ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ಹಾಗೂ ಅನಿಷ್ಟ ಪದ್ಧತಿ ಗಳಿಂದ ಮುಕ್ತರಾಗಿ ಶ್ರೇಷ್ಠ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದೇ ಕನಕದಾಸರ ಮೂಲ ಆಶಯ ಆಗಿತ್ತು ಎಂದು ಹೊಸದುರ್ಗ ಕನಕಗುರು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಪರುಶುರಾಮಪುರ ಹೋಬಳಿಯ ಗೋರ್ಲತ್ತು ಗ್ರಾಮದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘ, ಶ್ರೀ ಬೀರಲಿಂಗೇಶ್ವರ ಉಣ್ಣೆ ಮತ್ತು ಕೈಮಗ್ಗ ನೇಕಾರ ಸಂಘ ಹಾಗೂ ಶ್ರೀ ಮಾರಿಕಾಂಬ ದೇವಿ ಸೇವಾ ಸಮಿತಿಯಿಂದ ಆಯೋಜಿಸಿದ್ದ ಕನಕದಾಸರ 536ನೇ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,
ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ. ಕನಕ ಎಂಬುದು ಅಗಾಧಶಕ್ತಿ, ಅದಮ್ಯ ಚೇತನ. ಭಗವಂತನಿಗೆ ಹತ್ತಿರವಾಗಿ ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟ ದಾರ್ಶನಿಕ. ಜತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದ ಸಂತರು ಎಂದರು. ಜಾತಿಗಣತಿ ಲೋಪ ಇದೆ ಸ್ವೀಕರಿಸಬೇಡಿ ಎಂದು 67 ಮಂದಿ ಶಾಸಕರು ಸಹಿ ಸಂಗ್ರಹಿಸಿ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿ ಮೀಸಲಾತಿ ಮತ್ತು ಜಾತಿಗಣತಿ ವಿರೋಧಿಸುವ ಶಾಸಕರಿಗೆ ಜನ ಮುಂದೆ ತಕ್ಕ ಪಾಠಕಲಿಸಬೇಕು ಎಂದರು.
ಮೆರವಣಿಗೆಯನ್ನು ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಕನಕದಾಸರ ಜಯಂತಿ ಆಚರಿಸುವ ಮೂಲಕ ಪ್ರತಿಯೊಬ್ಬ ರು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜನಪದ ತಜ್ಞ ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಕನಕದಾಸರು ಬರೀ ಕೀರ್ತನಾಕಾರರು ಅಲ್ಲದೆ ದಾರ್ಶನಿಕರು ಹಾಗೂ ಮಹಾ ಕವಿಗಳು ಆಗಿದ್ದರು. ಅವರನ್ನು ನಾವಿಂದು ಕೀರ್ತನಕಾರರಾಗಿ ನೋಡುತ್ತಿದ್ದೇವೆ. ಅವರು ಬರೆದಂತಹ ಮಹಾ ಕಾವ್ಯಗಳಾದ ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಸಾರ ಕಾವ್ಯಗಳು ಇಡೀ ಮನುಕುಲದ ದಿಕ್ಕನ್ನು ಬದಲಾಯಿಸುತ್ತವೆ. ಕನಕದಾಸರ ಹೆಗಲ ಮೇಲಿನ ಕಂಬಳಿ ಬರಿ ತುಪ್ಪಳ ಕಂಬಳಿ ಅಲ್ಲ. ಆ ಕಂಬಳಿಯಲ್ಲಿ ಶ್ರಮಿಕ ವರ್ಗದ ಬೆವರ ಧ್ವನಿ ಹಡಗಿದೆ ಎಂದರು. ಸಿಎಂ ಸಿದ್ದರಾಮಯ್ಯ ಅವರು ಜಾತಿ ಸಮೀಕ್ಷೆಯನ್ನು ಸ್ವೀಕರಿಸುವ ಮೂಲಕ ತಳ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕನಕ ರಾಮಯ್ಯ ಆಗಬೇಕಿದೆ ಎಂದರು.
