ಟಯರ್ ಬ್ಲಾಸ್ಟ್ ಟ್ರಾಕ್ಟರ್ ಬೈಕ್ ಗೆ ಡಿಕ್ಕಿ: ಬೈಕ್ ಸವಾರ ಸಾವು
ಚಿತ್ರದುರ್ಗ:ಟ್ರಾಕ್ಟರ್ ಟೈಯರ್ ಬ್ಲಾಸ್ಟ್ ಆಗಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ,ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರದ ಬಳಿ ಗುರುವಾರ ನಡೆದಿದೆ.
ಮೃತನನ್ನು ಹಾಲೇಶ್ (22) ನಂದಿಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ. ಹಾಲೇಶ್ ನಂದಿಹಳ್ಳಿಯಿಂದ ಭರಮಸಾಗರದ ಹಳೆ ಬಸ್ ನಿಲ್ದಾಣದ ಬಳಿ ನೀರು ತರಲು ಬಂದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.





