ಸಂಕ್ರಾಂತಿಗೆ ಸಂಪುಟ ರಚನೆಗೆ ಮುಹೂರ್ತ ಫಿಕ್ಸಾ?

ಜಿಲ್ಲಾ ಸುದ್ದಿ ರಾಜಕೀಯ

ಬೆಂಗಳೂರು: ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಫಿಕ್ಸಾ ಮಾಡಲು ಮುಖ್ಯ ಮಂತ್ರಿ ಬಿಎಸ್ ವೈ ದೆಹಲಿಗೆ ಹೋಗಿದ್ದು, ಇದಕ್ಕೆ ಹೈ ಕಮಾಂಡ್ ಅನು‌ಮತಿ ಸಿಗುವುದು ಬಹುತೇಕ ಖಚಿತನಾ?

Chitradurga  can yadiyurappa cabinet expantiion ?

 

 

 

 

ಸಂಫುಟ ವಿಸ್ತರಣೆ ಅಥವ ಪುನಾರಚನೆ ಸಂಬಂಧ ಇಂದು ದೆಹಲಿಗೆ ತೆರಳಿರುವ ಯಡಿಯೂರಪ್ಪ ಮಧ್ಯಾಹ್ನ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ನಂತರ ಪ್ರಧಾನಿ ಮೋದಿ‌ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಭೇಟಿಗಾಗಿ ಸಮಯವನ್ನು ಕೇಳಿದ್ದಾರೆ. ಇಲ್ಲಿ ಅನುಮತಿ‌ ಸಿಕ್ಕರೆ ಸಂಕ್ರಾಂತಿಗೆ ಸಚಿವಾಕಾಂಕ್ಷಿಗಳಿಗೆ ಶುಭ ಸಮಾಚಾರ ಯಡಿಯೂರಪ್ಪ ತರಲಿದ್ದಾರೆ. ಇನ್ನು
ಅತೃಪ್ತ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದಾಗಿನಿಂದಲೂ ಸಂಪುಟ ವಿಸ್ತರಣೆ ಅಥವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಲೆ ಬಂದಿದೆ. ಇನ್ನೇನು ಸಂಪುಟ ವಿಸ್ತರಣೆ ಆಗುತ್ತೆ ಅನ್ನವಷ್ಟರಲ್ಲೆ ಬಿಜೆಪಿ ಕೇಂದ್ರ ನಾಯಕರು ಸಮ್ಮತಿ ಸೂಚಿಸದೆ ಇರೋದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇದೀಗ ಸಂಪುಟ ವಿಸ್ತರಣೆ ಮಾತು ಮುನ್ನೆಲೆಗೆ ಬಂದಿದ್ದು, ಇದಕ್ಕೆ ಅನುಮತಿ ಸಿಕ್ಕರೆ ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಮೂಹೂರ್ತ ಫಿಕ್ಸ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾರ್ಯಾರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಮುನಿರತ್ನ ಇವರುಗಳಿಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದ್ದು, ಇನ್ನು ಹೆಚ್. ವಿಶ್ಚನಾಥ್ ಅವರಿಗೆ ಕೋರ್ಟ್ ಅಡೆ ತಡೆ ಇರೋದರಿಂದ ಕೊಡಲು ಬರುತ್ತಿಲ್ಲ. ಆದರೆ ಉಮೇಶ್ ಖತ್ತಿ, ಚಿತ್ರದುರ್ಗ ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ , ರೇಣುಕಾಚಾರ್ಯ, ಸಿಪಿ ಯೋಗೇಶ್ವರ್ ಕೂಡ ಆಕಾಂಕ್ಷಿಗಳಾಗಿದ್ದು, ಅವರು ಕೂಡ ಮಂತ್ರಿ ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಇದೆಲ್ಲವೂ ಎಷ್ಟರ ಮಟ್ಟಿಗೆ ಸಕಾರವಾಗುತ್ತದೆ. ಇದಕ್ಕೂ ಮೊದಲು ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗುತ್ತ ಎಂಬ ಕುತೂಹಲ ಮೂಡಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *