ನಿಜವಾಯ್ತು ಮಾಜಿ ಸಿಎಂ ಸಿದ್ದು ಭವಿಷ್ಯ; ಗೆಲುವಿನತ್ತ ಜೋ ಬಿಡನ್
ಬೆಂಗಳೂರು : ಇಡೀ ವಿಶ್ವವೇ ಎದುರು ನೋಡಿದ್ದ ಅಮೆರಿಕಾದ ಅಧ್ಯಕ್ಷಿಯ ಚುನಾವಣೆ ವಿಚಾರದಲ್ಲಿ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ನುಡಿದ ಭವಿಷ್ಯ ನಿಜವಾಗಿದೆ.ಬುಧವಾರ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಅಮೆರಿಕಾದಲ್ಲಿ ಮೋದಿ ಹೆಸರು ನಡೆಯೋದಿಲ್ಲ. ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ ಎಂದು ಹೇಳಿದ್ದರು.ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿ ಕೊಂಡು ಮತಯಾಚಿಸಿದ್ದಾರೆ. ಆದರೆ ಅಮೆರಿಕಾ ಚುನಾವಣೆಯೇ ಬೇರೆ. ಅಲ್ಲಿನ ಜನರು ಮೋದಿ ಮುಖ ನೋಡಿ, ಹೆಸರು ಕೇಳಿ ವೋಟು ಹಾಕಲ್ಲ ಎಂದು ಹೇಳಿದ್ದರು. ಅದರಂತೆ ಜೋ ಬಿಡನ್ ಗೆಲುವು ಬಹುತೇಕ ಖಚಿತವಾಗಿದೆ.

ಬಿಡೆನ್ ಪ್ರಸ್ತುತ 264 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಅವರು ಇನ್ನೂ 6 ಎಲೆಕ್ಟೊರಲ್ ಮತಗಳನ್ನು ಪಡೆದರೆ ಅವರು ಮ್ಯಾಜಿಕ್ ನಂಬರ್ ತಲುಪುತ್ತಾರೆ. ಆದರೆ ಟ್ರಂಪ್ ಕೇವಲ 214 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ಬಹುತೇಕ ಸ್ಪರ್ಧೆಯಿಂದ ಹಿಂದೆ ಸರಿದಂತೆ ಎಂದು ಹೇಳಲಾಗುತ್ತಿದೆ.




