ಚಿತ್ರದುರ್ಗ, ಹಿರಿಯೂರು,ಫೆ04- ಜಮೀನು ಮಾರಾಟ ಮಾಡಿದ ಹಣವನ್ನು ಬೈಕ್ ನಲ್ಲಿಟ್ಟಿದ್ದನ್ನು ಗಮನಿಸಿದ ಖತರ್ನಾಕ್ ಕಳ್ಳರು ಎಗರಿಸಿಕೊಂಡು ಹೋಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ.ಹಿರಿಯೂರಿನ ಲಕ್ಕವ್ವನಹಳ್ಳಿ ವೇಲುಸ್ವಾಮಿ, ಮೋಹನ್ ಸುಂದರ್ ಗೆ ತನ್ರ್ನ ಅರ್ಧ ಎಕೆರೆ ಜಮೀನನ್ನು 4.73 ಲಕ್ಷಕ್ಕೆ ಮಾರಾಟ ಮಾಡಿದ್ದು, ಅದಕ್ಕೆ ಚೆಕ್ ಮೂಲಕ ಹಣ ನೀಡಿದ್ದರು. ಮೋಹನ್ ಸುಂದರ್ ನೀಡಿದ ಚಕ್ ನ್ನು ಹುಳಿಯಾರ್ ರಸ್ತೆಯಲ್ಲಿರುವ ಬ್ಯಾಂಕ್ ಗೆ ಜಮಾಮಾಡಿ, ಹಣ ಬಿಡಿಸಿಕೊಂಡು ಬೈಕ್ ನಲ್ಲಿಟ್ಟುಕೊಂಡ ವೇಲುಸ್ವಾಮಿ ಊರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಟೀ ಅಂಗಡಿಯಲ್ಲಿ ನೀರು ಕುಡಿಯಲು ಹೋದಾಗ, ಇದನ್ನು ಗಮನಿಸಿದ ಚಾಲಾಕಿ ಕಳ್ಳರು 4 ಲಕ್ಷದ 73 ಸಾವಿರ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಹಿರಿಯೂರಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





