ಹಿಂದು ಮಹಾ ಗಣಪತಿ ಕೈಲಿದ್ದ ಭಗವಾಧ್ವಜ ಆರು ಲಕ್ಷಕ್ಕೆ ಹರಾಜು
ಚಿತ್ರದುರ್ಗ,13: ಹಿಂದೂಮಹಾ ಗಣಪತಿ ಶೋಭಾ ಯಾತ್ರೆ ಆರಂಭವಾಗುವ ಮುನ್ನ ಇಂದು ಗಣಪತಿಯ ಕೆಲಸ ವಸ್ತುಗಳನ್ನು ಬಹಿರಂಗ ಹರಾಜು ಹಾಕಲಾಯಿತು. ಬಹಿರಂಗ ಹರಾಜಿನಲ್ಲಿ ಗಣಪತಿಯ ಹೂವಿನಹಾರ 1 ಲಕ್ಷಕ್ಕೆ ಚಿತ್ರ ಹಳ್ಳಿಯ ಲವ ಕುಮಾರ್ ಪಡೆದುಕೊಂಡರು. ಭಗವಾಧ್ವಜವನ್ನು ಬಿಜೆಪಿ ಮುಖಂಡ ಹನುಂಮತೇಗೌಡ 6ಲಕ್ಷ,ತಿರುಪತಿ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ಹಾಗೂ ಗಣಪತಿ ಫಲಾಹಾರವನ್ನು ಐಶ್ವರ್ಯ ಹೊಟೇಲ್ ಮಾಲೀಕ ಶರಣ್ ಕುಮಾರ್ 1.25 ಲಕ್ಷಕ್ಕೆ ಬಹಿರಂಗ ಹರಾಜಿನಲ್ಲಿ ಪಡೆದುಕೊಂಡರು. ವೇದಿಕೆಯಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದಶ್ರೀ, ಶಾಂತವೀರಸ್ವಾಮೀಜಿ,ಮಾದಾರ ಚನ್ನಯ್ಯಶ್ರೀ,ಸರ್ದಾರ್ ಸೇವಾಲಾಲ್ ಶ್ರೀ, ಬಸವ ಮಾಚೀದೇವ ಶ್ರೀ,ವಿಹೆಚ್ ಪಿ ಮುಖಂಡ ಷಡಾಕ್ಷರಪ್ಪ, ಕೂಡಾ ಮಾಜಿ ಅಧ್ಯಕ್ಷ ಬದರಿನಾಥ್,ಡಾ.ಮಂಜುನಾಥ್, ಸಂಸದ ಗೋವಿಂದ ಕಾರಜೋಳ, ಎಂಎಲ್ಸಿ ಕೆಎಸ್ ನವೀನ್, ಡಾ. ಸಿದ್ದಾರ್ಥ್ ಚಂದ್ರಶೇಖರ್ ಇದ್ದರು.