Author: D Kumaraswamy

ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಿಗೆ ಸಲಹೆ ನೀಡಿದ ಭೋವಿ ಶ್ರೀಗಳು ಚಿತ್ರದುರ್ಗ:ಅ19: ಕರ್ನಾಟಕ ಸರ್ಕಾರ ಭೋವಿ ನಿಗಮದ ನೂತನ ಅಧ್ಯಕ್ಷ ನೆರಲಗುಂಟೆ ಎಂ.ರಾಮಪ್ಪ ಅವರು ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು. ಕಛೇರಿ ಕೆಲಸದ ಜೊತೆಜೊತೆಯಲ್ಲಿ ರಾಜ್ಯಾಪ್ರವಾಸ ಮಾಡಿ ಜನರ ಜೀವನ ಸ್ಥಿತಿಗತಿಯನ್ನು ಖುದ್ದಾಗಿ ಅರ್ಥೈಸಿಕೊಂಡು ಜನರಿಗೆ ಸಹಾಯ ಸ್ಪಂದನೆ ಸಹಕಾರ ಮಾಡಿ ಎಂದು ಶ್ರೀಗಳು ರಾಮಪ್ಪರವರಿಗೆ ಮಾರ್ಗದರ್ಶನ ಮಾಡಿದರು. ಜನರಿಗೆ ಸ್ಪಂದಿಸುವ ಮನೋಭಾವದೊಂದಿಗೆ ಪಕ್ಷಕ್ಕೆ ಶಕ್ತಿತುಂಬುವ ಕಾರ್ಯನ್ಮೂಖಗೊಳ್ಳುವೆ. ಸರ್ಕಾರ ನೀಡುವ ಯೇಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದು ಎಂ ರಾಮಪ್ಪರವರು ತಿಳಿಸಿದರು. ಈ ಸಂದರ್ಭದಲ್ಲಿ ಬಂಡೆ ರುದ್ರಪ್ಪ, ಚಲನಚಿತ್ರ ನಿರ್ಮಾಪಕ ಆನಂದಪ್ಪ, ಡಿ.ಸಿ.ಮೋಹನ, ಈ ಮಂಜುನಾಥ, ವಡ್ಡರ ಸಿದ್ಧವನಹಳ್ಳಿ ಪ್ರಕಾಶ, ಗೌನಳ್ಳಿ ಗೋವಿಂದಪ್ಪ, ಟಿ ನಾಗೇಂದ್ರಪ್ಪ, ಅಂಜಿನಪ್ಪ, ವೆಂಕಟಪ್ಪ, ಶಿವಮೊಗ್ಗ ಧೀರರಾಜು, ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸಮನಿ, ನಿರಂಜನ, ಎಬಿವಿಪಿ…

Read More

ಹೊಳಲ್ಕೆರೆ,ಅ 18 : ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಿ ಆರೋಗ್ಯವಂತರಾಗಿರುವಂತೆ ವಿದ್ಯಾರ್ಥಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು. ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ, ಭರಮಸಿರಿ ಸಂಚಿಕೆ-2 ಬಿಡುಗಡೆಗೊಳಿಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಗಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಅಧ್ಯಾಪಕರುಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಪಡೆಯಬಹುದು. ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಪಡೆದವರಿಗೆ 50 ಸಾವಿರ ರೂ.ಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದೆ. ಅದರಂತೆ ಪ್ರಥಮ ರ್ಯಾಂಕ್ ಗಳಿಸಿದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೋರ್ವರಿಗೆ ಐವತ್ತು ಸಾವಿರ ರೂ.ಗಳನ್ನು ಸ್ವಾತಂತ್ರ್ಯ ದಿನದಂದು ನೀಡಿದೆ. ನಮ್ಮ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಯಾರಾದರೂ ಪ್ರಥಮ ರ್ಯಾಂಕ್ ಪಡೆದರೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಘೋಷಿಸಿದರು. 1994 ರಲ್ಲಿ 10 ಎಕರೆ ಜಾಗ ಖರೀಧಿಸಿ ಈ ಕಾಲೇಜು ಮತ್ತು ಐಟಿಐ. ಕಾಲೇಜು ಕಟ್ಟಿಸಿದೆ.…

Read More

ಹೊಳಲ್ಕೆರೆ,ಅ18 : ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥೈಸಿಕೊಂಡು ಸಮಸ್ಯೆ ಹುಡುಕಿ ಪರಿಹಾರದ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಸಿರಿಗೆರೆ ಹೋಬಳಿಯ ಗೌರಮ್ಮನಹಳ್ಳಿ ಗ್ರಾಮದಲ್ಲಿ 1.55 ಕೋಟಿ ರೂ.ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ದಿ ಕಾಮಗಾರಿ, ನೂತನ ಸಿ.ಸಿ.ರಸ್ತೆ, ಅಂಗನವಾಡಿ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತಾಡಿ, ಮುಸಲ್ಮಾನರಿಗೆ ಪ್ರಾರ್ಥನೆಗೆ ದಾರಿ ಮಾಡಿಕೊಟ್ಟಿದ್ದೇನೆ. ಗಿಡಗಂಟೆ ತೆಗೆಸಿ ಬೋರ್ ಹಾಕಿಸಿ ಸುತ್ತಲೂ ಕಾಂಪೌಂಡ್ ಕಟ್ಟಿಸಿದ್ದೇನೆ. ಶಾದಿ ಮಹಲ್ ಕಟ್ಟವುದಕ್ಕೆ ಸಿಎಂ. ಬಳಿ ಹೋಗಿ ಹಣ ಕೊಡಿ ಎಂದು ಕೇಳಿ 2.5 ಕೋಟಿ ತಂದು ಕೊಟ್ಟಿದ್ದೇನೆ. ಒಟ್ಟು 3.5 ಕೋಟಿ ನೀಡಿದ್ದೇನೆ. ಮುಸಲ್ಮಾನರು ಅಲ್ಲಾನನ್ನು ಪ್ರಾರ್ಥಿಸುತ್ತಾರೆ. ಹಿಂದೂಗಳು ದೇವರನ್ನು ಪೂಜಿಸುತ್ತಾರೆ. ಸಕಲ ಜೀವರಾಶಿಗಳಿಗೂ ಒಳಿತನ್ನೆ ಎಲ್ಲರು ಬಯಸುವುದು. ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌರವಿಸುವವರು ಯಾರು ಎನ್ನುವುದು ಜನರ ಮನದಲ್ಲಿರಬೇಕೆಂದರು. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಹೊಳಲ್ಕೆರೆ ತಾಲ್ಲೂಕು ಹಾಗೂ ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಪ್ರತಿ ಮನೆ…

Read More

ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ: ಶಾಸಕ ಎಂ. ಚಂದ್ರಪ್ಪ ಹೊಳಲ್ಕೆರೆ,ಅ17: ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿದ್ದೀರಿ. ನಿಮ್ಮಗಳ ಋಣ ತೀರಿಸಬೇಕೆಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು. ಭರಮಸಾಗರ ಹೋಬಳಿ ಇಸಾಮುದ್ರ ಗ್ರಾಮದಲ್ಲಿ 6.55 ಕೋಟಿ ರೂ.ವೆಚ್ಚದಲ್ಲಿ ಇಸಾಮುದ್ರ ಗ್ರಾಮದಿಂದ ಭರಮಸಾಗರದವರೆಗೂ ನೂತನ ಡಾಂಬರ್ ರಸ್ತೆ ನಿರ್ಮಾಣ ನೂತನ ಸಮುದಾಯ ಭವನ, ದೇವಸ್ಥಾನ ಮುಂಭಾಗ ಸಿ.ಸಿ.ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿ ಮಾತಾಡಿ, ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಣ ಕೊಡಲಿಲ್ಲ ಎಂದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆಂದಾಗ ತಕ್ಷಣ 650 ಕೋಟಿ ಮಂಜೂರು ಮಾಡಿದರು. ಹಾಗಾಗಿ ಭರಮಸಾಗರ ಕೆರೆ ದೊಡ್ಡ ಸಮುದ್ರದಂತೆ ಕಾಣುವಂತೆ ಅಭಿವೃದ್ದಿಪಡಿಸಿದ್ದೇನೆ. ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳ ಹೂಳು ತೆಗೆಸಿ ಜಾಲಿ ಗಿಡಗಳನ್ನು ನಿರ್ಮೂಲನೆ ಮಾಡಿ ಏರಿ ರಿಪೇರಿ ಮಾಡಿಸಿದ್ದೇನೆ. ಯಾರು ಉಪಕಾರ ಮಾಡಿದ್ದಾರೆ. ಒಳ್ಳೆಯವರ್ಯಾರು, ಕೆಟ್ಟವರ್ಯಾರು ಎನ್ನುವುದನ್ನು ಆಲೋಚಿಸಿ ಚುನಾವಣೆಯಲ್ಲಿ ಮತ ನೀಡಿ. ಎಲ್ಲಿಂದಲೋ ಬಂದು…

