ಕಾಂಗ್ರೆಸ್ ಟಿಕೆಟ್ ಹರಾಜಾಯಿತು. ನಮಗೆ ಅದರಲ್ಲಿ ಭಾಗವಹಿಸಲು ಶಕ್ತಿ ಇಲ್ಲದ ಕಾರಣ ಹಾಗೂ ಸಾಕಷ್ಟು ಪ್ರಯತ್ನಿಸಿದ್ದೆ ಆದರೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಅಭಿಮಾನಿ ಗಳು ಮತ್ತು ಹಿತೈಷಿಗಳ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದ್ದೇವೆ ಎಂದು ಮಾಜಿ ಶಾಸಕ ಎಸ್ ಕೆ ಬಸವರಾಜನ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ನಾನು ಕೇಳಲೇ ಇಲ್ಲ, ರಘು ಆಚಾರ್ ಕೇಳಿದ್ದರು, ಆದ್ದರಿಂದ ನಾನು ಕೇಳಲಿಲ್ಲ, ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ಕಾರಣ ರಘು ಆಚಾರ್ ಮನೆಗೆ ಬಂದಿದ್ದರು, ಅವರು ಜೆಡಿಎಸ್ ಟಿಕೆಟ್ ಕೊಡಿಸುತ್ತೇನೆ ಹೊಸದುರ್ಗಕ್ಕೆ ಹೋಗಿ ಚುನಾವಣೆ ಖರ್ಚಿಗೆ ಹಣವನ್ನು ಕೊಡುತ್ತೇನೆ, ಎಂದು ಹೇಳಿದರು. ಆದರೆ ನಾವು ಕ್ಷೇತ್ರ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದಿದ್ದೇವೆ, ಆದ್ದರಿಂದ ಅವರು ಹಿಂದೆ ಸರಿದರು.ಇದರಿಂದ ಅಭಿಮಾನಿಗಳು ಒತ್ತಾಯ ಮಾಡಿದ್ದು, ಈ ಬಾರಿ ಕ್ಷೇತ್ರಕ್ಕೆ ಪತ್ನಿ ಯವರನ್ನು ಪಕ್ಷೇತರರಾಗಿ ಕಣಕ್ಕೀಳಿಸುತ್ತಿದ್ದೇವೆ ಎಂದರು. ಇನ್ನು ಮಾತನಾಡಿದ ಸೌಭಾಗ್ಯ ಬಸವರಾಜನ್ ಅವರು, ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವ ತನಕ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಚಿತ್ರದುರ್ಗ ವಿಧಾನ ಕ್ಷೇತ್ರದ ಪ್ರತಿಯೊಂದು ಹಳ್ಳಿಯೂ ಪರಿಚಯವಿದೆ. ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಮಾಡುತ್ತಾ ಬಂದಿದ್ದೇವೆ. ಮಹಿಳೆ ಯರು ಯುವಕರು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಗೆಲ್ಲುವ ಭರವಸೆ ಇದೆ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದೇವೆ ಎಂದರು.





