Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ರಾಜ್ಯ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಒಳಮೀಸಲಾತಿ ಜಾರಿ ಖಚಿತ: ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯ
ರಾಜ್ಯ

ಒಳಮೀಸಲಾತಿ ಜಾರಿ ಖಚಿತ: ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯ

D KumaraswamyBy D KumaraswamyFebruary 14, 2025No Comments4 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

 

ಒಳಮೀಸಲಾತಿ ಜಾರಿ ಖಚಿತ: ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯ

ಬೆಂಗಳೂರು: ನಾನು ಹಳ್ಳಿಯಿಂದ ಬಂದವನು. ಅಂದು ಅಸ್ಪೃಶ್ಯರು ಅನುಭವಿಸಿದ ನೋವು ನಾನು ಕಣ್ಣಾರೆ ಕಂಡಿದ್ದೇನೆ. ಆದ್ದರಿಂದ ಸಾಮಾಜಿಕ ನ್ಯಾಯ ಕಲ್ಪಿಸುವುದು ನನ್ನ ಹೊಣೆಗಾರಿಕೆ ಆಗಿದೆ ಎಂದು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.

ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮುಖಂಡರ ಮನವಿ ಸ್ವೀಕರಿಸಿ ಮಾತನಾಡಿದರು.

ಪರಿಶಿಷ್ಟರ ಜತೆಗೆ ಬೆಳೆದವನು ನಾನು. ಹಾಗಾಗಿ ನಿಮ್ಮೆಲ್ಲರ ನೋವು, ಕಷ್ಟ, ಪರಿಸ್ಥಿತಿ ನನಗೆ ಅರ್ಥವಾಗಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಒಳಮೀಸಲಾತಿ ಸಂಬಂಧ ತೀರ್ಪು ನೀಡಿದೆ. ಹೇಗೆ ಕೊಡಬೇಕು, ಯಾರಿಗೆ ಕೊಡಬೇಕು, ಯಾರನ್ನು ಯಾರ ಜೊತೆ ಸೇರಿಸಬೇಕು, ಯಾರಿಗೆ ಎಷ್ಟು ಕೊಡಬೇಕು ಎಂಬ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದರು.

75 ವರ್ಷಗಳಲ್ಲಿ ಮೀಸಲಾತಿಯ ಎಲ್ಲ ಸೌಲಭ್ಯವನ್ನು ಅನುಭವಿಸಿ ಚಲನಶೀಲತೆಯನ್ನು ಕಂಡಿರುವ ಜನ ಮೇಲುಸ್ಥರಕ್ಕೆ ಮುಂದುವರಿದಿದ್ದಾರೆ. ಇದೇ ಸಮಯದಲ್ಲಿ ಇನ್ನೊಂದು ಸ್ಥರದ ವರ್ಗಕ್ಕೆ ಉದ್ಯೋಗವು ಇಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾಗಲು ಸಾಧ್ಯವಾಗಿಲ್ಲ. ಇದನ್ನು ನಾವು ನೋಡಬೇಕು, ತಿಳಿದುಕೊಳ್ಳಬೇಕು, ಅವರಿಗೂ-ಇವರಿಗೂ ನ್ಯಾಯ ಕೊಡಿಸಬೇಕಾಗಿದೆ ಈ ದಿಕ್ಕಿನಲ್ಲಿ ನಮಗೆ ಸಂಘರ್ಷ ಬೇಡ, ಸಮನ್ವಯತೆ ಬೇಕು. ಸಹೋದರತ್ವ ಬೇಕಾಗಿದೆ. ಈ ವಿಚಾರವನ್ನು ಇಡೀ ದೇಶದ ಎಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ತಿಳಿಯಬೇಕಿದೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಸರ್ವೋಚ್ಛ ನ್ಯಾಯಾಲಯವು ಆಗಸ್ಟ್ 1, 2024ರಂದು ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಆದೇಶ ನೀಡಿದೆ. ಒಳ ಮೀಸಲಾತಿ ಜಾರಿಗೊಳಿಸುವುದರಿಂದ ಸಂವಿಧಾನದ ಯಾವುದೇ ಅನುಚ್ಛೇದಗಳಿಗೆ ವಿರೋಧವಲ್ಲ. ಸಮಾನತೆಯನ್ನು ಸಾಧಿಸುವುದಕ್ಕೆ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಜತೆಗೆ ಒಳ ಮೀಸಲಾತಿ ಜಾರಿ ಮಾಡುವ ಮುನ್ನ ವೈಜ್ಞಾನಿಕ ಔದ್ಯೋಗಿಕ ಶೈಕ್ಷಣಿಕ ದತ್ತಾಂಶ ಸಂಗ್ರಹಿಸಿ ಎಂದು ತಿಳಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಆಯೋಗವನ್ನು ನೇಮಕ ಮಾಡಿದೆ ಎಂದು ಹೇಳಿದರು.