Read More

ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಧಿಕಾರಿಯಾಗಿ ಚಿಕ್ಕಪ್ಪನಹಳ್ಳಿ ಷಣ್ಮುಖ ಅಧಿಕಾರ ಸ್ವೀಕಾರ ಚಿತ್ರದುರ್ಗ,ಅ.16: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಚಿತ್ರದುರ್ಗ ಜಿಲ್ಲಾ ಘಟಕದ  ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ನೇಮಕವಾಗಿದ್ದು, ಚುನಾವಣಾ ಕಚೇರಿಯಾದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಓ.ಪರಮೇಶ್ವರಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ಇದುವರೆಗೂ ಕರ್ತವ್ಯನಿರ್ವಹಿಸಿದ್ದು, ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಚುನಾವಣಾ  ಕರ್ತವ್ಯದಿಂದ ಬಿಡುಗಡೆಗೊಂಡಿದ್ದು, 2025-28ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ  ಎನ್ ರವಿಕುಮಾರ್ (ಟೆಲೆಕ್ಸ್ ರವಿ) ನೇಮಕ ಮಾಡಿ ಆದೇಶಿಸಿದ್ದಾರೆ.

Read More

ರೋಗ ತಡೆಗೆ ಕೈತೊಳೆಯುವುದು ಅತ್ಯಂತ ಪರಿಣಾಮಕಾರಿ: ಜಿ.ಪಂ ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮಿ ಚಿತ್ರದುರ್ಗ,:ಅ.15: ರೋಗ ತಡೆಗಟ್ಟುವಿಕೆ, ರೋಗಗಳು ಹರಡುವಿಕೆಯನ್ನು ತಡೆಗಟ್ಟಲು ಕೈ ತೊಳೆಯುವುದು ಅತ್ಯಂತ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ವಾತ್ಸಲ್ಯ ಶಿಶುಪಾಲನಾ ಕೇಂದ್ರದಲ್ಲಿ ಬುಧವಾರ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ವೈಯಕ್ತಿಕ ಸ್ವಚ್ಛತೆ, ಶುಚಿತ್ವ ಹಾಗೂ ಕೈತೊಳೆಯುವ ಮಹತ್ವದ ಕುರಿತು ಅವರು ಮಾತನಾಡಿದರು. ಗ್ರಾಮೀಣ ಸಮುದಾಯ ಮತ್ತು ಮಕ್ಕಳಲ್ಲಿ ಕೈ ನೈರ್ಮಲ್ಯದ ಮಹತ್ವದ ಬಗ್ಗೆ ವ್ಯಾಪಕವಾದ ಅರಿವು ಮೂಡಿಸುವ ಅತ್ಯವಶ್ಯವಿದೆ ಎಂದು ತಿಳಿಸಿದರು. ಶುದ್ಧ ಕುಡಿಯುವ ನೀರು, ನಿರ್ಮಲ ಪರಿಸರ ಹಾಗೂ ಉತ್ತಮ ಸ್ವಚ್ಛತೆಯ ಅಭ್ಯಾಸಗಳು ಜನರ ಜೀವನ ಸುಧಾರಣೆಯ ಪ್ರಮುಖ ಅಂಶಗಳಾಗಿವೆ. ಊಟಕ್ಕೆ ಮೊದಲು, ಶೌಚಕ್ಕೆ ಹೋದ ನಂತರ ಸೋಪಿನಿಂದ ಕೈ ತೊಳೆಯುವ ಅಭ್ಯಾಸವನ್ನು ಸಮುದಾಯದಲ್ಲಿ ವಿಶೇಷವಾಗಿ ಶಾಲೆ ಮತ್ತು ಅಂಗನವಾಡಿ ಮಕ್ಕಳಲ್ಲಿ ಉತ್ತೇಜಿಸುವ ಮಹತ್ವದ ಉದ್ದೇಶದಿಂದ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.…

