Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ

    January 31, 2026

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026
  • ರಾಜ್ಯ

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ದೇಶ»ಲಿಂಗ ಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ
ದೇಶ

ಲಿಂಗ ಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

D KumaraswamyBy D KumaraswamyFebruary 7, 2025No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಮಹಿಳಾ ಕೇಂದ್ರಿತ ಗ್ಯಾರಂಟಿಗಳ ಅನುಷ್ಠಾನ ಲಿಂಗ ಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

ಬೆಂಗಳೂರು: ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ  ಐದು ಗ್ಯಾರಂಟಿ ಯೋಜನೆಗಳ  ಅನುಷ್ಠಾನದ ಮೂಲಕ  ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ  ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ     ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಇಂದು  ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್  ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಗ್ಯಾರಂಟಿ  ಯೋಜನೆಗಳಲ್ಲಿ   ಮಹಿಳೆಯರ ಕೈಗೆ  ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆ ತಡೆಗಟ್ಟಲು ತಲಾವಾರು  ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿ  ನೀಡಿದರು.
ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಹಾಯ ಮಾಡುತ್ತದೆಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆ ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು  ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದೆಂದು ಅಭಿಪ್ರಾಯ ಪಟ್ಟರು.

 

 

ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ

ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ  ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ  ಅಧ್ಯಕ್ಷರು ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ  ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ  ಶ್ಲಾಘಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು.

Share. Facebook Twitter Pinterest LinkedIn Tumblr WhatsApp Email
Previous Articleಚಿತ್ರದುರ್ಗದಲ್ಲಿ ಭೀಕರ ಅಪಘಾತ ಇಬ್ಬರ ಸಾವು
Next Article ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮಾನಸಿಕ‌ ವ್ಯಕ್ತಿ
D Kumaraswamy
  • Tumblr

Related Posts

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ: ಅರ್ಜುನ್, ಕೇಶವ

February 10, 2025

ಎಸ್ಸಿ ಪಟ್ಟಿಯಿಂದ ಎಕೆ ಎಡಿ  ಹೆಸರು ತೆಗೆಯಿರಿ: ಮಾಜಿ ಸಚಿವ ಹೆಚ್.ಆಂಜನೇಯ

February 10, 2025

ವಿಭಿನ್ನ ಚಿತ್ರಕ್ಕಾಗಿ ಮತ್ತೆ ಒಂದಾದ ನಿರ್ದೇಶಕ ಚಿದಂಬರಂ ಹಾಗು ಜೀತು ಮಾಧವನ್

January 2, 2025

ಜೋಜು ಜಾರ್ಜ್ ಅಭಿನಯದ ಮಲಯಾಳಂ ಚಿತ್ರ ಪಣಿ ಚಿತ್ರದ ಟ್ರೇಲರ್ ಗೆ ಎಲ್ಲೆಡೆ ಬಾರಿ  ಮೆಚ್ಚುಗೆ

November 28, 2024
Leave A Reply Cancel Reply

Recent Posts
  • ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ
  • ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ
  • ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.