48 ಗಂಟೆಗಳಲ್ಲಿ ಬರ್ಬರ ಹತ್ಯೆಯ ಆರೋಪಿಗಳ ಬಂಧಿಸಿದ ಪೊಲೀಸರು
ಚಳ್ಳಕೆರೆಯ ಪರುಶುರಾಂಪುರದ ನಾಗಪ್ಪನ ಹಳ್ಳಿ ಗೇಟ್ ಬಳಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದ 48 ಗಂಟೆಗಳಲ್ಲಿ ಭೇಧಿಸಿ ನಾಲ್ಕು ಜನರನ್ನು ಪರುಶುರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 18 ನೇ ತಾರೀಕಿನಂದು ಗಿತ್ತರಾಜು ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಈಗ ಕೊಲೆ ಆರೋಪಿಗಳಾದ ರಾಮಣ್ಣ, ಕೊಟ್ರೇಶ, ಬಸವರಾಜ, ಸುಧಮ್ಮ ಇವರುಗಳನ್ನು ಆಂಧ್ರದ ಮಲಯನೂರಿನಲ್ಲಿ ಬಂಧಿಸಿದ್ದಾರೆ.