Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ರಾಜ್ಯ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಊಹೆಗಳ ಮೇಲೆ ಮಾತಾಡುವುದು ಒಳ್ಳೆ ಬೆಳವಣಿಗೆಯಲ್ಲ: ಸಿಎಂ ಸಿದ್ದರಾಮಯ್ಯ
ರಾಜ್ಯ

ಊಹೆಗಳ ಮೇಲೆ ಮಾತಾಡುವುದು ಒಳ್ಳೆ ಬೆಳವಣಿಗೆಯಲ್ಲ: ಸಿಎಂ ಸಿದ್ದರಾಮಯ್ಯ

D KumaraswamyBy D KumaraswamyNovember 23, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

 

ಊಹೆಗಳ ಮೇಲೆ ಮತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿ ಜನಗಣತಿ ವರದಿ ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬಾಗಲಕೋಟೆಯ ನವನಗರದ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

 

 

ವರದಿ ಸಲ್ಲಿಕೆಯಾದ ನಂತರ ನೋಡೋಣ. ಸುಮ್ಮನೆ ಊಹೆಗಳ ಮೇಲೆ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಮೂಲ ವರದಿ ಕಳೆದಿದೆ ಎಂದು ಹಾಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಯಪ್ರಕಾಶ್ ಹೇಳಿಕೆ ಬಗ್ಗೆ ಮಾತನಾಡಿ, ಅವರನ್ನು ಕರೆದು ಮಾತನಾಡುತ್ತೇನೆ ಎಂದರು.

ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರಿಗೆ ವರದಿಯಲ್ಲಿ ಏನಿದೆ ಎಂದು ಗೊತ್ತಿದೆಯೇ ಎಂದರು. ಯಾರೇ ಆಗಲಿ ಗೊತ್ತಿಲ್ಲದೆ ಮಾತನಾಡ ಬಾರದು. ಸಮಾಜ ಏಕೆ ಒಡೆಯುತ್ತೇವೆ? ಎಂದು ಪ್ರಶ್ನಿಸಿದರು. ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿಗಣತಿ ಸ್ವೀಕರಿಸಿದ್ದಾರೆ. ಸಮಾಜ ಒಡೆದುಬಿಟ್ಟರೆ ಎಂದರು.
ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದರು.

ಬಿಜೆಪಿಯಲ್ಲಿ ಬೆಂಕಿ ಹತ್ತಿಕೊಂಡಿದೆ
ಅರವಿಂದ್ ಲಿಂಬಾವಳಿ ಯವರು ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಅಧ್ಯಕ್ಷ ರ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ ವಿ.ಸೋಮಣ್ಣ 6 ನೇ ತಾರೀಖಿನ ನಂತರ ತಮ್ಮ ಅನಿಸಿಕೆ ತಿಳಿಸುವ ಬಗ್ಗೆ ಮಾತನಾಡಿ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರನವರನ್ನು ಅಧ್ಯಕ್ಷರನ್ನಾಗಿ ಹಾಗೂ ಆರ್.ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದ ಮೇಲೆ ಬೆಂಕಿ ಹತ್ತಿಕೊಂಡಿದೆ. ಬಹಳಷ್ಟು ಜನರಿಗೆ ಅಸಮಾಧಾನವಾಗಿದೆ. ಇದು ಏನಾಗುತ್ತದೆ ಎಂದು ಗೊತ್ತಿಲ್ಲ. ಅದು ಜ್ವಾಲೆಯಾಗುತ್ತದೆಯೋ ಅವರ ಬುಡಕ್ಕೆ ಬೆಂಕಿ ಹತ್ತುಕೊಳ್ಳುತ್ತದೆಯೋ ಗೊತ್ತಿಲ್ಲ. ಬೆಂಕಿ ಅಂತೂ ಹತ್ತಿಕೊಂಡಿದೆ ಎಂದರು.

ಪಕ್ಷಕ್ಕೆ ಸೇರ್ಪಡೆಯಾಗುವವರು ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕು
ನಾವು ಯಾರನ್ನೂ ಕಾಂಗ್ರೆಸ್ಸಿಗೆ ಕರೆಯೋಲ್ಲ ಅವರಾಗಿಯೇ ಬಂದರೆ ಸೇರಿಸಿಕೊಳ್ಳುತ್ತೇವೆ. ನಾನು ಯಾರನ್ನೂ ಸಂಪರ್ಕಿಸಿಲ್ಲ . ಯಾರು ನಮ್ಮ ನಾಯಕತ್ವವನ್ನು ಒಪ್ಪಿಕೊಂಡು ಅವರಾಗಿಯೇ ಬರುತ್ತಾರೋ ಅವರನ್ನು ಸೇರಿಸಿಕೊಂಡಿದ್ದೇವೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ಬನ್ನಿ ಎಂದು ಕರೆಯಲು ಹೋಗಿಲ್ಲ. ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕಲ್ಲ. ಬಿಜೆಪಿ ಯಲ್ಲಿ ಬಹಳ ವರ್ಷ ಇದ್ದವರು ಆ ಸಿದ್ಧಾಂತ ವನ್ನು ಒಪ್ಪಿರುತ್ತಾರೆ.ಅದನ್ನು ಬಿಟ್ಟು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Share. Facebook Twitter Pinterest LinkedIn Tumblr WhatsApp Email
Previous Articleವರದಿ ಕೊಡುವ ಮುನ್ನವೇ ಏಕೆ ವಿರೋಧಿಸುತ್ತಿದ್ದೀರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Article ಹುತಾತ್ಮ ಯೋಧ ಪ್ರಾಂಜಲ್ ನ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ
D Kumaraswamy
  • Tumblr

Related Posts

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

December 13, 2025

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

December 12, 2025

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025
Leave A Reply Cancel Reply

Recent Posts
  • ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.