ಸೋಮೇಶ್ವರಸ್ವಾಮೀಜಿ ಒಕ್ಕಲಿಗ ಪ್ರತ್ಯೇಕ ರಾಜ್ಯದ ಬೇಡಿಕೆ ಕರವೇ ಗರಂ

ರಾಜ್ಯ

ಮೈಸೂರು: ಒಕ್ಕಲಿಗ ಸಮೂದಾಯಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು   ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥಸ್ವಾಮೀಜಿ ಸರ್ಕಾರದ ಮುಂದಿಟ್ಟಿದ್ದು ಇದೀಗ  ಆಕ್ರೋಶಕ್ಕೆ ಕಾರಣವಾಗಿದೆ.

ಆದಿ ಚುಂಚನಗಿರಿ ಮಠದಲ್ಲಿ‌ ನಡೆದ ಸಭೆಯಲ್ಲಿ ಮಾತನಾಡಿ, ಒಕ್ಕಲಿಗ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ಕೇಳಬೇಕಾದೀತು ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಮೈಸೂರು, ಮಂಡ್ಯ, ಹಾಸನ,ಬೆಂಗಳೂರು, ಭಾಗದಲ್ಲಿ ಒಕ್ಕಲಿಗ ಸಮಾಜ ಹೆಚ್ಚಾಗಿದೆ.  ಒಕ್ಕಲಿಗರಿಂದಲೇ ಸರ್ಕಾರಕ್ಕೆ ಶೇ.60 ರಷ್ಟು ಪಾಲು ಸಿಗುತ್ತಿದೆ. ಬೆಂಗಳೂರು ಮೈಸೂರು ಬೆಳೆಯಲು ಒಕ್ಕಲಿಗ  ಸಮಾಜದವರ ಕೊಡುಗೆ ಬಹಳವಿದೆ. ಇಷ್ಟಾದರೂ ಸಮಾಜಕ್ಕೆ ಕೇವಲ 4 ರಷ್ಡು ಮೀಸಲಾತಿ‌ ನೀಡಲಾಗುತ್ತಿದೆ. ಸರ್ಕಾರ ಇಂತಹ ಅನ್ಯಾಯದ ಬಗ್ಗೆ ಕೂಡಲೇ ಗಮನಹರಿಸಬೇಕು. ಜನಸಂಖ್ಯೆಗೆ ಆಧರಿಸಿ ಶೆ. 15 ರಷ್ಟು ಮೀಸಲಾತಿ‌ ನೀಡಬೇಕು. ಎಂದು ಅವರು ಒತ್ತಾಯಿಸಿದ್ದಾರೆ.Chitradurga separate okkaliga state demand someshwarananda swamiji karave garam
ಸ್ವಾಮೀಜಿ ಅವರ ಒಕ್ಕಲಿಗರ ಪ್ರತ್ಯೇಕ ಬೇಡಿಕೆಗೆ ಕರವೇ ಗರಂ ಆಗಿದ್ದು, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಕಿಡಿ ಕಾರಿದ್ದಾರೆ. ಆಖಂಡ ಕರ್ನಾಟಕ ಒಡೆಯಲು  ನಾನು ಬಿಡುವುದಿಲ್ಲ.

 

 

 

Chitradurga separate okkaliga state demand someshwarananda swamiji karave garam

ಪ್ರತ್ಯೇಕ ಒಕ್ಕಲಿಗ ರಾಜ್ಯ ಕೇಳಿರುವ ಸೋಮೇಶ್ವರ ಸ್ವಾಮೀಜಿ ತಮ್ಮ ಬೇಡಿಕೆಯನ್ನು ವಾಪಸ್ಸು ಪಡೆಯಬೇಕು. ಅಖಂಡ ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ನಾವು ಹೋರಾಡುತ್ತಿದ್ದೆವೆ. ಒಂದು ಗ್ರಾಮವೂ ಕರ್ನಾಟಕದಿಂದ ಬೇರೆಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *