ಚಿತ್ರದುರ್ಗ,ಹಿರಿಯೂರು, ಏ25: ಗೆಳತಿ ಸೈಕಲ್ ತುಳಿಯಲು ಕೊಡಲಿಲ್ಲವೆಂದು ಮುನಿಸಿಕೊಂಡು 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರಿನಲ್ಲಿಂದು ಮನೆಯಲ್ಲಿ ನಡೆದಿದೆ. ಹರಿಶ್ಚಂದ್ರ ಘಾಟ್ ನಿವಾಸಿ ರುದ್ರಮ್ಮ ಶ್ರೀನಿವಾಸ್ ಎನ್ನುವರ ಪುತ್ರಿ ಸ್ಪಂದನ (11) ಮೃತ ಬಾಲಕಿ.ಸ್ನೇಹಿತೆ ಸೈಕಲ್ ತುಳಿಯಲು, ಕೊಡದಿದ್ದಕ್ಕೆ ಮನೆಗೆ ಹೋಗಿ ನೇಣು ಬಿಗಿದು ಕೊಂಡಿದ್ದಾಳೆ.ಮನೆಯ ಬಾಗಿಲು ಬೋಲ್ಟ್ ಹಾಕಿಕೊಂಡಿದ್ದರಿಂದ ಬಾಗಿಲು ಒಡೆದು ತೆಗೆಯಲಾಯಿತು.ಸ್ಥಳಕ್ಕೆ ಡಿವೈಎಸ್ ಪಿ ಶಿವಕುಮಾರ್ ಹಾಗೂ ಸಿಪಿಐ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





