ಕೋಟೆ ಪೊಲೀಸರ ಕಾರ್ಯಾಚರಣೆ ಅಕ್ರಮ ಗಾಂಜಾ ಮಾರಾಟ ಸೇವೆ ಇಬ್ಬರ ಬಂಧನ
ಚಿತ್ರದುರ್ಗ,ಆ06; ಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ,ಗಾಂಜಾ ಸೇವನೆ ಮತ್ತು ಅಕ್ರಮ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.ಐದು ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧಿತರನ್ನು ಶೌಕತ್ ಆಲಿ ಮತ್ತು ಮಹಮದ್ ಆಸೀಫ್ ಎಂದು ಗುರುತಿಸಿದೆ. ಆಶ್ರಯ ಬಡಾವಣೆಯ ಸಮೀರ್ ಎನ್ನುವವನ ಮನೆಗೆ ಕೋಟೆ ಠಾಣೆ ಸಿಪಿಐ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಮನೆಯಲ್ಲಿದ್ದ 35 ಸಾವಿರ ಮೌಲ್ಯದ 1ಕೆಜಿ 155 ಗ್ರಾಂ ತೂಕದ ಗಾಂಜಾ ಹಾಗೂ ಮಾರಾಟ ಮಾಡಲು ಸಣ್ಣ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.