ಚಿತ್ರದುರ್ಗ:ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಈ ಮೊದಲೇ ಜ್ಞಾನೋದಯವಾಗಿ ನಮ್ಮ ಜೊತೆ ಅವರು ಸಿಎಂ ಆಗಿ ಮುಂದುವರೆಯುತ್ತಿದ್ದರು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜಕಾರಣವೂ ಸರ್ಕಲ್ ಇದ್ದಂತೆ ಇದರಲ್ಲಿಎಲ್ಲವೂ ನಡೆಯುತ್ತದೆ. ಆದರೆ ಅದು ನಡೆಯಲಿಲ್ಲ. ಇಲ್ಲದಿದ್ದರೆ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯುತ್ತಿದ್ದರು.ರಾಜ್ಯದಲ್ಲಿ ಕುರುಬ ಸಮೂದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಜನವರಿ 15 ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಯಲಿದೆ. ಇದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿನಡೆಯಲಿದ್ದು, ಫೆ. 17 ರಂದು ಬೆಂಗಳೂರು ತಲುಪಿ ಅಲ್ಲಿ 10 ಲಕ್ಷ ಜನರು ಸೇರಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ. ರಾಜಕಾರಣಿಯಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ ಗಳನ್ನು ನಿಷೇಧಿಸುವ ಬಗ್ಗೆ ನಿರ್ದಾರ ತೆಗೆದುಕೊಂಡಿದ್ದೇವೆ. ಅದನ್ನು ನಾಳೆ ಆರಂಭವಾಗಲಿರುವ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಂಡು ನಿಷೇಧಿಸುತ್ತೆವೆ. ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸಂಯುಕ್ತವಾಣಿ