ಮೊದಲ‌ದಿನದ ಅಧಿವೇಶನಕ್ಕೆ ಗೈರಾದವರೆಷ್ಟು?

ಜಿಲ್ಲಾ ಸುದ್ದಿ ರಾಜಕೀಯ ರಾಜ್ಯ

ಬೆಂಗಳೂರು: ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಮಹತ್ವ ಮತ್ತು ಗಹನವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆದರೆ ಇಂದಿನ ಅಧಿವೇಶನಕ್ಕೆ ಬರೋಬ್ಬರಿ 154 ಜನ ಶಾಸಕರು ಗೈರಾಗಿದ್ದರು.

Chitradurga how many MLAs are absent to session

 

 

 

ಇಂದಿನ‌ ಅಧಿವೇಶನದಲ್ಲಿ ಪ್ರಮುಖವಾಗಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚಿ ತೀರ್ಮಾನಗೊಳಿಸುವ ನಿರ್ಧಾರವನ್ನು ಬೆಳಗಾವಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಕ್ಕೆ ಬರಲಾಗಿತ್ತು. ಅದತಂತೆ ಇಂದಿನ ಅಧಿವೇಶನದಲ್ಲಿ ನೀಷೇಧಿಸಿ ಕಾನೂನು ಜಾರಿಗೊಳಿಸುವ ಎಲ್ಲಾ ಸಿದ್ದತೆಗಳು ನಡೆದಿದ್ದವು. ಆದರೆ ಇಂದು ಸಿಎಂ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.‌ಆಶೋಕ್ ಸೇರಿದಂತೆ 14 ಜನ ಶಾಸಕರು ಮಾತ್ರ ಭಾಗವಹಿಸಿದ್ದು, ಒಟ್ಟು 154 ಜನ ಶಾಸಕರು ಗೈರಾಗಿದ್ದರು.
ಗೈರಾಗಲು ಗ್ರಾಮ ಪಂಚಾಯಿತಿ ಚುನಾವಣೆ ಇರುವುದೇ ಕಾರಣ ಎನ್ನಲಾಗುತ್ತಿದ್ದು, ಗೈರಾಗಿರುವ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲಿ ಶಾಸಕರುಗಳು ಅಧಿವೇಶನ ಡಿ. 15 ಕ್ಕೆ ಮುಗಿಯಬೇಕಾಗಿದ್ದು, ಅದನ್ನು ಡಿ.11ಕ್ಕೆ ಮುಗಿಸುವಂತೆ ಒತ್ತಡ ಹಾಕಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ‌ಭಾಗವಹಿಸಲು ನಿರಾಸಕ್ತಿಯನ್ನು ಶಾಸಕರು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ ನ್ನು ರದ್ದು ಗೊಳಿಸಲಾಗುವುದು ಎಂದು ಆರ್ . ಆಶೋಕ್ ಮಾಧ್ಯಮಗಳಿಗೆ
ತಿಳಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *