ಮನೆ ಕಟ್ಟಲು ಲೈಸೆನ್ಸ್ ಗೆ ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾ ಬಲೆಗೆ
ಹೊಳಲ್ಕೆರೆ: ಮನೆ ಕಟ್ಟಲು ಲೈಸೆನ್ಸ್ ಕೊಡಲು ಲಂಚದ ಹಣ ಸ್ವೀಕರಿಸುವಾಗ,ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಾಕಿಕೊಂಡ ಘಟನೆ ಹೊಳಲ್ಕೆರೆಯ ಅರೇಹಳ್ಳಿಯಲ್ಲಿ ಬುಧವಾರ ನಡೆದಿದೆ.
ಹೊಳಲ್ಕೆರೆ ಅರೇಹಳ್ಳಿ ಗ್ರಾಪಂ ಪಿಡಿಓ ಕೃಷ್ಣಮೂರ್ತಿ ನಾಗರಾಜ್ ಗೆ ಮನೆ ಕಟ್ಟಿಸಲು ಲೈಸೆನ್ಸ್ ಕೊಡಲು 15 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮೊದಲಿ 5ಸಾವಿರ ಪಡೆಯುವಗಾಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಡಿಓಕೃಷ್ಣ ಮೂರ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.





