ಜನಸ್ಪಂದನ ಇದ್ದಿದ್ದು, ಈಗ ಸಂಕಲ್ಪ‌ಆಗಿದೆ‌: ಡಿಕೆಶಿ‌ ವ್ಯಂಗ್ಯ

ರಾಜ್ಯ

ರಾಹುಲ್ ಗಾಂಧಿಯವರು ಮುಲಾಯಮ್ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು ಎಂಬ ಒತ್ತಡ ಇತ್ತು, ಅವರು ಪಾದಯಾತ್ರೆಯಲ್ಲಿರುವುದರಿಂದ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಲಾಗಿತ್ತು. ಕೊನೆಗೆ ಪ್ರಿಯಾಂಕ ಗಾಂಧಿ ಪಾಲ್ಗೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಅವರು ಹಿರಿಯೂರಿನ ಹರ್ತಿಕೋಟೆಯಲ್ಲಿ ಪಾದಯಾತ್ರೆ ಸಮಯದಲ್ಲಿ‌ಮಾತನಾಡಿದರು. ಪ್ರತೀ ದಿನವೂ ನಮ್ಮ ಪಾದಯಾತ್ರೆ 6 ಗಂಟೆಗೆ ಆಮಭವಾಗುತ್ತಿತ್ತು. ಮಳೆಯ ಕಾರಣ ತಡವಾಗಿದೆ. ಯಾತ್ರೆಯ ವೇಳೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಅವರು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಿದ್ದರು,ಇದೇ 15 ರಂದು ಬಳ್ಳಾರಿಯಲ್ಲಿ ದೊಡ್ಡ ಸಭೆಯು ನಡೆಯುತ್ತದೆ. ಇನ್ನು ಎಐಸಿಸಿ ಅದ್ಯಕ್ಷರ ಚುನಾವಣೆಯಲ್ಲಿ ಯಾತ್ರಾತಿಗಳು ಮತದಾನಾಡಬೇಕಿದೆ. ಅವರಿಗೆ ಅಲ್ಲೆ ಮತದಾನ ಮಾಡಲು ಬೂತ್ ಮಾಡುತ್ತೇವೆ. ಮಲ್ಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.ಪಿಸಿಸಿ ಸದಸ್ಯರಾಗಿ ಅವರು ಬೆಂಗಳೂರಿನಲ್ಲಿ ಮತದಾನ ಮಾಡುತ್ತಾರೆ ಎಂದರು. ಇನ್ನು ಬಿಜೆಪಿಯ ರಾಯಚೂರು ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ವರ್ಷದಿಂದ ಜನ ಸ್ಪಂದನ ಮಾಡುತ್ತಿತ್ತು.‌ಇದೀಗ ಅದು ಸಂಕಲ್ಪ ಆಗಿದೆ ಎಂದು ವ್ಯಂಗ್ಯವಾಡಿದರು. ಮೀಸಲಾತಿ ಬೇಡ ಎಂದು ಹೇಳಲು ನಾವ್ಯಾರು, ನಾಗಮೋಹನ್ ದಾಸ್ ಸಮಿತಿ‌ ರಚನೆ ಕೂಡಾ ನಾವು ಮಾಡಿದ್ದು, ಇಷ್ಟೊತ್ತಿಗೆ ಪಾರ್ಲಿಮೆಂಟ್ ನಲ್ಲಿ ಕೂಡ ಅಂಗೀಕಾರ ಮಾಡಿ‌ ಮುಗಿಸಬೇಕಿತ್ತು. ಕೊನೆಯ ಹಂತದಲ್ಲಿ‌‌ ಅವರು ಮಾಡಲು ಹೊರಟಿದ್ದಾರೆ. ಅದಕ್ಕೂ ನಾವು ಮಾಡಬೇಕು ಎಂದು ಸೂಚಿಸಿದ್ದೇವೆ. ಮೀಸಲಾತಿ ವಿರುದ್ದ ನಾವಿಲ್ಲ, ಬಿಜೆಪಿ ಈಗ ಜನ ಸಂಕಲ್ಪ ಯಾತ್ರೆ ಮಾಡುತ್ತಿದೆ. ಇಷ್ಟು ದಿನ ಸಂಕಲ್ಪ ಮಾಡಿರಲಿಲ್ಲ, ಮೂರು ವರ್ಷದಿಂದ ಸ್ಪಂದನ ಇತ್ತು, ಬಳಿಕ ಸಂಕಲ್ಪವಾಗಿದೆ. ಅಧಿಕಾರ ಇದ್ದಾಗ ಸ್ಪಂದನ ಮತ್ತು ಸಂಕಲ್ಪ ಮಾಡಬಹುದು, ಈಗ ಜನರ ಬಳಿ ಹೋಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

 

 

 

Leave a Reply

Your email address will not be published. Required fields are marked *