ಚಿತ್ರದುರ್ಗ: ಲಿಂಗಾಯಿತ ವೀರಶೈವ ಸಮೂದಾಯವನ್ನುಒಬಿಸಿಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೆವೆ ಎಂದು ಡಾ. ಶಿವಮೂರ್ತಿಮುರುಘಾ ಶರಣರು ಹೇಳಿದರು.
ಚಿತ್ರದುರ್ಗ ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತದಲ್ಲಿ ಶ್ರೀಮಂತರು ಬಡವರು ಇದ್ದಾರೆ. ಸಂವಿಧಾನ ನೀಡುವ ಮೀಸಲಾತಿಗೆ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಜಾತಿಗಳು ಸೌಲಭ್ಯ ಪಡೆಯುವ ಅವಕಾಶವಿದೆ. ಸಮ ಸಮಾಜದ ಪರಿಕಲ್ಪನೆಗೆ ಪೂರಕವಾಗಿ ಕೆಲಸಗಳು ನಡೆಯುತ್ತಿದೆ. ಒಳಮೀಸಲಾತಿ ವಿಚಾರ ಕೇಳಿ ಬರುತ್ತಿದೆ. ವೀರಶೈವ ಲಿಂಗಾಯತದಲ್ಲಿ 80 ಕ್ಕೂ ಹೆಚ್ಚು ಉಪಜಾತಿಗಳಿವೆ. ಇವುಗಳಲ್ಲಿ ಅನೇಕರು ತುಳಿತಕ್ಕೋಳಗಾಗಿದ್ದಾರೆ. ಅಂಥವರನ್ನು ಗುರುತಿಸಿ ಒಳ.ಮೀಸಲಾತಿನೀಡಿಸುವಲ್ಲಿ ಚರ್ಚೆ ನಡೆಯುತ್ತಿದೆ. ಬಿಬಿಸಿಗೆ ಸೇರಿಸಬೇಕು ಎಂದು ನಾವು ಒತ್ತಡ ಹಾಕುತ್ತಿದ್ದೆವೆ. ಬಡತನ ರೇಖೆಗಿಂತ ಕೆಳಗಿರುವ ಬದುಕನ್ನು ನಡೆಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಎಂದು ಹೇಳುತ್ತೆವೆ. ದೊಡ್ಡ ಜಾತಿ ದೊಡ್ಡ ಧರ್ಮಗಳಲ್ಲಿ ತುಳಿತಕ್ಕೊಳಗಾದವರು ಇದ್ದಾರೆ. ಏರಿಕೆ ಇಳಿಕೆ ಇರುವ ವೇಳೆ ಸರಿಯಾದ ಅಳತೆಗೋಲಿನಲ್ಲಿ ಸರ್ಕಾರ ಹಾಗೂ ತಜ್ಞರು ಸರಿಪಡಿಸಬೇಕಾಗಿದೆ. ಶೇಕಡ 16 ಮೀಸಲಾತಿ ನೀಡುವಂತೆ ನಾವು ಒತ್ತಾಯ ಮಾಡಿದ್ದೇವೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಂದು ಹೇಳಿದರು
ಸಂಯುಕ್ತವಾಣಿ