Chitradurga abhinandane
ಜಿಲ್ಲಾ ಸುದ್ದಿ

ಚಿತ್ರದುರ್ಗ,ನ 07(ಸಂವಾ)-
ಕೋರೋನಾ ಕಾಲದಲ್ಲಿಯೂ ಮಠಕ್ಕೆ ಭಕ್ತರ ಸಾಗರವೇ ಹರಿದು ಬಂದಿತ್ತು. ಜನಸಾಗರವೇ ಹರಿದು ಬಂದರು ಕೂಡ ಶರಣ ಸಂಸ್ಕೃತಿ ಉತ್ಸವದಲ್ಲಿ ಯಾವುದೆ ಅಹಿತಕರ ಘಟನೆ ನಡೆಯಲಿಲ್ಲ. ಎಸ್ ಎಸ್ ಯು ನಲ್ಲಿ ಕೋರೋನಾ ಸೋಂಕು ಹರಡಿಲ್ಲ ಇದು  ನಮಗೆ ಹಾಗೂ ಜಿಲ್ಲಾಡಳಿತಕ್ಕೆ ಸಮಾಧಾನ ತಂದಿದೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅವರು ಮುರುಘಾ ಮಠದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತ ನಾಡಿ, ಅಧಿಕಾರಿಗಳು ಕೂಡ ಆತಂಕ ದೂರವಾಯಿತು. ಇದು ಯಾರಿಗೆ ಅನುಭವಗಳು ಆಗುತ್ತಾ ಹೋಗುತ್ತದೆಯೋ ಅಂತವರು ಯಾವುದಕ್ಕೂ ಅಂಜುವುದಿಲ್ಲ. ಈಗ ತಾನೇ ಮುಗಿದ ಶರಣ ಸಂಸ್ಕೃತಿ ಉತ್ಸವಕ್ಕೂ  ಕೂಡ ಅಡೆ ತಡೆಗಳು ವಿಜ್ಙಗಳು ನಡೆದವು. ಗಣ ಮೇಳ ಕ್ಕೂ ಕೂಡ ಅಹಿತಕರ ಘಟನೆ ನಡೆಯಲಿಲ್ಲ. ಇದಕ್ಕೆ ಕಾರಣ ಅಂದರೆ  ಒಳ್ಳೆಯ ಉದ್ದೇಶವಾಗಿದೆ. ಒಳ್ಳೆಯ ಕಾರ್ಯ ಮಾಡವವರ ಮನಸ್ಸು ಶುದ್ದವಾಗಿರುತ್ತದೆಯೋ ಅಲ್ಲಿ ಯಶಸ್ಸು ತಂದು ಕೊಡುತ್ತದೆ.

ಶರಣ ಸಂಸ್ಕೃತಿ ಉತ್ಸವದಲ್ಲಿಯೂ ಕೂಡ ಅಹಿತರ ಕರ ಘಟನೆ ನಡೆದಿಲ್ಲ  ಎಂದು ಹೇಳಲು ಸಂತಸವಾಗುತ್ತದೆ.

 

 

 

ಅದ್ಯಾವುದೋ ಅಗೋಚರ ಶಕ್ತಿ ದಿವ್ಯ ಶಕ್ತಿ ಸಹಕಾರ ಇದೆ ಇದಕ್ಕಾಗಿ ನಾವು ಯಶಸ್ವಿ ಕೆಲಸಗಳು ನಡೆಯುತ್ತವೆ.ಯಶಸ್ಸಿನ ರಹಸ್ಯ ಏನೆಂದರೆ ಸದುದ್ದೇಶವಾಗಿದೆ. ಸಂಕೀರ್ಣ ಸಂದರ್ಭವನ್ನು ನಿಯಂತ್ರಿಸುವ ಶಕ್ತಿ ನಮ್ಮ ಒಳಗೆ ಇರುವುದರಿಂದ ಅತಂಕಕ್ಕೆ ಒಳಗಾಗದೆ ನಿರಾಂತಂಕವಾಗಿ ನಡೆದುಕೊಂಡು ಹೋಗುತ್ತದೆ ಎಂದು ಅನುಭಗಳನ್ನು ಶ್ರೀಗಳು ಹಂಚಿಕೊಂಡರು.ನಂತರ
ಗ್ರಾಮಾಂತರ ಠಾಣಾ ಸಿಪಿಐ ಬಾಲ ಚಂದ್ರನಾಯ್ಕ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ  ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಜಿಪಂ ಅಧ್ಯಕ್ಷೆ ಶಶಿಕಲಾ  ಸುರೇಶ್ ಬಾಬು ಇನ್ನಿರತೆ ಮುಖಂಡರು ಭಾಗವಹಿಸಿದ್ದರು.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *