ಚಿತ್ರದುರ್ಗ, ಮಾ17: ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಅವರ ಚಿಕ್ಕಮ್ಮ ಸುಮಿತ್ರ ಬ್ರಹ್ಮ ಕುಮಾರಿ ಅವರು, ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗಿನ ಜಾವ ಮನೆಯಲ್ಲಿ ದೈವಾಧೀನರಾಗಿದ್ದಾರೆ. ಹಾಯ್ಕಲ್ ನ ಮನೆಯಲ್ಲಿ ನಿಧನರಾಗಿದ್ದು,ಮೃತರಿಗೆ 86 ವರ್ಷ ವಯಸ್ಸಾಗಿತ್ತು.ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ಅಂತ್ಯ ಕ್ರಿಯೆಯನ್ನು ಇಂದು ಚಿತ್ರದುರ್ಗ ನಗರದ ಮುಕ್ತಿ ಧಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.





