ಮೊಳಕಾಲ್ಮೂರಿನ ಪರಿಶಿಷ್ಟ ಪಂಗಡ ಬಾಲಕರ ಹಾಸ್ಟೆಲ್ ನ ವಾರ್ಡನ್ ಕೇಶವಮೂರ್ತಿ
ಅವರನ್ನು ಅಮಾನತು ಗೊಳಿಸಿ ಆದೇಶಿಸಿದ ಸಿ ಇ ಓ ದಿವಾಕರ್
ದಿನಾಂಕ.02.02.2023 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೊಳಕಾಲ್ಮೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ದಿವಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಮೊಳಕಾಲ್ಮೂರು ಪಟ್ಟಣದ ಪರಿಶಿಷ್ಟ ಪಂಗಡದ ಹಾಸ್ಟೆಲಿಗೆ ಭೇಟಿ ನೀಡಿದ್ದರು, ಈ ಸಮಯದಲ್ಲಿ
ದಾಸ್ತಾನು ಮತ್ತು ವಿತರಣೆ ದಾಖಲಾತಿಗಳನ್ನ ಪರಿಶೀಲಿಸಿದ್ದರು, ಆಗ ಹಾಸ್ಟೆಲಿನ ವಾರ್ಡನ್ ಕೇಶವ ಮೂರ್ತಿ ದಾಸ್ತಾನಿನಲ್ಲಿ 21ಕ್ವಿಂಟಲ್ ಅಕ್ಕಿಯಿದೆ ಎಂದು ಸುಳ್ಳು ಲೆಕ್ಕ ನಮೂದಿಸಿದ್ದು,
ಸದರಿ ದಾಸ್ತಾನು ಕೊಠಡಿಯಲ್ಲಿ ಪರಿಶೀಲಿಸಿದಾಗ ಒಂದು ಕ್ವಿಂಟಲ್ ಮಾತ್ರ ಅಕ್ಕಿ ಕಂಡು ಬಂದಿತ್ತು. ಇದರ ಬಗ್ಗೆ ವಿಚಾರಿಸಿದಾಗ ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ದಾಸ್ತಾನಿನಲ್ಲಿ ಅಕ್ಕಿ ಇತ್ತು ಹಾಗಾಗಿ ಸಹಿ ಮಾಡಿರುತ್ತೇನೆ ಆದರೆ ಇಂದು ಅಕ್ಕಿ ಇಲ್ಲ ಎಂದು ತಿಳಿಸಿದ್ದರು.ಈ ಹಿಂದೆ ST ಹಾಸ್ಟೆಲ್ ವಾರ್ಡನ್ ಆಗಿದ್ದ ಇದೇ ಕೇಶವಮೂರ್ತಿ ಪಟ್ಟಣದ ಕನಕ ಪತ್ತಿನ ಸಹಕಾರ ಸಂಘಕ್ಕೆ 3 ಲಕ್ಷ ಕ್ಕಿಂತ ಮೇಲ್ಪಟ್ಟು ಹಣವನ್ನು ಜಮಾ ಮಾಡಿ, ಸಂಬಂಧಿಸಿದ ಸರಬರಾಜುದಾರರಿಗೆ ದಾಸ್ತಾನು ಹಣ ಜಮಾ ಮಾಡದೆ, ತಾನೇ ಸ್ವತಃ ಬಿಡಿಸಿಕೊಂಡಿರುವ ಬಗ್ಗೆ ದಾಖಲಾತಿಗಳು ಲಭ್ಯವಾಗಿರುತ್ತವೆ.
ಒಟ್ಟಾರೆ ಪರಿಶೀಲಿಸಿದಾಗ 20 ಕ್ವಿಂಟಲ್ ಅಕ್ಕಿ ಮತ್ತು ಹಣ ದುರುಪಯೋಗ ವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು.ವಾರ್ಡನ್ ಕೇಶವಮೂರ್ತಿಯನ್ನು ಸರ್ಕಾರದ ಅನುದಾನ ದುರ್ಬಳಕೆ ಹಾಗೂ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಇವರನ್ನು ತಕ್ಷಣದಿಂದಲೇ ಅಮಾನತು ಮಾಡಿ ಸಿಇಒ ದಿವಾಕರ್ ಆದೇಶಿಸಿದ್ದಾರೆ.





