ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಬಳಿಯ ಪವರ್ ರಿಕ್ರಿಯೇಷನ್ ಕ್ಲಬ್ ನ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 35 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಶನಿವಾರ ಮಧ್ಯಾಹ್ನ 3.45 ರ ವೇಳೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಡಾವಣೆ ಠಾಣಾ ಪೊಲೀಸರು ವಿಷೇಶ ಗಸ್ತಿನಲ್ಲಿರುವಾಗ ಪವರ್ ಕ್ರಿಯೇಷನ್ ಕ್ಲಬ್ ನಲ್ಲಿ ಹಲವು ಮಂದಿ ಗುಂಪಾಗಿ ಕೂತು ಇಸ್ಪೀಟ್ ಜೂಜಾಟ ಆಡುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. 35 ಮಂದಿಯನ್ನ ವಶಕ್ಕೆ ಪಡೆದ ಪೊಲೀಸರು, 73 ಸಾವಿರ ನಗದು, 27 ಸಾವಿರ ಮೌಲ್ಯದ ಟೋಕನ್ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಲಂ 112 ಬಿ ಎನ್ ಎಸ್ ಮತ್ತು ಕಲಂ 79 ಹಾಗೂ 80 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ.





