Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ರಾಜ್ಯ

    ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

    December 13, 2025

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ರಾಜೀನಾಮೆ ಕೊಡಲು ಬಂದ ಉಪಾಧ್ಯಕ್ಷರಿಂದ ನಗರಸಭೆ ಮಾಜಿ ಸದಸ್ಯನಿಂದ ಸರ್ಕಾರಿ ಆಸ್ತಿ ಕಬಳಿಕೆ ವಿರುದ್ಧ. ದಿಢೀರ್ ಪ್ರತಿಭಟನೆ
ರಾಜ್ಯ

ರಾಜೀನಾಮೆ ಕೊಡಲು ಬಂದ ಉಪಾಧ್ಯಕ್ಷರಿಂದ ನಗರಸಭೆ ಮಾಜಿ ಸದಸ್ಯನಿಂದ ಸರ್ಕಾರಿ ಆಸ್ತಿ ಕಬಳಿಕೆ ವಿರುದ್ಧ. ದಿಢೀರ್ ಪ್ರತಿಭಟನೆ

D KumaraswamyBy D KumaraswamyJuly 8, 2025No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

 

ರಾಜೀನಾಮೆ ಕೊಡಲು ಬಂದ ಉಪಾಧ್ಯಕ್ಷರಿಂದ ನಗರಸಭೆ ಮಾಜಿ ಸದಸ್ಯನಿಂದ ಸರ್ಕಾರಿ ಆಸ್ತಿ ಕಬಳಿಕೆ ವಿರುದ್ಧ. ದಿಢೀರ್ ಪ್ರತಿಭಟನೆ

 

 

