ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸಿಎಂ ಮುಂದೆ ಪ್ರತಿಭಟಿಸಲು ಆಗಮಿಸಿದ್ದ ಮ
ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ಯತರನ್ನು ಪೊಲೀಸರು ಬಂಧಿಸಿ ಕರೆದೊಯ್ದ ಘಟನೆ ನಡೆಯಿತು.
ಚಿತ್ರದುರ್ಗದ ಮುರುಘಾ ಮಠದ ಹೆಲಿ ಪ್ಯಾಡ್ ಗೆ ಚಿತ್ರದುರ್ಗದಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಬರುತ್ತಾರೆ ಎಂಬ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನಿರ್ದೇಶನದಂತೆ ಇಂದು 2 ಎ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ಮೀಸಲಾತಿ ನೀಡುವಂತೆ ಪ್ರತಿಭಟಿಸಿ ಘೋಷಣೆ ಹಾಕಲು ಹೆಲಿ ಪ್ಯಾಡ್ ಬಳಿ ಆಗಮಿಸಿದ್ದರು. ಆದರೆ ಈ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಪೊಲೀಸರು ಅವರೆಲ್ಲರನ್ನು ಬಂಧಿಸಿ ವ್ಯಾನ್ ನಲ್ಲಿ ಕೂರಿಸಿದರು. ಇದರ ನಡುವೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ವಾಗ್ವಾದ ನಡೆಯಿತು. ಆದರೂ ಪೊಲೀಸರು ಅವರನ್ನು ವ್ಯಾನಿನಲ್ಲಿ ಕೂರಿಸಿಕೊಂಡು ಠಾಣೆಯ ಕಡೆಗೆ ಕರೆದೊಯ್ದರು.





