Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ದೇಶ»ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರು ಆಕ್ರಮಿಸಲು ಸಾಧ್ಯವಿಲ್ಲ – ಅಮಿತ್ ಶಾ
ದೇಶ

ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರು ಆಕ್ರಮಿಸಲು ಸಾಧ್ಯವಿಲ್ಲ – ಅಮಿತ್ ಶಾ

D KumaraswamyBy D KumaraswamyApril 15, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರು ಆಕ್ರಮಿಸಲು ಸಾಧ್ಯವಿಲ್ಲ –
ಅಮಿತ್ ಶಾ

ಎಲ್ಲಾ ವಿರೋಧಾಭಾಸಗಳನ್ನು ಬದಿಗೊತ್ತಿ, ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಅರುಣಾಚಲ ಪ್ರದೇಶಕ್ಕೆ ಇದು ಹಾಲಿ ಕೇಂದ್ರ ಗೃಹ ಸಚಿವರೂಬ್ಬರ ಮೊದಲ ಭೇಟಿಯಾಗಿದೆ. ಈ ಭೇಟಿಯು ಅನಪೇಕ್ಷಿತ ಶಕ್ತಿಗಳನ್ನು ಎದುರಿಸುವ ಸಶಸ್ತ್ರ ಕಾವಲು ಪಡೆಗಳಿಗೆ ಸ್ಥೈರ್ಯ ವರ್ಧಕವಾಗಿದೆ. ಇದು ಶಾ ಅವರ ಮುಂದೆ ನಿಂತು ಮುನ್ನಡೆಸುವ ನಾಯಕತ್ವದ ಗುಣವನ್ನು ತೋರಿಸುತ್ತದೆ.

ಈ ಪ್ರದೇಶಕ್ಕೆ ಭೇಟಿ ನೀಡಲು ಇದಕ್ಕಿಂತ ಇನ್ನೊಂದು ಉತ್ತಮ ಸಮಯ ಇರಲಿಕ್ಕಿಲ್ಲ. ITBP ಸೈನಿಕರು ಅಚ್ಚರಿ ಪಡುವಂತೆ, ಸೂಕ್ಷ್ಮ ನಿಯಂತ್ರಣ ರೇಖೆಯಿಂದ (LAC) ಕೇವಲ 15 ಕಿಮೀ ದೂರದಲ್ಲಿರುವ ಈಶಾನ್ಯ ರಾಜ್ಯದ ಗುಡ್ಡಗಾಡು ಪ್ರದೇಶವಾದ ಕಿಬಿಥೂದಲ್ಲಿ ಶಾ ಸೈನಿಕರ ನಡುವೆ ಒಂದು ರಾತ್ರಿ ಕಳೆದರು.

ಭಾರತದ ಮೊದಲ ಗ್ರಾಮವಾದ ಕಿಬಿಥೂಗೆ ಗೃಹ ಮಂತ್ರಿಗಳು ಭರ್ಜರಿ ಉಡುಗೊರೆ ನೀಡಿದರು. ಈ ಪ್ರದೇಶವು ಎಲ್ಲಾ ಅಂಶಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂಬ ಅಂಶವನ್ನು ಸಂಪೂರ್ಣವಾಗಿ ಅರಿತುಕೊಂಡ ಅವರು ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (ವಿವಿಪಿ) ಅಡಿಯಲ್ಲಿ ಆ ಪ್ರದೇಶದ ಅಭಿವೃದ್ಧಿಗೆ 4,800 ಕೋಟಿ ರೂ. ಅನುದಾನ ನೀಡಿದರು.

 

 

ಕಳೆದ ಆರ್ಥಿಕ ವರ್ಷದಿಂದ ನಾಲ್ಕು ವರ್ಷಗಳವರೆಗೆ ರಸ್ತೆ ಸಂಪರ್ಕಕ್ಕಾಗಿ ಪ್ರತ್ಯೇಕವಾಗಿ 2,500 ಕೋಟಿ ರೂ. ಸೇರಿದಂತೆ, 4,800 ಕೋಟಿ ರೂ.ಗಳ ಕೇಂದ್ರ ಘಟಕಗಳೊಂದಿಗೆ ‘ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ’ ಅನ್ನು ಸರ್ಕಾರ ನಡೆಸುತ್ತಿದೆ. ಈ ಯೋಜನೆ ಅಡಿಯಲ್ಲಿ, ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಲಡಾಖ್‌ ರಾಜ್ಯಗಳಲ್ಲಿ ಉತ್ತರದ ಗಡಿಗೆ ಹೊಂದಿಕೊಂಡಿರುವ 19 ಜಿಲ್ಲೆಗಳ 46 ಬ್ಲಾಕ್‌ಗಳಲ್ಲಿ 2,967 ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗಾಗಿ ಗುರುತಿಸಲಾಗಿದೆ. ಮೊದಲ ಹಂತದಲ್ಲಿ, 662 ಗ್ರಾಮಗಳನ್ನು ಆದ್ಯತೆಯ ವ್ಯಾಪ್ತಿಗೆ ಗುರುತಿಸಲಾಗಿದೆ, ಇದರಲ್ಲಿ ಅರುಣಾಚಲ ಪ್ರದೇಶದ 455 ಗ್ರಾಮಗಳು ಸೇರಿವೆ.

ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ ಮೂಲಕ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲ ಪ್ರಯತ್ನಿಸುತ್ತಿದೆ. ಮೊದಲನೆಯದಾಗಿ, ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಪ್ರದೇಶದ ಯುವಕರು ಕೆಲಸಕ್ಕಾಗಿ ಇತರ ಸ್ಥಳಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಮತ್ತು ಎರಡನೆಯದಾಗಿ, ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಚೀನಾದ ಆಕ್ರಮಣಕ್ಕೆ ಸುಲಭವಾಗಿ ಪ್ರತೀಕಾರ ತೀರಿಸಲು ಭಾರತದ ಸೈನಿಕರಿಗೆ ಸಹಾಯ ಮಾಡುವುದು. ಇವೆರಡೂ ಮಹತ್ವದ ಕಾರ್ಯತಂತ್ರಗಳಿಗೆ ಕೇಂದ್ರದಿಂದ ಪೂರ್ಣ ಪ್ರಮಾಣದ ಬೆಂಬಲದ ಅಗತ್ಯವಿದೆ.

ಇಂಡೋ ಟಿಬೆಟಿಯನ್ ಗಡಿ ಸೈನ್ಯದ(ITBP) ಸೈನಿಕರಯರೊಂದಿಗಿನ ಸಂವಾದದಲ್ಲಿ, ಶಾ ಅವರನ್ನು ಆಧುನಿಕ ಯುದ್ಧಸಾಮಗ್ರಿಗಳೊಂದಿಗೆ ಸಜ್ಜುಗೊಳಿಸುವುದಾಗಿ ಮತ್ತು ಅವರ ಕುಟುಂಬಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ನಾಲ್ಕನೇ ತಲೆಮಾರಿನ ಸಂಪರ್ಕವನ್ನು ಒದಗಿಸುವ ಭರವಸೆ ನೀಡಿದರು.

ಕಿಬಿಥೂ ಕಾರ್ಯಕ್ರಮದಲ್ಲಿ, ಚೀನಾಕ್ಕೆ ಬಲವಾದ ಸಂದೇಶವನ್ನು ರವಾನಿಸಿದ ಶಾ, ಭಾರತವು ತನ್ನ ಭೂಪ್ರದೇಶದ ಒಂದು ಇಂಚು ಭೂಮಿಯನ್ನು ಕೂಡ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಹೇಳಿದರು. ಯಾರಾದರೂ ಹಾಗೆ ಅತಿಕ್ರಮಿಸಬಹುದಾದ ದಿನಗಳು ಹೋಗಿವೆ. ನಿಜವಾದ ನಾಯಕನಂತೆ ಶಾ, ಶೌರ್ಯ ಕಾರ್ಯಗಳ ಮೂಲಕ “ನಮ್ಮ ದೇಶದ ಗಡಿಯನ್ನು ಯಾರೂ ಮುಟ್ಟಲಾರರು” ಎಂದು ತೋರಿಸಿದ ಇಂಡೋ ಟಿಬೆಟಿಯನ್ ಗಡಿ ಸೈನ್ಯ ಮತ್ತು ಸೇನೆಗೆ ಸಂಪೂರ್ಣ ಶ್ರೇಯಸ್ಸು ನೀಡಿದರು.

ಹಾಗೇ ದಿಟವಾದ ರಾಜ ನೀತಿಜ್ಞನಂತೆ ಮಾತನಾಡುತ್ತಾ , “ಈಗ, ಸೂಜಿ ಮೊನೆಯಷ್ಟು ಭೂಮಿಯನ್ನು ಸಹ ಅತಿಕ್ರಮಿಸಲಾಗುವುದಿಲ್ಲ. ನಮ್ಮ ನೀತಿ ಸ್ಪಷ್ಟವಾಗಿದೆ. ನಾವು ಎಲ್ಲರೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ ಆದರೆ ನಮ್ಮ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಬಿಡುವುದಿಲ್ಲ. “ರಾಷ್ಟ್ರವು ಚಿಂತಾ-ಮುಕ್ತವಾಗಿ ನಿದ್ರಿಸಲು” ಶ್ರಮಿಸುತ್ತಿರುವ ಐಟಿಬಿಪಿ ಯೋಧರನ್ನು ಅಪಾರವಾಗಿ ಶ್ಲಾಘಿಸಿದರು. ಅಮಿತ್ ಶಾ ಅವರ ಸಂದೇಶ ನೆರೆಯ ದೇಶಕ್ಕೆ ಸ್ಪಷ್ಟ ಮತ್ತು ದೃಢವಾಗಿತ್ತು.

Share. Facebook Twitter Pinterest LinkedIn Tumblr WhatsApp Email
Previous Articleಈ ಚುನಾವಣೆಯಲ್ಲಿ ಬಿಜೆಪಿ 120 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ
Next Article ಹೊಳಲ್ಕೆರೆ ಜನರ ಪ್ರೀತಿಗಾಗಿ ಉನ್ನತ ಹುದ್ದೆ ತ್ಯಾಗ ಮಾಡಿದ ಆಂಜನೇಯ
D Kumaraswamy
  • Tumblr

Related Posts

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ: ಅರ್ಜುನ್, ಕೇಶವ

February 10, 2025

ಎಸ್ಸಿ ಪಟ್ಟಿಯಿಂದ ಎಕೆ ಎಡಿ  ಹೆಸರು ತೆಗೆಯಿರಿ: ಮಾಜಿ ಸಚಿವ ಹೆಚ್.ಆಂಜನೇಯ

February 10, 2025

ಲಿಂಗ ಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

February 7, 2025

ವಿಭಿನ್ನ ಚಿತ್ರಕ್ಕಾಗಿ ಮತ್ತೆ ಒಂದಾದ ನಿರ್ದೇಶಕ ಚಿದಂಬರಂ ಹಾಗು ಜೀತು ಮಾಧವನ್

January 2, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.