ಚಳ್ಳಕೆರೆ:ಯುವಕರಲ್ಲಿ ಕಲಾತ್ಮಕ ಅಭಿನಯ ಮತ್ತು ಕಂಠಸಿರಿ ಇದ್ದರೆ ಭವಿಷ್ಯದಲ್ಲಿ ಅವಕಾಶಗಳು ತಾನಾ ಗಿಯೇ ಹುಡುಕಿಕೊಂಡು ಬರುತ್ತವೆ ಅದರಲ್ಲೂ ಚಿತ್ರದ ಜಿಲ್ಲೆಯ ಯುವಕರಿಗೆ ವಿಫಲವಾದ ಅವಕಾಶಗಳಿದ್ದು ತಮ್ಮ ಪ್ರತಿಭೆಗಳ ಮುಖಾಂತರ ಬೆಳ್ಳಿತೆರೆಗೆ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ಎನ್ ದೇವರಳ್ಳಿ ಪಂಚಾಯಿತಿಯ ಗ್ರಾಮದಲ್ಲಿ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಗಂಡು ಮೆಟ್ಟಿನ ನಾಡಿಗೆ ಹೆಸರುವಾಸಿಯಾಗಿದೆ ಇಲ್ಲಿನ ಯುವಕರಿಗೆ ಅಂಗಸೌಸ್ಟವ ಮತ್ತು ಕಂಠಸಿರಿ ವರದಾನವಾಗಿದೆ, ಇನ್ನು ಹೆಚ್ಚು ಹೆಚ್ಚು ನೈಪುಣ್ಯದ ಅಭಿನಯದ ಅವಶ್ಯಕತೆ ಇದೆ ಕಲೆಯ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೆಯೇ ಇಲ್ಲಿನ ಯುವಕರಿಗೆ ತರಾಸು ಬರದಿರುವ ಐತಿಹಾಸಿಕ ಕೃತಿಗಳು ಪ್ರೇರಣೆ ಯಾಗಬೇಕು. ಇವುಗಳು ಮನುಷ್ಯನಲ್ಲೇ ಗಟ್ಟಿತನವನ್ನು ಮೂಡಿಸುತ್ತದೆ ಪ್ರತಿಯೊಂದು ಮನೆಯಲ್ಲೂ ಕೂಡ ಇಂತಹ ಕೃತಿಗಳನ್ನು ಇಟ್ಟು ಅಧ್ಯಯನ ಮಾಡಲು ಮಕ್ಕಳಿಗೆ ಪ್ರೇರೇಪಣೆಗೊಳಿಸಬೇಕು ನಿರಂತರ ಕಲಿಕಾ ಅಭ್ಯಾಸದಿಂದ ನಾಟಕರಂಗದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಬಹುದು ಪ್ರತಿಯೊಂದು ಮನೆಯಲ್ಲಿನ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಪ್ರಜೆಯನ್ನಾಗಿ ಮಾಡಲು ಕಂಕಣ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟೇಮ್ ಲಿಂಗಯ್ಯ ಮಾತನಾಡಿ, ನಮ್ಮ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು 4 ಎಕರೆ ಮೂರು ಗುಂಟೆ ಜಮೀನು ವಶಪಡೆದ ತಹಸೀಲ್ದಾರ್ ಅವರ ಕಾರ್ಯ ಶ್ಲಾಘನೀಯ ನಮ್ಮ ಗ್ರಾಮದಲ್ಲಿನ ಸಾಕಷ್ಟು ಸಮಸ್ಯೆಗಳನ್ನು ತಹಶೀಲ್ದಾರ್ ಬಗೆಹರಿಸಿದ್ದು ಗ್ರಾಮಸ್ಥರ ಪರವಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎನ್ ದೇವರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾಕ್ಟರ್ ಕಾಟಮ ಲಿಂಗಯ್ಯ ಶಿಕ್ಷಕರಾದ ಮಹಾಂತೇಶ್ ಗ್ರಾಮ ಪಂಚಾಯತಿ ಸದಸ್ಯರಾದ ರಾಜಣ್ಣ ಭೋವಿ ಸಮಾಜದ ಮುಖಂಡರಾದ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.