ಇಲ್ಲಿಯವರೆಗೆ ಎರಡು ಸಾವಿರಕ್ಕೂ ಹೆಚ್ಚು ಜನರು ನನ್ನನ್ನು ಭೇಟಿ ಮಾಡಿ ಚರ್ಚೆ ಜತೆಗೆ ಮನವಿ ಸಲ್ಲಿಸಿದ್ದಾರೆ. ಎಚ್.ಆಂಜನೇಯ ಅವರು ಒಂದೂವರೆ ತಿಂಗಳಿನಲ್ಲಿ ಐದು ಬಾರಿ ಭೇಟಿ ಮಾಡಿ ಸಮುದಾಯದ ಪರವಾಗಿ ಹಕ್ಕೋತ್ತಾಯ ಮಂಡಿಸಿದ್ದಾರೆ.ನಾನು ಇಲ್ಲಿ ಎಲ್ಲರ ಮಾತುಗಳನ್ನು ಕಿವಿಯಿಂದ ಅಲ್ಲ ಹೃದಯದಿಂದ ಆಲಿಸಿದ್ದೇನೆ. ಅದೇ ರೀತಿ ನಿವೃತ್ತ ಅಧಿಕಾರಿ ಭೀಮಪ್ಪ ಗೋನಾಳ್ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಿ ಅವರಿಂದ ಸಲಹೆ ಸೂಚನೆ ಪಡೆದಿದ್ದೇನೆ ಎಂದರು.
ಹಸಿದವರು ಕಾಯುವುದಕ್ಕೆ ಆಗುವುದಿಲ್ಲ, ಅವರು ಸತ್ತು ಹೋಗುತ್ತಾರೆ. ಊಟ ಮಾಡುವವರು ಕಾಯುತ್ತಾರೆ. ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ಆಯೋಗ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ನೀವು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಸಲಹೆಗಳಲ್ಲಿ ಕೆಲವು ಅಂಶಗಳನ್ನು ಮಾರ್ಗಸೂಚಿಯಾಗಿ ಅನುಸರಿಸುತ್ತಿದೆ ಎಂದು ಹೇಳಿದರು.

ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತದೆ, ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಎಲ್ಲಿಯವರೆಗೆ ಮೀಸಲಾತಿ ಇರುತ್ತೋ, ಅಲ್ಲಿಯವರೆಗೆ ಒಳ ಮೀಸಲಾತಿ ಇರಬೇಕು. ಆದರೆ, ಮೀಸಲಾತಿ ಮತ್ತು ಒಳಮೀಸಲಾತಿ ನಮ್ಮೆಲ್ಲರ ಸಮಸ್ಯೆಗೆ ಪರಿಹಾರ ಅಲ್ಲ ಎಂದು ತಿಳಿಸಿದರು.

