ದೊಡ್ಡೇರಿ ಕೆರೆ ಏರಿ ದುರಸ್ತಿ‌ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ತಹಶೀಲ್ದಾರ್

ಜಿಲ್ಲಾ ಸುದ್ದಿ

ಚಳ್ಳಕೆರೆಯಲ್ಲಿ ಸತತ ಮಳೆಯಿಂದಾಗಿ ದೊಡ್ಡೇರಿ ಕೆರೆ ತುಂಬಿದ್ದು ಕೆರೆ ಕೋಡಿ ಬೀಳುವ ಹಂತ ತಲುಪಿದೆ ಈ ಸಮಯದಲ್ಲಿ ಕೆರೆ ಏರಿಯಲ್ಲಿ ಎರಡು ಕಡೆ ನೀರು ಜೋಪಿದೆ ಎನ್ನುವ ಗ್ರಾಮಸ್ಥರು ಶಾಸಕರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ತಹಶೀಲ್ದರ್ ಎನ್.ರಘುಮೂರ್ತಿ ಇಂದು ಉಪ್ಪಾರಹಟ್ಡಿ ಸಮೀಪ ಇರುವ ದೊಡ್ಡೇರಿ ಕೆರೆಗೆ ಬೇಟಿ ನೀಡಿ ನೀರು ಜೋಪುತ್ತಿರುವ ಸ್ಥಳವನ್ನು ಪರಿಶೀಲನೆ ನಡೆಸಿರು.

 

 

 

ಕೆರೆ ಏರಿಯಲ್ಲಿ ಎರಡು ಕಡೆ ನೀರು ಸಣ್ಣದಾಗಿ ನೀರು ಹೋರಬರುತ್ತಿರುವುದು ಕಾಣಿಸಿದೆ ನಂತರ ಪರಿಶೀಲನೆ ನಡೆಸಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಳ ಜೊತೆಗೆ ಮಾತನಾಡಿ ಹೀಗೆ ನೀರು ಜಾಸ್ತಿ ಬಂದರೆ ಕೆರೆ ಏರಿಗೆ ಸಮಸ್ಯೆ ಆಗಬಹುದು ಇದನ್ನು ಈಗಿನಿಂದಲೆ ಸರಿಪಡಿಸಬೇಕು,ನೀರು ಜೋಪುತ್ತಿರುವ ಸ್ಥಳದಲ್ಲಿ ಮರಳಿನ ಚೀಲಗಳನ್ನು ಹಾಕಬೇಕು,ಕೆರೆ ಏರಿಗೆ ಯಾವುದೇ ಅಪಾಯವಾಗದಂತೆ ಎಚ್ಚರ ವಹಿಸಬೇಕು , ಕೆರೆಯಲ್ಲಿ ಶೇಖರಣೆಯಾದ ನೀರು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದರು.

ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ರವಿ,ದೊಡ್ಡೇರಿ ಗ್ರಾಮಪಂಚಾಯಿತಿ ಸದಸ್ಯ ಶ್ರೀಶೈಲ ಪ್ಪ ,ಗ್ರಾಮಲೆಕ್ಕಾಧಿಕಾರಿಗಳಾದ ಅಜಯ್ ಮತ್ತು ಶಿವಮೂರ್ತಿ ಇದ್ದರು.

Leave a Reply

Your email address will not be published. Required fields are marked *