ಚಿತ್ರದುರ್ಗ, ಪೆ,5, ಸೂರ್ಯ ತನ್ನ ದಿಕ್ಕನ್ನ ಬದಲಿಸುವ ಕ್ರಮಕ್ಕೆ ರಥಸಪ್ತಮಿ ಎನ್ನುತ್ತಾರೆ. ಈ ಅವಧಿಯಲ್ಲಿ ಸೂರ್ಯ ತನ್ನ ಪ್ರಖರತೆಯನ್ನು ಹೆಚ್ಚಿಸುವ ಕಾರಣ ಶಾಖ ಹೆಚ್ಚಾಗಿರುತ್ತದೆ. ಈ ಕಾರಣ ರಥಸಪ್ತಮಿಗೆ ವೈಜ್ಞಾನಿಕ ಜತೆಗೆ ಪುರಾಣಗಳ ಉಲ್ಲೇಖಗಳು ಉಂಟು ಎಂದು ಯೋಗಾಚಾರ್ಯ ಎಲ್.ಎಸ್ .ಚಿನ್ಮಯಂದ ಅಭಿಪ್ರಾಯಪಟ್ಟರು
ಜಿಲ್ಲಾ ಯೋಗ ಸಂಸ್ಥೆ ,ಚಿತ್ರದುರ್ಗ, ಚಿತ್ರದುರ್ಗ ರೋಟರಿ ಕ್ಲಬ್ ಫೋರ್ಟ್ ,ಇನ್ನರ್ವಿಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಚಿತ್ರದುರ್ಗ ವೀರಶೈವ ಸಮಾಜಗಳ ಸಂಯುಕ್ತಾಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯವನಲ್ಲಿ ಇಂದು ಬೆಳಗ್ಗೆ 5-30ರಿಂದ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಸಂದರ್ಭದಲ್ಲಿ ಮಾತಾಡಿ, ರಥಸಪ್ತಮಿಯನ್ನು ಅಚಲ ಸಪ್ತಮಿ, ಮಾಘಸಪ್ತಮಿ ಅಥವಾ ಸೂರ್ಯ ಸಪ್ತಮಿ ಎಂದು ಕರೆಯುವರು. ಬಹು ಹಿಂದಿನಿಂದ ಆಚರಿಸಿಕೊಂಡು ಬಂದಿರುವುದು ಒಂದು ವಿಶೇಷ.
ನಮ್ಮ ರಾಷ್ಟ್ರದಲ್ಲಿ ಅಲ್ಲದೆ ಜಗತ್ತಿನ ಅನೇಕ ಭಾಗಗಳಲ್ಲಿಯೂ ರಥಸಪ್ತಮಿಯನ್ನು ಆಚರಿಸುವರು. 108 ನಾಮ ಜಪ ಅಲ್ಲದೆ ವಿಶೇಷವಾಗಿ ಯೋಗ ಸಾಧಕರು 108 ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ.
ಸೂರ್ಯನು ಆರೋಗ್ಯದಾತ ಎಂದು ವೇದ ಅಲ್ಲದೆ ಪುರಾಣಗಳು ಸಹ ಸೂರ್ಯನನ್ನು ರೋಗನಿವಾರಕನೆಂದು ಸಾರಿವೆ. ಸರ್ವವ್ಯಾಧಿಗಳು, ಮಹಾವ್ಯಾಧಿಗಳು ನಿವಾರಣೆಯಾಗುತ್ತದೆ ಎಂದು ಜನರಲ್ಲಿ ನಂಬಿಕೆ .ಸೂರ್ಯ ನಮಸ್ಕಾರಗಳಿಂದ ಬಲಸಂವರ್ಧನೆ ,ಆರೋಗ್ಯ,ಆಯುಷ್ಯಾಭಿವೃದ್ದಿ. ಮನಃಶಕ್ತಿಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗೆ ಆಗುತ್ತದೆ ಎಂಬುದಾಗಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷ ಎಸ್.ಜಿ .ರಂಗನಾಥ್ ಮಾತನಾಡಿ ನಮ್ಮಲ್ಲಿನ ಅಂತಃಶಕ್ತಿಯನ್ನು ಅರಿಯಲು,ಉದ್ದೀಪನಗೊಳಿಸಲು ಯೋಗ ಸಹಕಾರಿ ಎಂದರು. ಇನ್ನರ್ ವೀಲ್ ಕ್ಲಬ್ ಪೋರ್ಟ್ ನ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮಹೇಶ್ ಮಾತಾಡಿದರು.
ಚಿತ್ರದುರ್ಗ ನಗರದ ವಿವಿಧ ಬಡಾವಣೆಯ ಯೋಗ ತರಬೇತುದಾರರು ಮತ್ತು ಯೋಗಭ್ಯಾಸಿಗಳು ಸೇರಿದಂತೆ ಸುಮಾರು ನೂರಾರು ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 108 ನಮಸ್ಕಾರಗಳನ್ನು 45 ನಿಮಿಷದಲ್ಲಿ ರುಕ್ಮಿಣಿ ,ಹೇಮಲತಾ ,ಅನುಸೂಯ, ವೀರಭದ್ರಸ್ವಾಮಿ, ಸಂಪತ್ ಕುಮಾರ್, ವಿನಾಯಕ, ದಿವ್ಯಾ, ವೆಂಕಟೇಶ್, ನೇತ್ರಾ, ಅವನಿ, ಶ್ರೀದೇವಿ, ನಿರ್ಮಲ, ಪರಶುರಾಮ್, ತನುಜಾ ,ಲಕ್ಷ್ಮಿ ,ವನಜಾಕ್ಷಿ ,ಭಾಗ್ಯಮ್ಮ ,ಮೋಹನ್, ವಿಜಯಕುಮಾರ್, ಕುಸುಮ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಮಾಡಿದ್ದು ವಿಶೇಷವಾಗಿತ್ತು.





