ರಾಷ್ಟ್ರೀಯ ಹೆಣ್ಣು ಮಕ್ಕಳ ಯುಟೂಬ್ ಲೈವ್ ಕಾರ್ಯಕ್ರಮ

ಆರೋಗ್ಯ

ಚಿತ್ರದುರ್ಗ:ಜಿಲ್ಲಾ ಪಂಚಾಯತ್ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಂಬಂಧ ಜನವರಿ 18 ರಿಂದ 21ರವರೆಗೆ ಯೂಟ್ಯೂಬ್ ಲೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Chitradurga national women's programme

 

 

 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಸಮ್ಮುಖದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎನ್‍ಜಿಒ ಅವರಿಂದ ಯೂಟ್ಯೂಬ್ ಲೈವ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಯೂಟ್ಯೂಬ್ ಲೈವ್ ಕಾರ್ಯಕ್ರಮದ ವಿವರ ಇಂತಿದೆ. ಜನವರಿ 18ರಂದು ಬೆಳಿಗ್ಗೆ 11ಕ್ಕೆ “ಹೆಣ್ಣು ಮಕ್ಕಳ ಹಕ್ಕು” ಎಂಬ ವಿಷಯ ಕುರಿತು ಯೂಟ್ಯೂಬ್ ಲೈವ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿತ್ರ ಡಾನ್‍ಬಾಸ್ಕೊ ಹಾಗೂ ಬಾಲಕಾರ್ಮಿಕ ಇಲಾಖೆಯ ಉಪನಿರ್ದೇಶಕರು ಭಾಗವಹಿಸಲಿದ್ದಾರೆ. ಜ.19ರಂದು ಬೆಳಿಗ್ಗೆ 11ಕ್ಕೆ “ಪೋಕ್ಸೋ ಕಾಯ್ದೆ” ವಿಷಯ ಕುರಿತು ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ  ಸರ್ಕಾರಿ ವಕೀಲರಾದ ಉಮೇಶ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಭಾಗವಹಿಸಲಿದ್ದಾರೆ. ಜ.20ರಂದು ಬೆಳಿಗ್ಗೆ 11ಕ್ಕೆ “ಆರೋಗ್ಯ ಮತ್ತು ಪೌಷ್ಠಿಕತೆ” ಎಂಬ ವಿಷಯ ಕುರಿತು ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ  ಜಿಲ್ಲಾ ಮತ್ತು ಕುಟುಂಬ ಇಲಾಖೆಯ ಸಿಬ್ಬಂದಿ ಭಾಗವಹಿಸುವರು. ಜ.21ರಂದು ಬೆಳಿಗ್ಗೆ 11ಕ್ಕೆ “ದೌರ್ಜನ್ಯ ತಡೆ” ವಿಷಯ ಕುರಿತು ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಭಾಗವಹಿಸುವರು. ಜ.22ರಂದು ಬೆಳಿಗ್ಗೆ 11ಕ್ಕೆ “ಶಿಕ್ಷಣ ಮತ್ತು ಮಾಹಿತಿ” ಎಂಬ ವಿಷಯ ಕುರಿತ ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹೆಣ್ಣು ಮಕ್ಕಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *