಆಂಜನೇಯ ನಡೆಸಲಿದ್ದಾರೆ ಎಂದು ಬಿಜೆಪಿ ತೊರೆದ ಹಿರಿಯ ಮುಖಂಡ ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಉಪಾಧ್ಯಕ್ಷ ಮುರುಘೇಂದ್ರಪ್ಪ, ಬಿದರಕೆರೆ ಗ್ರಾಪಂ ಮಲ್ಲಪ್ಪ, ಮುಖಂಡರಾದ ರಂಗಾಪುರ ರಾಜಶೇಖರ್, ಕುನಗಲಿ ಕುಬೇರಪ್ಪ, ತುಪ್ಪದಹಳ್ಳಿ ದಿನೇಶ್, ಯೋಗಮೂರ್ತಿನಾಯ್ಕ್ ಗುಂಡಿಮಡು ಲಿಂಗರಾಜ್, ವೇದಮೂರ್ತಿ ಉಪಸ್ಥಿತರಿದ್ದರು

Share. Facebook Twitter Pinterest LinkedIn Tumblr WhatsApp Email
Previous Articleಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಲಾಗುತ್ತದೆ: ಪ್ರಿಯಾಂಕ ಗಾಂಧಿ
Next Article ಸುವರ್ಣ ಯುಗ ಹೊಳಲ್ಕೆರೆಗೆ ಮರುಕಳಿಸಲಿದೆ
D Kumaraswamy
  • Tumblr

Related Posts

ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕ ದೂರ; ತಂತ್ರಾಂಶ ಕಾರ್ಯಾರಂಭ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

November 12, 2025

ಪ್ರಧಾನಿ ಮೋದಿಯವರದ್ದು ಕಳಂಕರಹಿತ ರಾಜಕಾರಣ: ಛಲವಾದಿ ನಾರಾಯಣಸ್ವಾಮಿ

June 12, 2025

ಬಿಜೆಪಿಯಲ್ಲಿ ಚಿತ್ರದುರ್ಗ ಲೋಕಸಭೆಗೆ ಅಚ್ಚರಿ ಅಭ್ಯರ್ಥಿ ಯಾರು?

March 21, 2024

ಎಲ್ಲೆಲ್ಲೂ ಸ್ಥಳೀಯ ಅಭ್ಯರ್ಥಿ ಕೂಗು : ಡಾ.ಬಿ .ತಿಪ್ಪೇಸ್ವಾಮಿ ಫುಲ್ ರೌಂಡ್ಸ್

February 24, 2024
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.