ಚಿತ್ರದುರ್ಗ: ನಗರ ಸಭೆಯ ಸದಸ್ಯ ದೀಪಕ್ (ದೀಪು) ಅವರು ನನ್ನ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು ಎಂದು ನಿವೃತ್ತ ವಕಯ ಅರಣ್ಯಾಧಿಕಾರಿ ಹೆಚ್ . ರಾಮಮೂರ್ತಿ ಹೇಳಿದರು. ಅವರು ಸೋಮವಾರ ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಮುಕ್ತಿಧಾಮದ ಬಳಿ ಒಂದು ಎಕರೆ ಜಮೀನು 1960ರಲ್ಲಿ ಮಹಬೂಬಿ ಎನ್ನುವವರಿಗೆ ಮಂಜುರಾಗಿತ್ತು. ಅದಕ್ಕೆ ಎಲ್ಲ ದಾಖಲೆಗಳು ಇವೆ.
ಆನಂತರ ಮಹಬೂಬಿಯವರು ಬಾಬುರಾವ್ ಎನ್ನುವವರಿಗೆ ಹೇಳು 7.10 2011 ರಲ್ಲಿ ಮಾರಾಟ ಮಾಡುತ್ತಾರೆ. ಬಾಬುರಾವ್ 3 .9. 2014ರಲ್ಲಿ ನಮ್ಮ ತಾಯಿಯವರಾದ ರಾಮಕ್ಕ ಅವರಿಗೆ ಮಾರಾಟ ಮಾಡುತ್ತಾರೆ.ಹೀಗೆ ಈ ನಿವೇಶನ ಮೂರು ಕೈಗಳ ಬದಲಾಗಿದ್ದು,
ಇದರಿಂದ ಕೋಟೆಗೆ ಹೊಂದಿಕೊಂಡಂತೆ ಇರುವುದಕ್ಕೆ ನಾವು ಸಿಮೆಂಟ್ ಕಾಂಪೌಂಡ್ ಹಾಕಿ ಬಂದೋ ಬಸ್ತ್ ಮಾಡಿಕೊಂಡಿದ್ದೇವೆ ಎಂದರು. ನಗರಸಭೆ ಸದಸ್ಯ ದೀಪಕ್ (ದೀಪು) ಅವರು ಹೇಳಿದಂತೆ ಶ್ರೀನಿವಾಸ್ ಮತ್ತು ಭಾಸ್ಕರ್ ಅವರು ಮಾಡಿಕೊಟ್ಟಿದ್ದಲ್ಲ ಅವರಿಗೂ ಈ ಜಗಕ್ಕೂ ಸಂಬಂಧವಿಲ್ಲ. ಇದರಲ್ಲಿ ತಪ್ಪಿದ್ದರೆ ಸರ್ಕಾರ ಕೂಡಲೇ ವಶಪಡಿಸಿಕೊಳ್ಳಬಹುದು ಎಂದು ಹೇಳಿದರು. ಇನ್ನು ನಮಗೂ ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್ ಮತ್ತು ಭಾಸ್ಕರ್ ಅವರುಗಳಿಗೂ ಯಾವುದೇ ಆರ್ಥಿಕ ವ್ಯವಹಾರ ವಾಗಲಿ, ಭೂಮಿ ವ್ಯವಹಾರ ವಾಗಲಿ ಇಲ್ಲ ಕೇವಲ ರಕ್ತ ಸಂಬಂಧ ಮಾತ್ರವಿದೆ. ಒಂದು ಎಕರೆ ಜಮೀನಿನ ಪಕ್ಕದಲ್ಲಿ 30 ಗುಂಟೆ ಜಾಗವಿದ್ದು, ಸ್ವತಂತ್ರ ಪೂರ್ವದಲ್ಲಿ ಪಾಂಡುರಂಗಪ್ಪ ಎನ್ನುವವರಿಗೆ ಭೂಮಿ ಮಂಜೂರಾಗಿತ್ತು. ಅದನ್ನು ಅವರ ಪತ್ನಿ ನಮ್ಮ ತಂದೆಯವರಾದ ಹನುಮಂತಪ್ಪ ಅವರಿಗೆ 25.11.2016 ರಲ್ಲಿ ಮಾರಾಟ ಮಾಡಿದ್ದು, ಇಷ್ಟು ಸತ್ಯವಾಗಿದ್ದು, ಇದಕ್ಕೆ ಪೂರಕ ದಾಖಲೆಗಳಿವೆ. ನಾನು ಯಾವುದೇ ಅಕ್ರಮ ಆಸ್ತಿಗಳನ್ನು ಹೊಂದಿಲ್ಲ ಶ್ರೀನಿವಾಸ್ ಭಾಸ್ಕರ್ ಆರೋಪ ಮಾಡಿದರೆ ನೀವು ಅವರನ್ನು ಕೇಳಬೇಕು ಅವರು ಅಕ್ರಮ ಮಾಡಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಿ, ದಾಖಲೆಗಳೆಲ್ಲದೆ ಆರೋಪ ಮಾಡುವುದು ಬೇಡ ಎಂದು ಮನವಿಯನ್ನು ಮಾಡಿದರು.