 

 

ದೇಶದಲ್ಲಿ ಶೇ.100ರಷ್ಟು ಉದ್ಯೋಗ ಸೃಷ್ಟಿ ಆದರೆ ಶೇ.98 ಉದ್ಯೋಗ ಖಾಸಗಿ ಕ್ಷೇತ್ರದಲ್ಲಿವೆ. ಅಲ್ಲಿ ಮೀಸಲಾತಿ ಅನ್ವಯ ಆಗುವುದಿಲ್ಲ. ಉಳಿದ ಶೇ.2ರಲ್ಲಿ 1ರಷ್ಟು ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಎಸ್ಸಿ-17, ಎಸ್‍ಟಿ-7, ಒಬಿಸಿ ವರ್ಗಕ್ಕೆ 52 ಮೀಸಲಾಗಿದೆ. ಒಟ್ಟು 76ರಷ್ಟು ಉದ್ಯೋಗ ಕೇವಲ ಶೇ.1ರಷ್ಟು ಜನರಿಗೆ ಮೀಸಲಾಗಿದೆ. ಶೇಕಡ ಈ 1ರಷ್ಟು ಮೀಸಲಾತಿ ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ವಿಷಾದಿಸಿದರು.

ಗಣಕೀಕರಣ ಮತ್ತು ಯಾಂತ್ರಿಕರಣ ವ್ಯಾಪಕವಾಗಿ ಮುಂದುವರಿಯುತ್ತಿದೆ. ರೋಬೋಟ್ ಯುಗ ಬರುತ್ತಿದೆ. ಇದರಲ್ಲಿ ಮೀಸಲಾತಿ ಕೊಡಲು ಸಾಧ್ಯವೇ ಎಂದು ಪ್ರಶ್ನೀಸಿದರು. ಮೀಸಲಾತಿ ಎಂಬ ವಿಷಯವನ್ನು ಇಟ್ಟುಕೊಂಡು ನಾವು ಇನ್ನೂ ಎಷ್ಟು ವರ್ಷ ಹೀಗೆ ಸುತ್ತಬೇಕು. ಹಾಗಂತ ಮೀಸಲಾತಿ ಬೇಡ ಅಂತ ಅಲ್ಲ, ಮೀಸಲಾತಿ ಬೇಕು ಅನ್ನೋ ವಿಚಾರದಲ್ಲಿ ಅದು ನೂರಕ್ಕೆ ನೂರು ಜಾರಿಗೊಂಡರೇ ನನ್ನ ಸಮುದಾಯದ ಶೇ.4ರಿಂದ 5ರಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಉಳಿದ ಶೇ.95ರಷ್ಟು ಯುವಕ ಯುವತಿಯರ ಬದುಕು ಏನಾಗಬೇಕು..? ಇದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವಾ..? ಈ ಬಗ್ಗೆ ನಾವು ಯೋಚಿಸಬೇಕಿದೆ ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುಮಾರಸ್ವಾಮಿ, ಮಾಚಿ ಸಚಿವ ಎಂ.ಶಿವಣ್ಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಭೀಮಪ್ಪ ಗೋನಾಳ್, ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಗಂಗಹನುಮಯ್ಯ, ಧರ್ಮಸೇನ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಮಾಜಿ ಅಧ್ಯಕ್ಷ ಓ.ಶಂಕರ್, ಸಫಾಯಿ ಕರ್ಮಚಾರಿ ಆಯೋಗ ಮಾಜಿ ಅಧ್ಯಕ್ಷರಾದ ನಾರಾಯಣ, ಎಂ.ಆರ್.ವೆಂಕಟೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಮಾನಯ್ಯ, ಎಸ್ಸಿ ಎಸ್ಟಿ ಆಯೋಗದ ಮಾಜಿ ಅಧ್ಯಕ್ಷ ಎ.ಮುನಿಯಪ್ಪ, ಮುಖಂಡರಾದ ಅಂಬಣ್ಣ ಆರೋಲಿಕರ್, ಡೋಹರ್ ಸಮಾಜದ ಅಧ್ಯಕ್ಷ ಸಂತೋಷ್ ಸವಣೂರು, ಮೋಚಿಗಾರ ಸಮಾಜದ ಅಧ್ಯಕ್ಷ ಶಿವಪ್ಪ ಜಿ ಮುಳಗುಂದ ಸೇರಿದಂತೆ ಎಡ ಗುಂಪಿನ ಮಾದಿಗರು, ಸಮಗಾರರು, ಮೋಚಿಗರು, ಡೋಹರ್ ಮತ್ತಿತರ ಸಂಬಂಧಿತ ಜಾತಿಗಳ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

