ಯಾವುದೇ ಕ್ಷೇತ್ರದಲ್ಲಿದ್ದರೂ ಶೋಷಿತರ ಅಸಹಾಯಕರ ಮತ್ತು ದೀನ ದುರ್ಬಲರ ಪರವಾಗಿ ಸಮಾಜ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ನಿವೃತ್ತ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದಲ್ಲಿ ಬನಶ್ರೀ ವೃದ್ಧಾಶ್ರಮದಲ್ಲಿ ಸಾಹಿತಿ ಮತ್ತು ಪತ್ರಕರ್ತ ಕೋಲುಕುಂಟೆ ತಿಪ್ಪೇಸ್ವಾಮಿ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ದರು. ಸಮಾಜದಲ್ಲಿ ಸಮಾಜ ಸೇವೆ ಮಾಡುವ, ಅದೆಷ್ಟೋ ಜನರಿದ್ದಾರೆ. ಸೇವೆ ಮಾಡಲು ಜನರಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು, ಆಗ ಮಾತ್ರ ಇಂಥ ಜನರು ತಮ್ಮ ಸ್ವಾರ್ಥ ಮರೆತು ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. ಕೋರ್ಲಕುಂಟೆ ತಿಪ್ಪೇಸ್ವಾಮಿ ಮಾಧ್ಯಮ ಕ್ಷೇತ್ರಕ್ಕೆ ಮತ್ತು ಕನ್ನಡ ಸರಸ್ವತ ಲೋಕಕ್ಕೆ ನೀಡುತ್ತಿರುವ ಕೊಡುಗೆ ಅನನ್ಯ,ವೃದ್ಧಾಶ್ರಮದಲ್ಲಿ ಇವರು ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಇಂತಹ ಸ್ಥಳಗಳಲ್ಲಿ ದಾನ ಮತ್ತು ಪರೋಪಕಾರಗಳೊಂದಿಗೆ ಆಚರಣೆಗಳು ನಡೆದಲ್ಲಿ ಇಂತಹ ದಾನಿಗಳ ಆಯಸ್ಸು ಹತ್ತು ವರ್ಷ ಮುಂದಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಸಮಾಜಮುಖಿ ಮತ್ತು ನಿಸ್ವಾರ್ಥ ಕಾರ್ಯಕ್ಕೆ ಯುವಕರು ಮತ್ತು ವಿದ್ಯಾವಂತರು ಮುಂದಾಗಬೇಕೆಂದು ಕರೆ ನೀಡಿದರು.
ಕೋರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಇಂತಹ ಸತ್ಕಾರ್ಯದಲ್ಲಿ ಭಾಗಿಯಾಗಿ ಜನ್ಮದಿನಾಚರಣೆ ಆಚರಿಸಿಕೊಳ್ಳಲು ಅನುವು ಮಾಡಿಕೊಟ್ಟ ವೃದ್ಧಾಶ್ರಮದ ವ್ಯವಸ್ಥಾಪಕಿ ಮಂಜುಳಮ್ಮ ಇವರನ್ನು ಮುಕ್ತ ಕಂಠ ದಿಂದ ಶ್ಲಾಘಿಸಿದರು. ನಿರಂತರವಾಗಿ ತಾಲೂಕಿನ ಬೇರೆ ಬೇರೆ ಸ್ಥಳದಲ್ಲಿ ಇಂತಹ ಸ ತ್ಕಾರ್ಯಗಳು ನಡೆದಲ್ಲಿ ನವ ಸಮಾಜದ ನಿರ್ಮಾಣ ಸಾಧ್ಯವೆಂದರು.
ವೃದ್ಧಾಶ್ರಮದ ಮಂಜುಳಮ್ಮ ಸನ್ಮಾನಿಸಿ ಕನ್ನಡ ನಾಡು ನುಡಿಯ ಬಗ್ಗೆ ತಿಪ್ಪೇಸ್ವಾಮಿ ಇನ್ನು ಹೆಚ್ಚಿನ ಯಶಸ್ಸು ಗಳಿಸಲೆಂದು ಆಶಿಸಿದರು.