ಪಬ್‌ಜಿ ಸೇರಿದಂತೆ 118 ಚೀನಾ ಆ್ಯಪ್ ನಿಷೇಧ

ದೇಶ

ನವದೆಹಲಿ : ದೇಶದ ಸುರಕ್ಷತೆ ಮತ್ತು ರಕ್ಷಣೆಗಾಗಿ ಚೀನಾ ಮೂಲದ 118 ಆ್ಯಪ್‌ಗಳನ್ನ ಕೇಂದ್ರ ಸರ್ಕಾರ ನಿಷೇಧ ಮಾಡಿದೆ.ಪಬ್‌ಜಿ, ಲಿವಿಕ್ ಹಾಗು ವಿ ಚ್ಯಾಟ್ ಸೇರಿದಂತೆ 118 ಆ್ಯಪ್‌ಗಳನ್ನ ಭಾರತ ಬ್ಯಾನ್ ಮಾಡಿದೆ.ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಈ ವರ್ಷದ ಜೂನ್‌ನಲ್ಲಿ ಟಿಕ್‌ಟಾಕ್, ಯುಸಿ ಬ್ರೌಸರ್, ಸೇರಿದಂತೆ ಚೀನಾದ ಲಿಂಕ್‌ ಹೊಂದಿರುವ 59 ಅಪ್ಲಿಕೇಷನ್‌ಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆ್ಯಪ್‌ಗಳನ್ನ ಬ್ಯಾನ್ ಮಾಡಿತ್ತು.

 

 

 

Leave a Reply

Your email address will not be published. Required fields are marked *