ತಾಯಿ ಹುಟ್ಟುಹಬ್ಬ ಆಚರಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

ಕ್ರೀಡೆ

ಬೆಂಗಳೂರು:- ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ತಾಯಿ ರಜನಿ ತೆಂಡುಲ್ಕರ್ ಅವರ 83ನೇ ವರ್ಷದ ಹುಟ್ಟುಹಬ್ಬ ಆಚರಿಸಿದರು. ತಾಯಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ದಿಗ್ಗಜ ಪ್ರಕಟಿಸಿದ್ದಾರೆ. ಕೋವಿಡ್-19 ರಿಂದಾಗಿ ಕುಟುಂಬದ ಇತರ ಸದಸ್ಯರು ಸಂಭ್ರಮದಲ್ಲಿ ಭಾಗಿಯಾಗಿಲ್ಲ. ಬದಲಿಗೆ ವರ್ಚುವಲ್ ವಿಡಿಯೋ ಕಾಲ್ ಮೂಲಕ ಕೇಕ್ ಕತ್ತರಿಸುವುದನ್ನು ನೋಡಿಕೊಂಡಿದ್ದಾರೆ. ತುಂಬಾ ಸಂತೋಷದ ಸಂಜೆಯಾಗಿತ್ತು. ಅಮ್ಮನ 83ನೇ ಹುಟ್ಟುಹಬ್ಬ ಆಚರಿಸಲಾಯಿತು. ಸಹೋದರು ಹಾಗೂ ಸಹೋದರಿಯರು ವಿಡಿಯೋ ಕಾಲ್ ಮೂಲಕ ನಮ್ಮನ್ನು ಸೇರಿಕೊಂಡಿದ್ದರು ಎಂದು ಸಚಿನ್ ಬರೆದುಕೊಂಡಿದ್ದಾರೆ.

 

 

 

Leave a Reply

Your email address will not be published. Required fields are marked *