ಎಲ್ಲಾ ಸಮಾಜದ ಹಿತ ಕಾಯಲು ನಾನು ಬದ್ದ: ಶಾಸಕ ರಘುಮೂರ್ತಿ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಲಿಂಗಾಯತ ಸಮಾಜದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದು ಎಲ್ಲಾ ಸಮಾಜದವರ ಹಿತ ಕಾಯಲು ನಾನು ಬದ್ದವಾಗಿದ್ದೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ತುರುವನೂರು ಹೋಬಳಿಯ ಹಿರೇಕೆಬ್ಬಿಗೆರೆ ಗ್ರಾಮದ ಲಿಂಗಾಯತ ಸಮಾಜದ ಮುಖಂಡರು ಇಂದು ಖಾಸಗಿ ಹೊಟೇಲ್ ನಲ್ಲಿ ಶಾಸಕ ಟಿ.ರಘುಮೂರ್ತಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಚಳ್ಳಕೆರೆ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗಿಂತ ದೊಡ್ಡ ಕ್ಷೇತ್ರವಾಗಿದೆ. 261 ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಎಲ್ಲಾ ಹಳ್ಳಿಯಲ್ಲಿ ಸಾಕಷ್ಟು ಬೆಂಬಲವನ್ನು ನನಗೆ ನೀಡುತ್ತಿರುವುದು ನಮ್ಮ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ಆದರೆ ನಾನು ಮಾಡಿದ ಅಭಿವೃದ್ಧಿ ಕಾರ್ಯ ಮೆಚ್ಚಿ ಇಂದು ಹಿರೇಕಬ್ಬಿಗೆರೆ ಲಿಂಗಾಯತ ಸಮಾಜದ ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಶಕ್ತಿ ಬಂದಿದೆ ಎಂದರು.

 

 

 

ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೇನೆ. ಸಮ ಸಮಾಜದ ಒಗ್ಗಟ್ಟಿನ ಮಂತ್ರ ಜಪಿಸಿದ್ದೇನೆ‌. ನಾನು ಕುತಂತ್ರ ರಾಜಕಾರಣ ಮಾಡಲ್ಲ. ಇತರೆ ಪಕ್ಷದ ಮುಖಂಡರು ನಮ್ಮ ಅಭಿವೃದ್ಧಿ ಮೆಚ್ಚಿ ಬಂದರೆ ನಾನು ಆತ್ಮೀಯವಾಗಿ ಬರ ಮಾಡಿಕೊಳ್ಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಜನಪ್ರಿಯ ಯೋಜನೆಗಳ ಮೂಲಕ ಬಡವರ ಪರ ಸರ್ಕಾರಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.

ಎಲ್ಲಾ ಸಮಾಜದವರು ನನಗೆ ಶಕ್ತಿ ನೀಡಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಸ್ವತಃ ಆಸಕ್ತಿ ವಹಿಸಿ ಬರುತ್ತಿದ್ದಾರೆ. ನಾವು ಯಾರಿಗೂ ಆಮಿಷ ಒಡ್ಡಲ್ಲ. ಅಭಿವೃದ್ಧಿಗೆ ಕಾಂಗ್ರೆಸ್ ಮತ ನೀಡಬೇಕು. ಸುಮ್ಮನೆ ತತ್ವ ಸಿದ್ದಾಂತ ಇಲ್ಲದೇ ಸಿಕ್ಕ ಸಿಕ್ಕವರನ್ನ ಹಾರ ಹಾಕಿ ಕರೆದುಕೊಳ್ಳುವ ಕೆಲಸ ನಾವು ಮಾಡಲ್ಲ..ನಮ್ಮ ಪಕ್ಷದ ಅಭಿವೃದ್ಧಿ ಕೆಲಸ ಮತ್ತು ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಬರುತ್ತಿದ್ದಾರೆ. ಕಳೆದ ಬಾರಿ ನಮ್ಮನ್ನು ವಿರೋಧಿಸಿದವರು ನಾವು ಕಳೆದ ಬಾರಿ ತಪ್ಪು ಮಾಡಿದೆವು ಅದು ಮರು ಕಳಿಸಲ್ಲ ನಿಮ್ಮ ಜೊತೆ ನಾವಿದ್ದೇವೆ ಜನರು , ಮುಖಂಡರು ಬೆಂಬಲಿಸುತ್ತಿರುವುದು ಉತ್ಸಾಹವನ್ನು ದ್ವಿಗುಣಗೊಳಿಸಿದೆ ಎಂದು ತಿಳಿಸಿದರು.

ಇಂದು ಹಿರೇಕಬ್ಬಿಗೆರೆ ಲಿಂಗಾಯತ ಸಮಾಜದ ಮುಖಂಡರಾದ ಓಂಕಾರಪ್ಪ, ಶಿವಣ್ಣ, ಕರಿಬಸಪ್ಪ, ದೇವರಾಜ್, ಸ್ವಾಮಿ, ಪ್ರಸನ್ನ, ದಾನಪ್ಪ, ಮಂಜುನಾಥ, ಓಂಕಾರ, ಕಾರ್ತಿಕ, ಶಿವಕುಮಾರ, ಈಶ್ವರ, ಕಲ್ಲೇಶ್, ಶೇಖರಪ್ಪ, ಹೇಮಣ್ಣ, ಮಲ್ಲಿಕಾರ್ಜುನ, ಅರುಣ್ ಕುಮಾರ್, ಮಲ್ಲಿಕಾರ್ಜುನ ಕಾಂಗ್ರೆಸ್ ಸೇರ್ಪಡೆ ಆದರು‌ ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು, ಯುವಕರು ಇದ್ದರು

Leave a Reply

Your email address will not be published. Required fields are marked *