ಲವ್ ಜಿಹಾದಿಗೆ ಅವಕಾಶವಿಲ್ಲ

ಚಿತ್ರದುರ್ಗ,ನ06(ಸಂವಾ)-
ಸ್ವಾತಂತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ಅವರ ಕನಸು ನನಸು ಮಾಡಲು ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಲವ್ ಜಿಹಾದಿ ಅವಕಾಶ ನೀಡದ ಹಾಗೂ ಗೊ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೆವೆ ಎಂದು ಗ್ರಾಮೀಣಾಭೀದ್ದಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲ ಗೋವುಗಳಿಗೆ ರಕ್ಷಣೆ ಇಲ್ಲ. ಇಂತಹ ಸಂದರ್ಭದಲ್ಲಿ ಜಿಜೆಪಿ ಸರ್ಕಾರ ಸ್ವತಂತ್ರ ಯೋಧರ ಆತ್ಮಕ್ಕೆ ಶಾಂತಿ ಭಾರತೀಯ ಸಂಸ್ಕೃರಿ ಉಳಿಸುವ ನಿಟ್ಟಿನಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರಲಿದ್ದೆವೆ. ಅನೇಕ ಭಾರತೀಯ ಹೆಣ್ಣು ಮಕ್ಕಳಿಗೆ ಲವ್ ಜಿಹಾದಿ
ಬಗ್ಗೆ ಕಲ್ಪನೆಯೇ ಇಲ್ಲ. ಅವರಿಗೆ ಆಸೆ ಅಮೀಷಗಳನ್ನು ತೋರಿಸಿ ಲವ್ ಜಿಹಾದೆ ಮಾಡಿಮದುವೆ ಮಾಡಿಕೊಂಡು ಅವರನ್ನು ದುರುಪಯೋಗ ಮಾಡಿಕೊಂಡು ಬೀದಿಗೆ ಬಿಟ್ಟಿರುವ ಉದಾಹರಣೆಗಳಿವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಾನು ಇದೆಲ್ಲದರ ಬಗ್ಗೆ ವಿಧಾನ ಪರಿಷತ್ ನಲ್ಲಿ ಪ್ರಶ್ನೆ ಮಾಡಿ ಏನು ಕ್ರಮತೆಗೆದುಕೊಂಡಿದ್ದಿರಿ ಎಂದಿದ್ದೆ ಆದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಿಲ್ಲ. ಅದ್ದರಿಂದ ನಾವು ಈ ಬಾರಿ ಲವ್ ಜಿಹಾದೆ, ಹಾಗೂ ಗೋಹತ್ಯೆ ನಡೆಯಲು ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಎಂದು ಈಶ್ವರಪ್ಪ ಹೇಳಿದರು.
ಸಂಯುಕ್ತವಾಣಿ.
ಡಿ.ಕುಮಾರಸ್ವಾಮಿ




