ಬಸ್ಸಿನ ಮೇಲ್ಛಾವಣಿ ಮೇಲೆ 30 ಜನರನ್ನು ಕೂರಿಸಿಕೊಂಡು, ಚಾಲನೆ ಮಾಡಿಕೊಂಡು ಬರುತ್ತಿದ್ದ ಗಾದ್ರಿ ಲಿಂಗೇಶ್ವರ ಬಸ್ ಚಾಲಕ ಕೊಂಚೋಬಳಪ್ಪ ಹಾಗೂ ಬಸ್ ಮಾಲೀಕರ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಗಲೂರು ಕಡೆಯಿಂದ ಚಿತ್ರದುರ್ಗಕ್ಕೆ ಬರುವಾಗ ಬಸ್ ಮೇಲ್ಛಾವಣಿಯಲ್ಲಿ 30 ಜನರನ್ನು ಕೂರಿಸಿಕೊಂಡು ಅಜಾಗರೂಕತೆಯಿಂದ ಅಪಾಯವುಂಟು ಮಾಡುವ ರೀತಿಯಲ್ಲಿ, ಅತೀ ವೇಗವಾಗಿ ಚಲಾಯಿಸಿಕೊಂಡು ಬರಲಾಗುತ್ತಿತ್ತು. ಇದನ್ನು ತಡೆದ ಸಂಚಾರಿ ಪೊಲೀಸರು ಬಸ್ ಮಾಲೀಕ ಜಯಕುಮಾರ್ ಮತ್ತು ಚಾಲಕ ಕೆಂಚೋಬಳಪ್ಪ ನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಣಾಪಾಯವಾಗುವಂತೆ ಬಸ್ ಚಾಲನೆ ಮಾಡಿಕೊಂಡು ಬರದಂತೆ ಸಲಹೆ ನೀಡಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ .





