Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025
  • ರಾಜ್ಯ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ದೇಶ»ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಶಾ
ದೇಶ

ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಶಾ

D KumaraswamyBy D KumaraswamyAugust 8, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಶಾ

ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್‌ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್ಅನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ, ‘ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು. ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ. ‘ಬಹು-ರಾಜ್ಯ ಸಹಕಾರಿ ಸಂಘವನ್ನು ನಿರ್ವಹಿಸುವ ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಕಾರ್ಯಗಳು ಸಂಪೂರ್ಣ ಡಿಜಿಟಲ್ ಆಗುತ್ತಿವೆ, ಇದು ಸಹಕಾರಿ ಕ್ಷೇತ್ರದ ವ್ಯಾಪಾರಗಳನ್ನು ಸುಲಭಗೊಳಿಸಲಿದೆ. ಸಹಕಾರ ಸಂಘಗಳ ಹೊಸ ಶಾಖೆ ತೆರೆಯುವುದು, ಬೇರೆ ರಾಜ್ಯಕ್ಕೆ ವಿಸ್ತರಿಸುವುದು ಅಥವಾ ಲೆಕ್ಕಪರಿಶೋಧನೆ ನಡೆಸುವುದು ಮುಂತಾದ ಎಲ್ಲಾ ಕೆಲಸಗಳು ಈಗ ಆನ್‌ಲೈನ್ ಆಗಲಿವೆ.

 

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು ಸಹಕಾರದಿಂದ ಸಮೃದ್ಧಿಯೆಂಬ ಮಂತ್ರವನ್ನು ಸಾಕಾರಗೊಳಿಸಲು ಮತ್ತು ಸಹಕಾರ ಚಳುವಳಿಯನ್ನು ಬಲಪಡಿಸಲು ದೇಶಾದ್ಯಂತ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ಸರಣಿಯ ಭಾಗವಾಗಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸಲು, ಬಹು-ರಾಜ್ಯ ಸಹಕಾರಿ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲು ಗಮನಾರ್ಹ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. ಸಂಪೂರ್ಣ ಕಾಗದ ರಹಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು, ಸಾಫ್ಟ್‌ವೇರ್ ಮೂಲಕ ಮಲ್ಟಿ-ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಗಳ ಕಾಯಿದೆ ಮತ್ತು ನಿಯಮಗಳ ಸ್ವಯಂಚಾಲಿತ ಅನುಸರಣೆಯನ್ನು ಖಚಿತಪಡಿಸುವುದು, ವ್ಯವಹಾರವನ್ನು ಸುಗಮಗೊಳಿಸುವುದು, ಡಿಜಿಟಲ್ ಸಂವಹನವನ್ನು ಸಕ್ರಿಯಗೊಳಿಸುವುದು, ಪಾರದರ್ಶಕತೆಯನ್ನು ಖಾತರಿಪಡಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶಗಳು . ಈ ಪೋರ್ಟಲ್‌ನ ಪ್ರಯೋಜನ ದೇಶದ 1,555 ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಆಗಲಿದೆ. ಇದಾದ ನಂತರ, ಅದೇ ಮಾದರಿಯಲ್ಲಿ ರಾಜ್ಯಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಗಳನ್ನು ಗಣಕೀಕರಣಗೊಳಿಸಲು ಮಾತುಕತೆ ನಡೆಯುತ್ತಿದೆ, ಇದು ದೇಶಾದ್ಯಂತ 8 ಲಕ್ಷ ಸಹಕಾರ ಸಂಘಗಳೊಂದಿಗೆ ಸಂವಹನವನ್ನು ಸುಲಭಗೊಳಿಸುತ್ತದೆ. ಶಾರವರ ದೂರದೃಷ್ಟಿಯ ಚಿಂತನೆಯ ಮೂಲಕ PACS ಮೂಲಕ ಪ್ರತಿ ಹಳ್ಳಿಗೆ ಸಹಕಾರ ಚಳುವಳಿಯನ್ನು ಕೊಂಡೊಯ್ಯುವ ಕೆಲಸ ವೇಗವಾಗಿ ನಡೆಯುತ್ತಿದೆ.