* ಬಾಕ್ಸ್ *

ಖಾಸಗಿ ಕ್ಷೇತ್ರದಲ್ಲಿ ಮೀಸಲು ಬೇಕು*
ದೇಶದಲ್ಲಿ 6,42,000, ರಾಜ್ಯದಲ್ಲಿ 2,72,000 ಉದ್ಯೋಗಗಳು ಖಾಲಿ ಇವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ. ಖಾಸಗಿಕರಣ ದಲ್ಲಿ ಮೀಸಲಾತಿ ಇಲ್ಲ. ಇದರ ಬಗ್ಗೆ ನಾವು ಧ್ವನಿ ಎತ್ತಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.
ನಮ್ಮ ಸಮುದಾಯದ ಯುವಕ-ಯುವತಿಯರಿಗೆ ಜೀವನ ಕಟ್ಟಿಕೊಡುವ ದಿಸೆಯಲ್ಲಿ ನಾವೆಲ್ಲ ಚಿಂತಿಸಬೇಕಾಗಿದೆ. ಇದರ ಬಗ್ಗೆ ಮಾತನಾಡಬೇಕಿದೆ. ಖಾಲಿ ಇರುವ ಉದ್ಯೋಗಗಳ ಬಗ್ಗೆ ಖಾಸಗಿಕರಣದ ಬಗ್ಗೆ ಮಾತನಾಡಬೇಕಿದೆ. ಒಳಮೀಸಲಾತಿ ಜಾರಿ ನಂತರವೂ ಹೋರಾಟ ಮತ್ತು ಚರ್ಚೆಗಳು ನಿರಂತರವಾಗಿ ಮುಂದುವರಿಯಬೇಕಿದೆ ಎಂದು ತಿಳಿಸಿದರು.

ಉಸಿರು ಬಂದಿದೆ
30 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದ ಮಾದಿಗರ ಆಶಯಕ್ಕೆ ಪೂರವಾಗಿ ಎಲ್ಲ ಸರ್ಕಾರಗಳು ಸ್ಪಂದಿಸಿದ್ದವು. ಆದರೆ, ಒಳಮೀಸಲಾತಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂಬ ವಿಷಯ ಸಮಸ್ಯೆ ಆಗಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪು ನಮಗೆ ಉಸಿರು ಕೊಟ್ಟಿದೆ ಎಂದು ಮಾಜಿ ಸಚಿವ, ಕಾರ್ಯಕ್ರಮ ರುವಾರಿ ಎಚ್.ಆಂಜನೇಯ ಹೇಳಿದರು.

ಮಾದಿಗ ಮತ್ತು ಸಮಗಾರ, ಮೋಚಿ ಮತ್ತಿತರ ಎಡ ಗುಂಪಿನಲ್ಲಿರುವ ಸಮುದಾಯಗಳ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯನ್ನು ಎಲೆಎಲೆಯಾಗಿ ಸಭೆಯಲ್ಲಿ ಬಿಚ್ಚಿಟ್ಟ ಆಂಜನೇಯ, ಪರಿಶಿಷ್ಟ ಜಾತಿಯಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳು ತಮ್ಮ ಹಕ್ಕನ್ನು ಪಡೆಯುವಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಒಳಮೀಸಲಾತಿ ಜಾರಿ ಆಗುವ ಭರವಸೆ ನಮ್ಮಲ್ಲಿ ಬದುಕು ಆಸೆ ಮೂಡಿಸಿದೆ ಎಂದರು.

ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳ ಮೀಸಲಾತಿ ಅನುಷ್ಠಾನಗೊಳಿಸಲು ತಕ್ಷಣವೇ ಕ್ರಮ ತೆಗೆದುಕೊಂಡು ಒಳ ಮೀಸಲಾತಿ ಹಂಚಿಕೆ ಮಾಡಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚರಣಾ ಆಯೋಗವನ್ನು ರಚಿಸಿ, ವರದಿ ನೀಡುವಂತೆ ಆದೇಶ ಮಾಡಿದ್ದಾರೆ. ಈಗ ನ್ಯಾಯಮೂರ್ತಿಗಳು ನಮ್ಮ ನೋವು ಆಲಿಸಿ ತಾಯಿ ಹೃದಯದಲ್ಲಿ ಮೀಸಲು ಹಂಚಿಕೆ ಮಾಡಬೇಕು ಎಂದು ಕೋರಿದರು.

