ವಕ್ಫ್ ಮಸೂದೆ ಮಂಡನೆ ವಿರೋಧಿಸಿ ಮುಸ್ಲಿಂ ಸಮುದಾಯದಿಂದ ಮಸೀದಿ ಮೌನ ಪ್ರತಿಭಟನೆ
ಚಿತ್ರದುರ್ಗ,ಏ 04: ರಾಜ್ಯ ಸಭೆಯಲ್ಲಿ ವಕ್ಫ್ ಮಸೂದನೆಯನ್ನು ಮಂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ದ ನಿಲುವನ್ನು ಖಂಡಿಸಿ ಇಂದು ಚಿತ್ರದುರ್ಗ ನಗರದ ದರ್ಜಿ ಕಾಲೋನಿಯ ಗೌಸಿಯಾ ಮಸ್ಜಿದೆ ಇ ಅಜಾಮ್ ಮಸೀದಿ ಬಳಿ ಪ್ರಾರ್ಥನೆ ನಂತರ ಮೌನ ಪ್ರತಿಭಟನೆಯನ್ನು ನಡೆಸಿದರು. ಇದೇ ರೀತಿಯಲ್ಲಿ ನಗರದ ಪ್ರತಿಯೊಂದು ಮಸೀದಿ ಬಳಿ ಮುಸ್ಲಿಂ ಸಮುದಾಯದವರು, ಮಸೂದೆ ಮಂಡನೆ ವಿರುದ್ಧ ಘೋಷಣೆಗಳನ್ನು ಹಾಕುವ ಮೂಲಕ ಖಂಡಿಸಿದರು. ಯಾವುದೇ ಕಾರಣಕ್ಕೆ ಮಸೂದೆಯನ್ನು ಮಂಡಿಸಬಾರದು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಕ್ಫ್ ಬೋರ್ಡ್ ನ ಮಾಜಿ ಜಿಲ್ಲಾಧ್ಯಕ್ಷ ಎಂಸಿಓ ಬಾಬು, ರಶೀದ್, ನಗರಸಭೆ ಸದಸ್ಯ ದಾವೋದ್,ಮುತುವಲ್ಲಿ ಅಶ್ವಕ್ ಆಹಮದ್ ಸಾಬ್,ಇಸ್ಮಾಯಿಲ್ ಹಾಗೂ ಸಮುದಾಯದ ಇನ್ನಿತರೇ ಮುಖಂಡರು ಭಾಗವಹಿಸಿದ್ದರು.





