ಮಹಿಳೆಯರಿಗೆ ಆಶ್ಲೀಲ ಫೋಟೋ ಹಾಗೂ ಸಂದೇಶ ರವಾನಿಸುತ್ತಿದ್ದ 55 ವರ್ಷದ ವ್ಯಕ್ತಿ ಬಂಧನ
ಚಿತ್ರದುರ್ಗ,ನ07(ಸಂವಾ)- ಮಹಿಳೆಯರಿಗೆ ಆಶ್ಲೀಲ ಫೊಟೋ ಹಾಗೂ ಸಂದೇಶಗಳನ್ನು ರವಾನಿಸುತ್ತಿದ್ದ 55 ವರ್ಷದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತ್ಯಾಗರಾಜ ನಗರದ ರಾಮಕೃಷ್ಣ (55) ಎಂಬ ವ್ಯಕ್ತಿಯೂ ಸುಮಾರು 200 ಕ್ಕೂ ಹೆಚ್ಚು ಮಹಿಳೆಯರಿಗೆ ಆಶ್ಲೀಲ ಸಂದೇಶ ಹಾಗೂ ಫೋಟೋ ರವಾನೆ ಮಾಡುತ್ತಿದ್ದ, ಆದರೆ ಮರ್ಯಾದೆಗೆ ಅಂಜಿ ಈ ಮಹಿಳೆಯರ್ಯಾರು ದೂರು ನೀಡಿರಲಿಲ್ಲ. ಪೋಲಿಸರು ಸಾರ್ವಜನಿಕರ ಮಾಹಿತಿ ಮೇರೆಗೆ ದೂರು ದಾಖಲಿಸಿಕೊಂಡು ಮೋಬೈಲ್ ಟವರ್ ಹಾಕಿ ರಾಮಕೃಷ್ಣನನ್ನು ಬಂಧಿಸುವ ಸಮಯದಲ್ಲಿ ಕಾಂಪೌಂಡ್ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರಾಮಕೃಷ್ಣ ನಿಗೆ 14 ದಿನಗಳ ನ್ಯಾಯಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.
ಸಂಯುಕ್ತವಾಣಿ
ಡಿ.ಕುಮಾರಸ್ಚಾಮಿ