ಕೋರ್ಟ್ ನೆನಪಿಸಿದ ಸಭೆ

ವೇದಿಕೆಯೇ ಬಹಳ ವಿಶೇಷವಾಗಿ ನಿರ್ಮಾಣ ಮಾಡಲಾಗಿತ್ತು. ಬುದ್ಧ, ಬಸವಣ್ಣ, ಅಂಬೇಡ್ಕರ್, ಬಾಬು ಜಗಜೀವನರಾಂ, ಮಾದಾರ ಚೆನ್ನಯ್ಯ, ಹರಳಯ್ಯ ಭಾವಚಿತ್ರ ವೇದಿಕೆ ಮೇಲಿಡಲಾಗಿತ್ತು. ಜತೆಗೆ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಬೃಹತ್ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಆಗಮಿಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್, ತಮಗೆ ಒಬ್ಬರಿಗೆ ಬೃಹತ್ ಕುರ್ಚಿ ಕಂಡು ಮೌನಕ್ಕೆ ಜಾರಿದರು. ಬಳಿಕ ಆ ಬೃಹತ್ ಕುರ್ಚಿ ತೆಗೆಸಿ ಸಾಮಾನ್ಯ ಆಸನವನ್ನು ತರಿಸಿಕೊಂಡು ಕುಳಿತರು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಿದ್ದಂತೆ ವೇದಿಕೆಯಿಂದ ಎಲ್ಲ ಗಣ್ಯರು, ಜನಪ್ರತಿನಿಧಿಗಳು ಕೆಳಗೆ ಇಳಿದರು. ಆಂಜನೇಯ ಪ್ರಸ್ತಾವಿಕ ಮಾತುಗಳನ್ನಾಡಿದ ಬಳಿಕ ವೇದಿಕೆ ಕೆಳಗಡೆ ಕುಳಿತಿದ್ದ ಗಣ್ಯಾತೀಗಣ್ಯರು ನ್ಯಾ.ನಾಗಮೋಹನ್ ದಾಸ್ ಅವರಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡರು, ಲಿಖಿತವಾಗಿ ಮನವಿ ಸಲ್ಲಿಸಿದರು. ಇಡೀ ಸಭೆ ಕೋರ್ಟ್ ಸಭಾಂಗಣವನ್ನು ನೆನಪಿಸಿತು. ಮೇಲೆ ನ್ಯಾಯಮೂರ್ತಿಗಳು, ಕೆಳಗಡೆ ಆಸನಗಳಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಯ ಮುಖಂಡರು ಇದ್ದರು. ಆಂಜನೇಯ ಅವರು ಆಯೋಜಿಸುವ ಸಭೆಗಳು ವಿಶೇಷತೆ ಇರುತ್ತಿದ್ದವು, ಇಂದಿನ ಸಭೆ ಕೋರ್ಟ್‍ನ್ನು ನೆನಪಿಸುವ ರೀತಿ ಆಯೋಜಿಸಿದ್ದು ನೆರೆದಿದ್ದವರ ಮೆಚ್ಚುಗೆ ಗಳಿಸಿತು.

Share. Facebook Twitter Pinterest LinkedIn Tumblr WhatsApp Email
Previous Articleಚಿತ್ರಹಳ್ಳಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಶ್ರೀಗಂಧ ಮರಗಳ್ಳರ ಬಂಧನ
Next Article ಕಾಂಗ್ರೆಸ್ ದೊಡ್ಡಾಟ ಬಯಲಾಟ ಆಡುವ ನಾಟಕ‌ ಕಂಪನಿ
D Kumaraswamy
  • Tumblr

Related Posts

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

December 13, 2025

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

December 12, 2025

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025
Leave A Reply Cancel Reply

Recent Posts
  • ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.