ಒಂದು ರೀತಿಯಿಂದ ನೋಡಿದರೆ ಮಹಾರಾಷ್ಟ್ರದಿಂದಲೇ ಇಡೀ ದೇಶದಲ್ಲಿ ಸಹಕಾರಿ ಸಂಸ್ಕೃತಿಯು ಪಸರಿಸಿದ್ದು ಎಂದು ಹೇಳಬಹುದು, ಇಲ್ಲಿನ ಸಹಕಾರಿ ಮಾದರಿಯು ಸಹಕಾರ ಚಳವಳಿಯನ್ನು ದೇಶಾದ್ಯಂತ ಮುನ್ನಡೆಸುತ್ತಿದೆ. ಆದ್ದರಿಂದ, ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಕೆಲಸವನ್ನು ಪ್ರಾರಂಭಿಸುವುದು ಸಂಪೂರ್ಣವಾಗಿ ಪ್ರಸ್ತುತವಾಗಿದೆ. ನೋಂದಣಿ, ಬೈಲಾಗಳ ನೋಂದಣಿ, ಅವುಗಳಲ್ಲಿ ತಿದ್ದುಪಡಿ, ಲೆಕ್ಕಪರಿಶೋಧನೆ, ಕೇಂದ್ರ ರಿಜಿಸ್ಟ್ರಾರ್‌ನಿಂದ ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ, ಕೇಂದ್ರ ರಿಜಿಸ್ಟ್ರಾರ್ ಕಚೇರಿಯಲ್ಲಿನ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ, ಜಾಗರೂಕತೆ ಮತ್ತು ತರಬೇತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸಂಯೋಜಿಸಿ ಈ ಪೋರ್ಟಲ್ಅನ್ನು ಮಾಡಲಾಗಿದೆ.

ಕಳೆದ 9 ವರ್ಷಗಳಲ್ಲಿ ಸಹಕಾರಿ ಕ್ಷೇತ್ರ ಪುನಶ್ಚೇತನಗೊಂಡಿದೆ. ದೇಶದ ಮೊದಲ ಸಹಕಾರಿ ಸಚಿವ ಶಾ ಅವರು ಸಹಕಾರಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಇಂದು, ಒಬ್ಬ ಬಡ ವ್ಯಕ್ತಿಗೆ ಉದ್ಯಮಕ್ಕೆ ಬಂಡವಾಳದ ಕೊರತೆಯಿದ್ದರೆ, ಅವನಿಗೆ ಸಹಕಾರ ಚಳುವಳಿಯೇ ಉತ್ತಮ ಮಾರ್ಗವಾಗಿದೆ, ಇದರ ಮೂಲಕ ಸಣ್ಣ ಬಂಡವಾಳ ಹೊಂದಿರುವ ಅನೇಕ ಜನರು ಒಟ್ಟಾಗಿ ದೊಡ್ಡ ಉದ್ಯಮವನ್ನು ಸ್ಥಾಪಿಸಬಹುದು. ಭಾರತವು ಅಮುಲ್, ಇಫ್ಕೋ ಮತ್ತು ಕ್ರಿಫ್ಕೋ ಮುಂತಾದ ಸಹಕಾರಿ ಸಂಸ್ಥೆಗಳ ಅನೇಕ ಯಶಸ್ಸಿನ ಕಥೆಗಳನ್ನು ಪ್ರಪಂಚದ ಮುಂದೆ ತೆರೆದಿಟ್ಟಿದೆ.

Share. Facebook Twitter Pinterest LinkedIn Tumblr WhatsApp Email
Previous Articleಸಚಿವ ಚೆಲುವರಾಯಸ್ವಾಮಿ ವಿರುದ್ದ ಪತ್ರ: ಪೊಲೀಸ್ ತನಿಖೆಗೆ ಸೂಚನೆ ಸಿಎಂ ಸಿದ್ದರಾಮಯ್ಯ
Next Article ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಕೈಗೊಳ್ಳಬೇಕು- ಅಧಿಕಾರಿಗಳಿಗೆ ಮುಖ್ಯಮಂತ್ರಿ ಕರೆ
D Kumaraswamy
  • Tumblr

Related Posts

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ: ಅರ್ಜುನ್, ಕೇಶವ

February 10, 2025

ಎಸ್ಸಿ ಪಟ್ಟಿಯಿಂದ ಎಕೆ ಎಡಿ  ಹೆಸರು ತೆಗೆಯಿರಿ: ಮಾಜಿ ಸಚಿವ ಹೆಚ್.ಆಂಜನೇಯ

February 10, 2025

ಲಿಂಗ ಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

February 7, 2025

ವಿಭಿನ್ನ ಚಿತ್ರಕ್ಕಾಗಿ ಮತ್ತೆ ಒಂದಾದ ನಿರ್ದೇಶಕ ಚಿದಂಬರಂ ಹಾಗು ಜೀತು ಮಾಧವನ್

January 2, 2025
Leave A Reply Cancel Reply

Recent Posts
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.