ಹೊಳಲ್ಕೆರೆ,ಅ 18 : ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಿ ಆರೋಗ್ಯವಂತರಾಗಿರುವಂತೆ ವಿದ್ಯಾರ್ಥಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ, ಭರಮಸಿರಿ ಸಂಚಿಕೆ-2
ಬಿಡುಗಡೆಗೊಳಿಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಅಧ್ಯಾಪಕರುಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಪಡೆಯಬಹುದು. ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಪಡೆದವರಿಗೆ 50 ಸಾವಿರ ರೂ.ಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದೆ. ಅದರಂತೆ ಪ್ರಥಮ ರ್ಯಾಂಕ್ ಗಳಿಸಿದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೋರ್ವರಿಗೆ ಐವತ್ತು ಸಾವಿರ ರೂ.ಗಳನ್ನು ಸ್ವಾತಂತ್ರ್ಯ ದಿನದಂದು ನೀಡಿದೆ. ನಮ್ಮ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಯಾರಾದರೂ ಪ್ರಥಮ ರ್ಯಾಂಕ್ ಪಡೆದರೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಘೋಷಿಸಿದರು.
1994 ರಲ್ಲಿ 10 ಎಕರೆ ಜಾಗ ಖರೀಧಿಸಿ ಈ ಕಾಲೇಜು ಮತ್ತು ಐಟಿಐ. ಕಾಲೇಜು ಕಟ್ಟಿಸಿದೆ. ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಈ ಕಾಲೇಜು ಅತ್ಯುತ್ತಮವಾಗಿದೆ. ಇಲ್ಲಿನ ಬೋಧಕರು ಗುಣಮಟ್ಟದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಶಿಕ್ಷಣದ ಜೊತೆ ಯೋಗ, ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಕೊಂಡು ಸದೃಢವಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್.ಎಸ್.ಎಸ್. ಎಂದರೆ ಶ್ರಮದಾನ, ಸೇವಾ ಮನೋಭಾವನೆಯುಳ್ಳದ್ದು, ಈ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಪ್ರಶಸ್ತಿ ಪಡೆದಿರುವುದು ಎಲ್ಲರಿಗೂ ಕೀರ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಶಿಕಲಾ ಎಸ್. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ. ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಲೋಕೇಶ್ನಾಯ್ಕ, ಕಾಲೇಜು ಅಭಿವೃದ್ದಿ ಸಂಸ್ಥೆ ಸದಸ್ಯರುಗಳಾದ ಮಂಜುನಾಥ್, ಕಲ್ಲೇಶ್, ಕರಿಯಮ್ಮ, ನಿರ್ಮಲ, ಬೋಧಕ, ಬೋಧಕೇತರ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಫೋಟೋ ವಿವರಣೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಭರಮಸಿರಿ ಸಂಚಿಕೆ-2 ಬಿಡುಗಡೆಗೊಳಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿದರು. ಫೋಟೋ-02.
ಫೋಟೋ ವಿವರಣೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಭರಮಸಿರಿ ಸಂಚಿಕೆ-2 ಬಿಡುಗಡೆಗೊಳಿಸಿದರು. ಫೋಟೋ-03.
ಹೊಳಲ್ಕೆರೆ : ನೀವುಗಳು ಯಾವ ಜಾಗದಲ್ಲಿ ಹೇಳುತ್ತೀರೋ ಅಲ್ಲಿ ಗುರುಸಿದ್ದರಾಮೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ. ಅದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಬದ್ದನಾಗಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ವಾಗ್ದಾನ ಮಾಡಿದರು.
ಜ.14 ಮತ್ತು 15 ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ಗುರುಸಿದ್ದರಾಮೇಶ್ವರರ 853 ನೇ ಜಯಂತಿ ಪ್ರಯುಕ್ತ ಸಂವಿಧಾನಸೌಧದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗುರುಸಿದ್ದರಾಮೇಶ್ವರರು ಕೇವಲು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ಎಲ್ಲಾ ಜಾತಿಯವರು ಭಕ್ತಿಯಿಂದ ಪೂಜಿಸುತ್ತಾರೆ. 2008 ಎಲ್ಲಿ ಹೊಳಲ್ಕೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಂಡು ಮೆರಗು ಕೊಟ್ಟಿದ್ದರು. ಅದೆ ರೀತಿ ಗುರುಸಿದ್ದರಾಮೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ನೀವುಗಳು ನನಗೆ ಸೂಚಿಸುವುದನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ಜಯಂತಿಗೆ ಯಾವ ಕೊರತೆಯೂ ಆಗದಂತೆ ಆಚರಿಸೋಣ. ಅದಕ್ಕಾಗಿ ನಿಮ್ಮ ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಸಹಾಯ ಮಾಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಯಲ್ಲಿ ಮನವಿ ಮಾಡಿದರು.
ಬೆಟ್ಟದಹಳ್ಳಿ ಚಂದ್ರಶೇಖರ ಮಹಾಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಮಹಾಸ್ವಾಮೀಜಿ, ಯಳನಾಡು ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರದ ಮಹಾಸ್ವಾಮೀಜಿ, ಮಾಜಿ ಶಾಸಕ ನಾಗರಾಜ್, ಬಿಜೆಪಿ.ಮುಖಂಡರಾದ ಲಿಂಗಮೂರ್ತಿ, ಪ್ರಭಾಕರ್ಮಾಳ್ಗಿ, ಶಿವಣ್ಣ, ಶಿವರುದ್ರಪ್ಪ, ಚಂದ್ರಶೇಖರಸ್ವಾಮಿ, ಬಿ.ಜೆ.ಚಂದ್ರಶೇಖರ್, ಶಶಿಧರ್, ಎಸ್.ಎಂ.ನಾಗರಾಜ್, ಸಿದ್ದರಾಮಪ್ಪ, ಲೋಕೇಶ್ವರ್, ಮರಿತಿಮ್ಮಪ್ಪ, ನಾಗಭೂಷಣ್, ಅಜ್ಜಪ್ಪ, ಆನಂದಪ್ಪ, ಡಾ.ಕೆ.ಪಿ.ಈಶ್ವರಪ್ಪ, ಶಿವಣ್ಣ, ಶಾಂತರಾಜ್ಪಾಟೀಲ್, ಬಸವರಾಜಪ್ಪ
ನಾಗರಾಜ್, ಮಲ್ಲಿಕಾರ್ಜುನ್, ಮಹೇಶಣ್ಣ, ಹನುಮಂತಣ್ಣ, ಲೋಕಣ್ಣ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.





