Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ರಾಜ್ಯ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ: ಅರ್ಥಪೂರ್ಣ ಆಚರಣೆ
ರಾಜ್ಯ

ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ: ಅರ್ಥಪೂರ್ಣ ಆಚರಣೆ

D KumaraswamyBy D KumaraswamyJune 24, 2024No Comments1 Min Read
Facebook Twitter Pinterest LinkedIn Tumblr WhatsApp VKontakte Email
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Share
Facebook Twitter LinkedIn Pinterest Email

 

ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ: ಅರ್ಥಪೂರ್ಣ ಆಚರಣೆ

 

 

ಚಿತ್ರದುರ್ಗ: ಜಿಲ್ಲಾಡಳಿತದ ವತಿಯಿಂದ ಇದೇ ಜೂನ್ 27ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ ಆಚರಿಸಲಾಗುವ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿಗೆ ರೂ.1 ಲಕ್ಷ ವಿಶೇಷ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬಿಡುಗಡೆ ಮಾಡಲಾಗಿದ್ದು, ಜೂನ್ 27ರಂದು ಜಿಲ್ಲಾಮಟ್ಟದಲ್ಲಿ, ತಾಲ್ಲೂಕುಮಟ್ಟದಲ್ಲಿ ಹಾಗೂ ಎಲ್ಲ ಶಾಲಾ-ಕಾಲೇಜುಗಳಲ್ಲಿಯೂ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರ ಜೀವನ, ಸಾಧನೆ, ಕೊಡುಗೆಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು.  ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ಗೀತಗಾಯನ ಹಮ್ಮಿಕೊಳ್ಳಲಾಗುವುದು. ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ವೆಂಕಟೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಒ.ಎಲ್.ಮಂಜುಕುಮಾರ್, ಕಾರ್ಯದರ್ಶಿ ಜಗನ್ನಾಥ್, ನಿರ್ದೇಶಕರಾದ ಪರಮೇಶ್ವರ, ಜಿ.ದ್ಯಾಮಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಆಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

Share. Facebook Twitter Pinterest LinkedIn Tumblr WhatsApp Email
Previous Articleಹಣ ಇದ್ದವರಿಗೆ ಮಾತ್ರ ಮೆಡಿಕಲ್ ಮತ್ತು ಇನ್ನಿತರ ಉನ್ನತ ಪದವಿ ಕೋರ್ಸ್ ಗಳು ಎನ್ನುವಂತಾಗಿದೆ: ಬಸವ ಕುಮಾರ ಶ್ರೀಗಳು
Next Article ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ, ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾ ಸ್ವಾಮಿ ಪೋಷಕರು
D Kumaraswamy
  • Tumblr

Related Posts

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

December 13, 2025

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

December 12, 2025

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025
Leave A Reply Cancel Reply

Recent Posts
  • ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.