Read More

ಹಿಂದು ಮಹಾ ಗಣಪತಿ ಕೈಲಿದ್ದ ಭಗವಾಧ್ವಜ ಆರು ಲಕ್ಷಕ್ಕೆ ಹರಾಜು ಚಿತ್ರದುರ್ಗ,13: ಹಿಂದೂ‌ಮಹಾ ಗಣಪತಿ ಶೋಭಾ ಯಾತ್ರೆ ಆರಂಭವಾಗುವ ಮುನ್ನ ಇಂದು ಗಣಪತಿಯ ಕೆಲಸ ವಸ್ತುಗಳನ್ನು‌ ಬಹಿರಂಗ ಹರಾಜು‌ ಹಾಕಲಾಯಿತು. ಬಹಿರಂಗ ಹರಾಜಿನಲ್ಲಿ ಗಣಪತಿಯ ಹೂವಿನ‌ಹಾರ 1 ಲಕ್ಷಕ್ಕೆ ಚಿತ್ರ ಹಳ್ಳಿಯ ಲವ ಕುಮಾರ್ ಪಡೆದುಕೊಂಡರು‌. ಭಗವಾಧ್ವಜವನ್ನು ಬಿಜೆಪಿ ಮುಖಂಡ ಹನುಂಮತೇಗೌಡ 6ಲಕ್ಷ,ತಿರುಪತಿ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ಹಾಗೂ ಗಣಪತಿ ಫಲಾಹಾರವನ್ನು ಐಶ್ವರ್ಯ ಹೊಟೇಲ್ ಮಾಲೀಕ ಶರಣ್ ಕುಮಾರ್ 1.25 ಲಕ್ಷಕ್ಕೆ ಬಹಿರಂಗ ಹರಾಜಿನಲ್ಲಿ‌ ಪಡೆದುಕೊಂಡರು. ವೇದಿಕೆಯಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದಶ್ರೀ, ಶಾಂತವೀರಸ್ವಾಮೀಜಿ,ಮಾದಾರ ಚನ್ನಯ್ಯಶ್ರೀ,ಸರ್ದಾರ್ ಸೇವಾಲಾಲ್ ಶ್ರೀ, ಬಸವ ಮಾಚೀದೇವ ಶ್ರೀ,ವಿಹೆಚ್ ಪಿ ಮುಖಂಡ ಷಡಾಕ್ಷರಪ್ಪ, ಕೂಡಾ ಮಾಜಿ ಅಧ್ಯಕ್ಷ ಬದರಿನಾಥ್,ಡಾ.‌ಮಂಜುನಾಥ್, ಸಂಸದ ಗೋವಿಂದ ಕಾರಜೋಳ, ಎಂಎಲ್ಸಿ ಕೆಎಸ್ ನವೀನ್, ಡಾ. ಸಿದ್ದಾರ್ಥ್ ಚಂದ್ರಶೇಖರ್ ಇದ್ದರು.