ಮಾಜಿ ಜಿಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಹಾಗೂ ಮಂಡಿಗೆಗಳ ಮೂಲಕ ಲೋಕದ ಅಂಕುಡೊಕುಗಳನ್ನು ತಿದ್ದುವ ಕೆಲಸ ಅಂದೆ ಮಾಡಿದ್ದರು. ರಾಜ್ಯ ಫೆಡರೇಷನ್ ಮಾಜಿ ಅಧ್ಯಕ್ಷ ಎನ್.ಜಯರಾಂ ಮಾತನಾಡಿ, ಕನಕದಾಸರು ಭಕ್ತಿ-ಜ್ಞಾನದಿಂದಲೇ ಭಗವಂತನ ದರ್ಶನ ಮಾಡಬಹುದು ಎಂಬುದನ್ನು ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಪ್ರೋ.ಶಿವಲಿಂಗಪ್ಪ ಮಾತನಾಡಿದರು.
ಅಧ್ಯಕ್ಷೆಯನ್ನು ಎಪಿಎಂಸಿ ಮಾಜಿ ಸದಸ್ಯ ಬಿ.ಎಂ. ಮಹಾಲಿಂಗಪ್ಪ ವಹಿಸಿದ್ದರು.
ಹಿರಿಯ ವೈದ್ಯ ಎಲ್ . ರಾಮಚಂದ್ರಪ್ಪ , ನಿವೃತ್ತ ಪಿಡಿಒ ಬಿ. ಕೆಂಚಲಿಂಗಪ್ಪ , ನಿವೃತ್ತ ಎಎಸ್ಐ ಎಲ್.ತಿಮ್ಮಣ್ಣ ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಂದರ್ಭದಲ್ಲಿ ಶ್ರೀ ರೇವಣ್ಣಸಿದ್ದೇಶ್ವರ ಹಾಲುಮತ ದೊಡ್ಡೇರಿ ಮಹಾಸಂಸ್ಥಾನ ಗುರುಪೀಠದ ಪ್ರಕಾಶ್ ಒಡೆಯರ್ , ಬಿಜೆಪಿ ಮುಖಂಡ ಸೋಮಶೇಖರ್ ಮಂಡಿಮಂಠ , ಶ್ರೀ ರೇವಣ್ಣ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ತಾಲೂಕು ಅಧ್ಯಕ್ಷ ಆರ್. ಮಲ್ಲೇಶಪ್ಪ , ನಗರಸಭೆ ಸದಸ್ಯ ರಾಘವೇಂದ್ರ , ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು,ಉ.ಕೈ.ಸಂಘದ ಗೋರ್ಲತ್ತು ಆರ್ . ರಂಗನಾಥ, ಗ್ರಾಪಂ ಅಧ್ಯಕ್ಷ ಲಲಿತಮ್ಮ ತಿಪ್ಪೇಸ್ವಾಮಿ, ಸದಸ್ಯರಾದ ರೂಪರುದ್ರಮುನಿ, ಮಹದೇವಮ್ಮಕೆಂಚಪ್ಪ , ಮಂಜುನಾಥ,ಮಾಜಿ ಸದಸ್ಯ ವೀರಣ್ಣ, ಕಾಡಪ್ಪ , ಏಳುಕೋಟಪ್ಪ, ಶಂಕರಪ್ಪ,ರಾಜಣ್ಣ , ಲಿಂಗರಾಜ , ಮಧು ಕುಮಾರ್,ಓಬಣ್ಣ ನಾಯಕ , ನಾಗವೇಣಿ, ವಿರೇಶ್ , ನಿಜಲಿಂಗಪ್ಪ ,ಚಿದಾನಂದ , ಸಂತೋಷ ಕುಮಾರ್, ಶಿವಣ್ಣ, ಪಟೇಲ್ ಚಂದ್ರಪ್ಪ, ತಿಪ್ಪೇಸ್ವಾಮಿ, ಅನ್ನಪೂರ್ಣಮ್ಮಬೀರಣ್ಣ , ಮಂಜುಳ ನವಕೋಟಪ್ಪ , ಗಾಯಿತ್ರಿಮ್ಮ , ಶ್ರೀಮಂತ, ತಿಪ್ಪೇಸ್ವಾಮಿ , ಗೋವಿಂದಪ್ಪ , ರಂಗಣ್ಣ ಮಹಂತೇಶ ,ತಿಮ್ಮರಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