ಚಿತ್ರದುರ್ಗ ,08: ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಇಂದು ರಾಜೀನಾಮೆ ಸಲ್ಲಿಸಲು ಆಗಮಿಸುತ್ತಿದ್ದಾಗ, ನಾಟಕೀಯ ಬೆಳವಣಿಗೆಯೊಂದು‌ ಇಂದು ನಡೆಯಿತು. ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಮತ್ತು ಪತಿ ಚಕ್ರವರ್ತಿ ಜೊತೆಯಾಗಿ ರಾಜೀನಾಮೆ ಸಲ್ಲಿಸಲು‌ ನಗರಸಭೆ ಕಮೀಷನರ್ ರೇಣುಕಾ ರನ್ನು‌ ನೋಡಲು ಬರುತ್ತಿದ್ದರು. ಇದರ ಮಧ್ಯೆ ನಗರಸಭೆ ಬಾಗಿಲ‌ ಬಳಿ  ಮಾಜಿ ಸದಸ್ಯ ಗಾಡಿ‌ ಮಂಜುನಾಥ್ ಮತ್ತು ಚಕ್ರವರ್ತಿ ನಡುವೆ ಮಾತಿನ ಚಕಮಕಿ‌ ನಡೆಯಿತು. ಚಕಮಕಿಗೆ ಚುನಾವಣೆಯ ಸಮಯದಲ್ಲಿ ಇಬ್ಬರ ನಡುವಿನ ವೈಷಮ್ಯವೇ ಕಾರಣ ಎಂದು‌ ತಿಳಿದು‌ ಬಂದಿದೆ. ಇಬ್ಬರ ನಡುವಿನ ಮಾತಿನ‌ ಚಕಮಕಿಯಿಂದ ಸಿಟ್ಟಾದ ಚಕ್ರವರ್ತಿ, ಪತ್ನಿ ಶ್ರೀದೇವಿ ಅವರ ಚುನಾವಣೆ ಸಮಯದಲ್ಲಿ, ನನ್ನ ಮೇಲೆ ಸುಳ್ಳು ಆರೋಪ ಮಾಡಿ, ಮೇಲಾಧಿಕಾರಿಗಳಿಗೆ ದೂರು‌ ನೀಡಿ, ಅಮಾನತ್ತುಗೊಳಿಸಲು ಕಾರಣರಾಗಿದ್ದರು. ಸುಖಾ ಸುಮ್ಮನೆ ಕಾಲು ಕೆರೆದು ‌ಜಗಳ ಮಾಡುತ್ತಾರೆ. ಇಷ್ಟೆ ಅಲ್ಲದೆ ಸ್ವಾಮಿ‌ವಿವೇಕಾನಂದ ನಗರದಲ್ಲಿ ನಗರಸಭೆಯ ನಾಲ್ಕು‌ಕೋಟಿ‌ ರೂಪಾಯಿ‌ ಬೆಲೆ‌ ಬಾಳುವ ಜಾಗವನ್ನು‌ ಗಾಡಿ ಮಂಜುನಾಥ್ ಕಬಳಿಸಿದ್ದಾರೆ ಎಂದು‌ ಆರೋಪಿಸಿದರು. ಇದನ್ನೆ ಮುಂದು ಮಾಡಿಕೊಂಡು ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಕಮಿಷನರ್ ಮುಂದೆ ನೆಲದಲ್ಲಿಯೇ ಕುಳಿತು, ನಗರಸಭೆ ಆಸ್ತಿ‌ ಕಬಳಿಕೆ ಮಾಡಿದವರ ವಿರುದ್ಧ ಕ್ರಮ‌ಕ್ಕೆ ಈ‌ ಹಿಂದೆ ದೂರು‌ ನೀಡಿದ್ದೆ, ಆದರೆ ನೀವು ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನೆ ಆರಂಭಿಸಿದರು. ಇದರಿಂದ ತಬ್ಬಿಬ್ಬಾದ ಪೌರಾಯುಕ್ತರಾದ ರೇಣುಕಾ‌ ಅವರು, ಶ್ರೀದೇವಿ ಅವರಿಗೆ ಸಮಾಧಾನ ಪಡಿಸಿ, ಮೇಲೆ ಕುಳಿತುಕೊಳ್ಳಲು ಮನವಿ‌ ಮಾಡಿದರೂ ಕುಳಿತುಕೊಳ್ಳಲಿಲ್ಲ. ನಂತರ ಪ್ರತಿಭಟನೆ ಸ್ಥಳದಿಂದಲೇ ಪೌರಾಯುಕ್ತರನ್ನು ಸ್ವಾಮಿ‌ವಿವೇಕಾನಂದ ನಗರಕ್ಕೆ ಸ್ಥಳ ಪರಿಶೀಲನೆಗೆ ಕರೆದುಕೊಂಡು‌ ಹೋದರು. ಪರಿಶೀಲನೆ ಮಾಡಿಕೊಂಡು ಬಂದ ನಂತರ ಶ್ರೀದೇವಿ ಜಿಲ್ಲಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಉಪಾಧ್ಯಕ್ಷೆ ಶ್ರೀದೇವಿ‌ಚಕ್ರವರ್ತಿ ಅವರ ರಾಜೀನಾಮೆ ಯಾಕೆ  : ನಾನು ಈ ಹಿಂದೆ ಪ್ಲಾಸ್ಟಿಕ್ ಮರು‌ ಬಳಕೆ ಮಾಡದಂತೆ ತಡೆಯಬೇಕು. ಗಾಂಧಿ ವೃತ್ತದಲ್ಲಿರುವ ಮಳಿಗೆ ಬಳಿ ಸ್ಬಚ್ಛತೆ ಮಾಡಿಸಬೇಕು. ಹಾಗೂ ಜಕಾತಿ ವಸೂಲಿ ನಿಲ್ಲಿಸಿದ್ದರಿಂದ, ನನ್ನ ಮೇಲೆ ರಾಜಕೀಯ ದ್ವೇಷದಿಂದ ಅವಿಶ್ವಾಸ ತರಲು ರಾಜಕಾರಣಿಗಳು‌ ಮುಂದಾಗಿದ್ದರು. ನಾನು ನಗರದ ಅಭಿವೃದ್ದಿ ಬಗ್ಗೆ ಮಾತಾಡಿದ್ದಕ್ಕೆ ನನ್ನ ವಿರುದ್ಧ ಅವಿಶ್ವಾಸ ತರಲು ನಿರ್ಣಯಿಸಿದ್ದು, ಅವರು ಅವಿಶ್ವಾಸ ತರುವ ಮುನ್ನವೇ ನಾನೇ ರಾಜೀನಾಮೆ ಕೊಡುತ್ತಿದ್ದೇನೆ ಎಂದರು.

Share. Facebook Twitter Pinterest LinkedIn Tumblr WhatsApp Email
Previous Articleಮತದಾರರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ: ಶಾಸಕ ಎಂ ಚಂದ್ರಪ್ಪ
Next Article ಅಲೆಮಾರಿಗಳ ರಕ್ಷಣೆ ಸರ್ಕಾರದ ಹೊಣೆಪ್ರತ್ಯೇಕ ಮೀಸಲು ಸೌಲಭ್ಯ ಅಗತ್ಯ:ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ
D Kumaraswamy
  • Tumblr

Related Posts

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

December 13, 2025

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

December 12, 2025

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025
Leave A Reply Cancel Reply

Recent Posts
  • ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.