Read More

ಚಿತ್ರದುರ್ಗ,ಸೆ11:ನಗರದ ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ಇದೇ 13 ರಂದು ನಡೆಯಲಿದೆ. ಶೋಭಾ ಯಾತ್ರೆಯಲ್ಲಿ 4 ಲಕ್ಷ ಜನ ಸೇರುವ ಅಂದಾಜಿದ್ದು, ಈ ವೇಳೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪೂರ್ವಾನುಮತಿ‌ ಇಲ್ಲದೆ ಡ್ರೋಣ್ ಕ್ಯಾಮರಾ ಬಳಕೆ ಮಾಡುವುದನ್ನು ಸಾರ್ವಜನಿಕ ಹಿತದೃಷ್ಠಿಯಿಂದ ನಿಷೇಧಿಸಿದೆ.ಪೂರ್ವಾನುಮತಿ‌ ಇಲ್ಲದೆ ಅನಧಿಕೃತವಾಗಿ‌ಬಳಕೆ ಮಾಡಿದರೆ, ಡ್ರೋಣ್ ಕ್ಯಾಮರಾ ಜಪ್ತಿ ಮಾಡಿ, ಅದರ ಮಾಲೀಕರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Read More

ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಬಿಗಿ ಬಂದೋಬಸ್ತ್ 3869 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ 30 ವಿಶೇಷ ತುಕಡಿಗಳ ನಿಯೋಜನೆ ***** ಚಿತ್ರದುರ್ಗ,ಸೆ.11:ಚಿತ್ರದುರ್ಗ ನಗರದಲ್ಲಿ ಇದೇ ಸೆ.13ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಶೋಭಾಯಾತ್ರೆಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, 3869 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ 30 ವಿಶೇಷ ತುಕಡಿಗಳ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರದುರ್ಗ ನಗರದಲ್ಲಿ ವ್ಯಾಪಕ ಬಂದೋಬಸ್ತ್  ಮಾಡಿಕೊಳ್ಳಲಾಗಿದೆ, ಚಿತ್ರದುರ್ಗ ಜಿಲ್ಲೆ ಹಾಗೂ ಬೆಂಗಳೂರು ನಗರ ಸೇರಿದಂತೆ ಹೊರಜಿಲ್ಲೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ  9 ಎಎಸ್‍ಪಿ, 28 ಡಿಎಸ್‍ಪಿ, 78 ಪಿಐ, 175 ಪಿಎಸ್‍ಐ, 401 ಎಎಸ್‍ಐ, 2678 ಹೆಚ್.ಸಿ, ಪಿಸಿ, 500 ಹೋಮ್ ಗಾರ್ಡ್ ಹಾಗೂ 16 ತುಕಡಿಗಳು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 14 ತುಕಡಿಗಳು ಜಿಲ್ಲಾ ಸಶಸ್ತ್ರ…

Read More

ಮನೆ ಕಟ್ಟಲು ಲೈಸೆನ್ಸ್ ಗೆ ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾ ಬಲೆಗೆ ಹೊಳಲ್ಕೆರೆ: ಮನೆ ಕಟ್ಟಲು ಲೈಸೆನ್ಸ್ ಕೊಡಲು ಲಂಚದ ಹಣ ಸ್ವೀಕರಿಸುವಾಗ,ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಾಕಿಕೊಂಡ ಘಟನೆ ಹೊಳಲ್ಕೆರೆಯ ಅರೇಹಳ್ಳಿಯಲ್ಲಿ ಬುಧವಾರ ನಡೆದಿದೆ. ಹೊಳಲ್ಕೆರೆ ಅರೇಹಳ್ಳಿ ಗ್ರಾಪಂ ಪಿಡಿಓ ಕೃಷ್ಣಮೂರ್ತಿ ನಾಗರಾಜ್ ಗೆ ಮನೆ ಕಟ್ಟಿಸಲು ಲೈಸೆನ್ಸ್ ಕೊಡಲು 15 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮೊದಲಿ 5ಸಾವಿರ ಪಡೆಯುವಗಾಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಡಿಓ‌ಕೃಷ್ಣ ಮೂರ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More